ಔರಂಗಾಬಾದ್ ಇನ್ನು ಮುಂದೆ ‘ಛತ್ರಪತಿ ಸಂಭಾಜಿನಗರ’

ಮುಂಬೈ: ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್ ಹೆಸರನ್ನು ಛತ್ರಪತಿ ಸಂಭಾಜಿನಗರ ಎಂದು ಔಪಚಾರಿಕವಾಗಿ ಬದಲಾಯಿಸಿದೆ. ಈ ಹೆಸರು ಬದಲಾವಣೆಯನ್ನು ಒಸ್ಮಾನಾಬಾದ್‌ಗೂ ಅನ್ವಯಿಸಲಾಗಿದೆ.

ಹಲವು ತಿಂಗಳ ಹಿಂದೆ ಸಲ್ಲಿಕೆಯಾದ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಉಪವಿಭಾಗಗಳು, ಗ್ರಾಮಗಳು, ತಾಲೂಕುಗಳು ಮತ್ತು ಜಿಲ್ಲೆಗಳು ಸೇರಿದಂತೆ ವಿವಿಧ ಆಡಳಿತಾತ್ಮಕ ಹಂತಗಳಲ್ಲಿ ಈ ಬದಲಾವಣೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ದೃಢಪಡಿಸಲಾಗಿದೆ. ಈ ಮರುನಾಮಕರಣ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಅನುಮೋದನೆ ನೀಡಿದೆ, ಈ ಪ್ರಸ್ತಾವಿತ ಹೆಸರು ಬದಲಾವಣೆಗಳಿಗೆ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ತಿಳಿಸಿದೆ.

2022 ರ ಜೂನ್ 29 ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದ ಅಂತಿಮ ಕ್ಯಾಬಿನೆಟ್ ಸಭೆಯಲ್ಲಿ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಅನ್ನು ಮರುನಾಮಕರಣ ಮಾಡುವ ಆರಂಭಿಕ ಪ್ರಸ್ತಾವನೆಯು ಅನುಮೋದನೆಯನ್ನು ಪಡೆಯಿತು. ತರುವಾಯ, ಏಕನಾಥ್ ಶಿಂಧೆ ನೇತೃತ್ವದ ಪ್ರಸ್ತುತ ಸರ್ಕಾರವು ಜುಲೈ 2022 ರಲ್ಲಿ ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಅನುಮೋದಿಸಿತು.

Related posts