ಪಿಂಕ್ ಬಾಲ್ ಟೆಸ್ಟ್; ಬಾಂಗ್ಲಾ ಪರದಾಟ

ಕೊಲ್ಕೊತ್ತಾ: ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ನಡೆಯುತ್ತಿರುವ ಮೊತ್ತ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯಾಟ ಗಮನಸೆಳೆದಿದೆ. ಬಾಂಗ್ಲಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 106 ರನ್ ಗಳಿಗೆ ಆಲೌಟಾಗಿದೆ.

ಕೊಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ತಂಡದ ಪಿಂಕ್ ಬಾಲ್ ದಾಳಿಗೆ ತತ್ತರಿಸಿದ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನತ್ತ ಪರೇಡ್ ನಡೆಸಿದರು. ಆರಂಭಿಕ ಆಟಗಾರ ಶದ್ಮಾನ್ ಇಸ್ಲಾಂ ೨೯ ರನ್’ಗಳಿಗೆ ಔಟಾದರೆ , ಲಿಟನ್ ದಾಸ್ ಗಾಯಗೊಂಡು ೨೪ ರನ್ ಗಾಳಿಸುವಷ್ಟರಲ್ಲಿ ನಿರ್ಗಮಿಸಿದರು. ಬಾಂಗ್ಲಾ ತಂಡದ ನಾಲ್ವರು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾದರು.

ಇಶಾಂತ್ ಶರ್ಮಾ ಅವರು 05 ವಿಕೆಟ್ ಪಡೆಯುವ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯಾಟದಲ್ಲಿ ಭಾರತದ ಮೊದಲ ಸಾಧಕನಾಗಿ ಗುರುತಾದರು.

Related posts