‘ಪೂವರಿ’ ಸಂಸ್ಥಾಪಕ ಸಂಪಾದಕ ವಿಜಯಕುಮಾರ್ ಹೆಬ್ಬಾರಬೈಲ್’ಗೆ ತುಳುವರ ಸೆಲ್ಯೂಟ್

ಮಂಗಳೂರು: ಏಕೈಕ ತುಳು ಮಾಸ ಪತ್ರಿಕೆ ‘ಪೂವರಿ’ಯ ಸಂಸ್ಥಾಪಕ ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರ ಸನ್ಮಾನ ಸಮಾರಂಭ ಮಂಗಳೂರಿನಲ್ಲಿ ನಡೆಯಿತು. ‘ಪೂವರಿ’ಗೆ ತುಳುವರ ಸೆಲ್ಯೂಟ್ ತುಳುನಾಡಿನ ಜನರ ಅಭಿರುಚಿಯತ್ತ ಬೆಳಕು ಚೆಲ್ಲುವ, ತುಳು ನಾಡು-ನುಡಿಯ ವೈಭವ ಬಗ್ಗೆ ಬೆಳಕು ಚೆಲ್ಲುವ ಸಂಘಟನಾತ್ಮಕ ಶಕ್ತಿಗೆ ವೇದಿಕೆಯಾಗಿ ‘ಪೂವರಿ’ ತುಳು ಪತ್ರಿಕೆಯನ್ನು  ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಪ್ರಾರಂಭಿಸಿದ್ದರು. ಇವರ ತುಳು ನಾಡು-ನುಡಿಯ ಕೈಂಕರ್ಯವನ್ನು ಗೌರವಿಸಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರ ಸಾಹಿತ್ಯ ಕೃಷಿ ಬಗ್ಗೆ ಗುಣಗಾನ ಮಾಡಿದರು. ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರು ಸಾಹಿತ್ಯ, ಕಲಾ ಸಂಸ್ಕೃತಿಯ ಪ್ರಸಾರಕ. ಅಕ್ಷರ ಮಂತ್ರದ ಮೂಲಕ ತುಳು ಭಾಷಿಗರನ್ನು ಸಂಘಟಿಸುವ ಮಹಾ ಮಾಂತ್ರಿಕ ಎಂದು ಅತಿಥಿಗಳು ಕೊಂಡಾಡಿದರು. ತುಳು ಭಾಷಿಗರ ಪ್ರಾಬಲ್ಯವಿರುವ ದಕ್ಷಿಣಕನ್ನಡ,…

ಕೇಡಿಗಳ ಜೊತೆ ಹೆಣ್ಣಿನ ಸೆಣಸಾಟ; ನಟಿಯ ಸಕತ್ ಫೈಟಿಂಗ್

ಕೇಡಿಗಳ ಜೊತೆ ಹೆಣ್ಣೊಬ್ಬಳು ಯಾವ ರೀತಿ ಫೈಟ್ ಮಾಡಿ ಜಯಿಸಬಹುದು? ಇಲ್ಲಿದೆ ನೋಡಿ ನಟಿಯ ಚಮತ್ಕಾರ. ರಾಮಗೋಪಾಲ ವರ್ಮಾ ನಿರ್ದೇಶನದ ‘ಲಡಕಿ’ ಚಿತ್ರದಲ್ಲಿ ಪೂಜಾ ಬಾಲೆಕರ್ ಫೈಟಿಂಗ್ ಗಮನ ಸೆಳೆದಿದೆ. ಈ ಸಿನಿಮಾದ ವೀಡಿಯೋ ಸಾಂಗ್ ಬಿಡುಗಡೆಯಾಗಿದ್ದು ಹೊಡೆದಾಟದ ದೃಶ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಇನ್ನೂ ದೂರವಾಗಿಲ್ಲ ಕೊರೋನಾ ಆತಂಕ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕಿನ ಪ್ರಮಾಣ ಕಡಿಮೆಯಾದಂತಿಲ್ಲ. ಶನಿವಾರ ರಾಜ್ಯದಲ್ಲಿ 1522 ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರವೊಂದರಲ್ಲೇ ೭೧೯ ಪಾಸಿಟಿವ್ ಕೇಸುಗಳು ಶನಿವಾರ ದೃಢಪಟ್ಟಿದೆ.  ಈ ನಡುವೆ ಒಟ್ಟು 24757 ಸಕ್ರಿಯ ಪ್ರಕರಣಗಳಿದ್ದು, 2133 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ, ಸೋಂಕಿನಿಂದ ಶನಿವಾರ 12 ಮಂದಿ ಮೃತಪಟ್ಟಿದ್ದಾರೆ. ಇಂದಿನವರೆಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 11750. ಕೋವಿಡ್-19 ಖಚಿತ ಪ್ರಕರಣಗಳ ಸಂಖ್ಯೆ 882608. ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1. 37 ಆದರೆ ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ. 0.78. ಈ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಆ.ಸುಧಾಕರ್, ರಾಜ್ಯದಲ್ಲಿ ಶನಿವಾರ 1,522 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,133 ಜನ ಗುಣಮುಖ ಹೊಂದಿದ್ದಾರೆ. ಶನಿವಾರ 1,10,724 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 97,724 (83.74%) RT-PCR ಟೆಸ್ಟ್ ಆಗಿವೆ. ಈವರೆಗೂ…

ಡಿ.14, 15ರಂದು ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಚರ್ಚೆ

ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತು ಎರಡು ದಿನಗಳ ಕಾಲ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಡಿಸೆಂಬರ್ 14 ಮತ್ತು 15ರಂದು ರಾಜ್ಯ ವಿಧಾನಸಭೆಯಲ್ಲಿ ಈ ಚರ್ಚೆ ನಡೆಯಲಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇರಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ. ಡಿಸೆಂಬರ್ 07 ರಿಂದ 15 ರ ವರೆಗೆ ನಡೆಯಲಿರುವ 15 ನೇ ವಿಧಾನಸಭೆಯ ಎಂಟನೇ ಅಧಿವೇಶನದ ಮುಖ್ಯಾಂಶಗಳ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ಒದಗಿಸಿದ ಅವರು, ನವೆಂಬರ್ 25 ಮತ್ತು 26 ರಂದು ಗುಜರಾತ್ ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ಎಲ್ಲಾ…

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಘಟಿಕೋತ್ವವ

ಬೆಂಗಳೂರು: ರಾಜ್ಯದ ಕೃಷಿವಿಶ್ವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು. ಈ ಮೂಲಕವೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕು. ಇದು ಅತೀ ಜರೂರಿನ ಕಾರ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 54ನೇ ಘಟಿಕೋತ್ವವದಲ್ಲಿ ಪದವಿದಧರು, ಸ್ನಾತಕೋತ್ತರ ಪದವಿಧರರು, ಪಿ.ಎಚ್.ಡಿ. ಪಡೆದವರಿಗೆ ಪದವಿಗಳನ್ನು ಪ್ರದಾನ ಮಾಡಿದ ಕೃಷಿವಿಶ್ವದ್ಯಾಲಯಗಳ ಸಹ ಕುಲಾಧಿಪತಿಯೂ ಆಗಿರುವ ಸಚಿವ ಬಿ.ಸಿ. ಪಾಟೀಲ್, ರಾಜ್ಯದಲ್ಲಿ ಆರು ಕೃಷಿ ವಿಶ್ವವಿದ್ಯಾಲಯಗಳಿವೆ. ಇವುಗಳು ಪ್ರತಿವರ್ಷ ತಲಾ ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಯ ಕೃಷಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಬೇಕಿದೆ ಎಂದರು. ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆಯ ವೃಂದ – ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಯಾಗಿರಲಿಲ್ಲ. ನಾನು ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದರ ಬಗ್ಗೆ ಆಸಕ್ತಿ ವಹಿಸಿದೆ. ಅದು ಇತ್ತೀಚೆಗೆ ತಿದ್ದುಪಡಿಯಾಗಿದೆ. ಆಹಾರ ಮತ್ತು…

Uncategorized

ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯ ನೀಡದಿದ್ದಲ್ಲಿ ಉಗ್ರ ಹೋರಾಟ; ಕಾಗಿನೆಲೆ ಶ್ರೀ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯ ನೀಡದಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬ ಸ್ಪಸಂದೇಶವನ್ನು ಪರೋಕ್ಷವಾಗಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ರವಾನಿಸಿದ್ದಾರೆ. ಬೆಳಗಾವಿಯಲ್ಲಿ ಹಾಲುಮತ ಸಮಾಜದ ಮೂಲ ಗುರುಮಠಗಳ, ಗುರು ಪೀಠಗಳಲ್ಲಿರುವ ಒಡೆಯರ್’ಗಳ, ಗುರುವಿನವರ, ತಾತಗಳ ಮಹತ್ವದ ಸಭೆ ಶನಿವಾರ ನಡೆಯಿತು. ಈ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಸಭೆಯಲ್ಲಿ ಮಾತನಾಡಿದ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಈಗಾಗಲೇ ಸಮಾಜದ ಮುಖಂಡರ ನೇತೃತ್ವದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಜೊತೆಗೆ ಬೇಡಿಕೆ ಈಡೇರಿಕೆಗಾಗಿ ಹಂತ ಹಂತವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಜನವರಿ 15ರಂದು ಸೂರ್ಯ ತನ್ನ ದಿಕ್ಕನ್ನು ಬದಲಾಯಿಸುವ ಸಂಕ್ರಮಣ ದಿನ, ಆ ದಿನವೇ ಕುರುಬರ ದಿಕ್ಕನ್ನು ಬದಲಾಯಿಸಲಿ ಎಂಬ ಆಲೋಚನೆ ಇಟ್ಟುಕೊಂಡು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಸುಮಾರು 340 ಕಿ.ಮಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು…

ಬೆಳಗಾವಿ: ಯಾವುದೇ ಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಇಲ್ಲ; ಸಚಿವ ಈಶ್ವರಪ್ಪ

ಬೆಳಗಾವಿ: ಹಿಂದುತ್ವದ ಕೇಂದ್ರವಾದ ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಯಾವುದೇಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಬೇಕಾದರೆ ರಾಯಣ್ಣನ ಶಿಷ್ಯರು, ಶಂಕರಾಚಾರ್ಯರ ಶಿಷ್ಯರಿಗೆ ಅಥವಾ ಚೆನ್ನಮ್ಮಳ ಶಿಷ್ಯರಿಗೆ ಟಿಕೆಟ್ನೀ ಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮುಸ್ಲಿಂ ಸಮಾಜಕ್ಕೆ ಟಿಕೆಟ್ ಕೊಡುವುದಿಲ್ಲ ಎಂ‌ದು ಸ್ಪಷ್ಟಪಡಿಸಿದರು. ಭಾರತೀಯ ಜನತಾ ಪಕ್ಷಕ್ಕೆ ಕುರುಬರ, ಒಕ್ಕಲಿಗರ, ಲಿಂಗಾಯತರ ಅಥವಾ ಬ್ರಾಹ್ಮಣರ ಸಮಾಜದ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ, ನಮ್ಮ ಪಕ್ಷ ಬಿಟ್ಟರೆ ಬೇರೆ ಯಾವ ಪಾರ್ಟಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಿಲ್ಲ ಎಂದರು. ಯಾರು ಜನರ ಮಧ್ಯೆ ಇರುತ್ತಾರೋ ಅವರನ್ನು ಹುಡುಕಿ ಟಿಕೆಟ್ ಕೊಡಲಾಗುತ್ತದೆ. ಅದನ್ನು ಹೈಕಮಾಂಡ ನಿರ್ಧರಿಸುತ್ತದೆ ಎಂದು ಈಶ್ವರಪ್ಪ ಹೇಳಿದರು.

ಸಂತೋಷ್ ಆತ್ಮಹತ್ಯೆಯತ್ನ ಪ್ರಕರಣ; ವೀಡಿಯೋ ಬಿಡುಗಡೆ ಮಾಡಿ; ಕಾಂಗ್ರೆಸ್’ಗೆ ಬಿಜೆಪಿ ಸವಾಲು

ಬೆಳಗಾವಿ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ವೀಡಿಯೋವೊಂದು ಕಾರಣ ಎಂದಿರುವ ಡಿಕೇಶಿ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಮುಠ್ಠಾಳತನದ್ದು, ಈ ರೀತಿ ಹೇಳಿಕೆ ಕೊಡೋಕೆ ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು ಎಂದಿದ್ದಾರೆ. ವಿಡಿಯೊ ಲೀಕ್ ಆಗಿದೆ ಅಂದರೆ ವಿಡಿಯೊ ಇವರ ಹತ್ತಿರ ಇರಬೇಕಲ್ಲ. ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಿ ಎಂದು ಡಿಕೆಶಿಗೆ ಈಶ್ವರಪ್ಪ ಸವಾಲು ಹಾಕಿದರು. ಏನೇ ಅಪಾದನೆ ಮಾಡಬೇಕು ಅಂದರೆ ದಾಖಲೆ ಬೇಕು ಎಂದ ಈಶ್ವರಪ್ಪ, ಎಂಎಲ್ಎ ಯಾರು, ಎಂಎಲ್ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.

ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಡಿಕೆಶಿ ಪೂಜೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಡುಪಿ ಜಿಲ್ಲೆ ಕುಂದಾಪುರದ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಮತ್ತಿತರರು ಹಾಜರಿದ್ದರು.

ಸಂತೋಷ್ ಆತ್ಮಹತ್ಯೆಯತ್ನ ಪ್ರಕರಣ; ಪೊಲೀಸರಿಂದ ಪ್ರಕರಣ ದಾಖಲು

ಬೆಂಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಏನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಬೆಂಗಳೂರಿನ ಸದಾಶಿವ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸಂತೋಷ್ ಅವರು ಶುಕ್ರವಾರ ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ತಕ್ಷಣ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆ ಅಧಿಕಾರಿಗಳು ಎಂಎಲ್ ಸಿ ರಿಪೋರ್ಟ್ ಕೆಳುಹಿದ್ದಾರೆನ್ನಲಾಗಿದ್ದು ಈ ವರದಿ ಆಧರಿಸಿ ಸದಾಶಿವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.