ಬೆಂಗಳೂರು: ಸ್ವಚ್ಛ ಭಾರತ ಮಿಷನ್–ನಗರ 2.0 ಅಡಿಯಲ್ಲಿ ರಾಯಚೂರು ನಗರವು ದಶಕಗಳಷ್ಟು ಹಳೆಯ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಯಕಲಾಸ್ಪುರದಲ್ಲಿನ 35 ಎಕರೆ ಕಸದ ಡಂಪ್‌ಸೈಟ್‌ನಲ್ಲಿ 62,252 ಮೆಟ್ರಿಕ್ ಟನ್ ಪರಂಪರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಸುಮಾರು 22 ಎಕರೆ ನಗರ ಭೂಮಿಯನ್ನು ಪುನಃ ಬಳಕೆಗೆ ಪಡೆಯಲಾಗಿದೆ. ದೀರ್ಘಕಾಲದಿಂದ ಕಸದ ರಾಶಿಯಿಂದ ದುರ್ವಾಸನೆ, ಲೀಚೇಟ್ ಹಾಗೂ ಮಾಲಿನ್ಯದ ಸಮಸ್ಯೆ ಎದುರಾಗಿತ್ತು. ಇದೀಗ ರಾಯಚೂರು ನಗರ ನಿಗಮವು ಸ್ಥಳವನ್ನು ಹಸಿರು ಪ್ರದೇಶವಾಗಿ ಅಭಿವೃದ್ಧಿಪಡಿಸುತ್ತಿದೆ. 60 ಸಾವಿರ ಸಸಿಗಳಿಂದ ಮಿಯಾವಾಕಿ ಅರಣ್ಯ ಪುನಃಪಡೆದ ಭೂಮಿಯ 5–7 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಪಡಿಸಲಾಗುತ್ತಿದ್ದು, ಜೂನ್ 5ರಿಂದ ಸುಮಾರು 60,000 ಸಸಿಗಳನ್ನು ನೆಡಲಾಗಿದೆ. ಬಿದಿರು ಸೇರಿದಂತೆ ಸ್ಥಳೀಯ ಸಸ್ಯಗಳನ್ನು ಬೆಳೆಸುವ ಮೂಲಕ ಮಣ್ಣಿನ ಗುಣಮಟ್ಟ ಸುಧಾರಣೆ, ಜೀವವೈವಿಧ್ಯ ಸಂರಕ್ಷಣೆ, ಇಂಗಾಲ ಹೀರಿಕೆ ಮತ್ತು ಗಾಳಿಯ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ…
Day: August 19, 2026
ಕರ್ನಾಟಕ ಜಾಗತಿಕ ಸಂಶೋಧನೆ, ಕೌಶಲ್ಯದ ತವರೂರು: ಡಿಕೆಶಿ
ಬೆಂಗಳೂರು: ಕರ್ನಾಟಕವು ಜಾಗತಿಕ ಸಂಶೋಧನೆ ಮತ್ತು ಕೌಶಲ್ಯದ ತವರೂರಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯೊಂದಿಗೆ ಕೌಶಲ್ಯ ಹೊಂದಿರುವುದು ಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಂತ ಮುಖ್ಯ ಎಂದರು. “ನೃಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಕೌಶಲ್ಯ ವಿದ್ಯೆ. ಅಧಿಕಾರ ಕೊನೆಯಾಗಬಹುದು. ಆದರೆ ಕೌಶಲ್ಯ ಮತ್ತು ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ” ಎಂದು ಹೇಳಿದರು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕೌಶಲ್ಯವಿದೆ. ಅಕ್ಕಸಾಲಿಗ, ಮರಗೆಲಸ ಸೇರಿದಂತೆ ಪ್ರತಿಯೊಂದು ವೃತ್ತಿಯಲ್ಲೂ ಕೌಶಲ್ಯ ಅಡಗಿದೆ. ಆಧುನಿಕ ತಂತ್ರಜ್ಞಾನವಿಲ್ಲದ ಕಾಲದಲ್ಲಿಯೇ ಖೈದಿಗಳ ಕೌಶಲ್ಯ ಬಳಸಿಕೊಂಡು ವಿಧಾನಸೌಧದಂತಹ ಭವ್ಯ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ಜಾಗತಿಕ ಐಟಿ ಶಕ್ತಿಯಾಗಿ ಬೆಳೆದಿದ್ದು, ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್‌ಗಳಿದ್ದರೆ ಬೆಂಗಳೂರಿನಲ್ಲಿ ಸುಮಾರು…
ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್
ಬೆಂಗಳೂರು: ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಮತ್ತಷ್ಟು ಚುರುಕಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿರುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೀನುಗಾರರು ಹಾಗೂ ಕರಾವಳಿ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಕೂಡ 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ,…
RRBಗಳ ಸಾಲ ವಿತರಣೆ ಶೇ.10.3ರಷ್ಟು ಹೆಚ್ಚಳ; ₹5.78 ಲಕ್ಷ ಕೋಟಿಗೆ ಏರಿಕೆ
ನವದೆಹಲಿ: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRB) 2025–26ನೇ ಹಣಕಾಸು ವರ್ಷದಲ್ಲಿ ಸಾಲ ವಿತರಣೆಯಲ್ಲಿ ಗಮನಾರ್ಹ ಬೆಳವಣಿಗೆ ದಾಖಲಿಸಿವೆ. RRBಗಳ ಒಟ್ಟು ಸಾಲ ಬಾಕಿ ಶೇ.10.3ರಷ್ಟು ಹೆಚ್ಚಾಗಿ ₹5.78 ಲಕ್ಷ ಕೋಟಿಗೆ ತಲುಪಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. 2024–25ರಲ್ಲಿ ₹5.24 ಲಕ್ಷ ಕೋಟಿಯಷ್ಟಿದ್ದ ಒಟ್ಟು ಸಾಲವು 2025–26ರಲ್ಲಿ ₹5.78 ಲಕ್ಷ ಕೋಟಿಗೆ ಏರಿಕೆಯಾಗಿದೆ. ಗ್ರಾಮೀಣ ಆರ್ಥಿಕತೆ ಮತ್ತು ಆರ್ಥಿಕ ಸೇರ್ಪಡೆಗೆ RRBಗಳ ಕೊಡುಗೆ ಮುಂದುವರಿದಿರುವುದನ್ನು ಈ ಬೆಳವಣಿಗೆ ಪ್ರತಿಬಿಂಬಿಸುತ್ತದೆ. RBI ನಿಗದಿಪಡಿಸಿರುವ ಶೇ.75ರ ಆದ್ಯತಾ ವಲಯ ಸಾಲ (PSL) ಗುರಿಗೆ ಹೋಲಿಸಿದರೆ, RRBಗಳು ಹೊಂದಾಣಿಕೆಯ ನಿವ್ವಳ ಬ್ಯಾಂಕ್ ಸಾಲದ (ANBC) ಸರಾಸರಿ ಶೇ.91.7ರಷ್ಟು ಸಾಧನೆ ಮಾಡಿವೆ. ಬಹುತೇಕ RRBಗಳು ನಿಗದಿತ PSL ಗುರಿ ತಲುಪಿವೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೀಡಿರುವ ಸಾಲ ₹3.78 ಲಕ್ಷ ಕೋಟಿಯಾಗಿದ್ದು, ಒಟ್ಟು PSLನ ಶೇ.77ರಷ್ಟಿದೆ. ಇದರ ಬಹುಪಾಲು ಬೆಳೆ ಕೃಷಿ…
ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ; ರಾಜ್ಯ ರಾಜಕೀಯ ವಲಯದಲ್ಲಿ ಸಂತಾಪ
ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯದ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (67) ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಜಯನಗರದಲ್ಲಿರುವ ಪುತ್ರಿಯ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ 2021ರಿಂದ 2023ರವರೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬ್ರೈನ್ ಟ್ಯೂಮರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೆಲಕಾಲದಿಂದ ಜಯನಗರದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಆರೋಗ್ಯ ಸ್ಥಿತಿ ಗಂಭೀರಗೊಂಡು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಾಗೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ…
₹5 ಕೋಟಿ ಮೌಲ್ಯದ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲ ಪತ್ತೆ: ಓರ್ವ ಬಂಧನ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬೃಹತ್ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಫಾರ್ಮ್‌ಹೌಸ್‌ವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಘಟಕದ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಿಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರಿಂದ ಫಾರ್ಮ್‌ಹೌಸ್‌ನ್ನು ಲೀಸ್‌ಗೆ ಪಡೆದಿದ್ದ ಪ್ರಶಾಂತ್ ಎಂಬಾತ ಕಳೆದ ಒಂದು ವರ್ಷದಿಂದ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಯ ಔಷಧಿಗಳನ್ನು ತರಿಸಿ, ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ಅಂಟಿಸಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ₹600 ಮೌಲ್ಯದ ಔಷಧಿಗಳಿಗೆ ₹6,000ರಿಂದ ₹8,000 ಮೌಲ್ಯದ ಔಷಧಿಗಳ ಲೇಬಲ್‌ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳನ್ನೂ ಇದೇ ರೀತಿ ಮರುಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ…
