ರೈತರ ಪ್ರತಿಭಟನೆಗೆ ಎದಿರೇಟು; ಅಖಾಡಕ್ಕಿಳಿದ ಬಿಜೆಪಿ

ದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ನೂತನ ಕೃಷಿ ಮಸೂದೆಗಳ ವಿರುದ್ಧ ದೆಹಲಿ ಸೇರಿದಂತೆ ದೇಶಾದ್ಯಂತ ರೈತರು ರೊಚ್ಚಿರುವಂತೆಯೇ ಅದಕ್ಕೆ ಎದಿರೇಟು ನೀಡಲು ಸಂಘ ಪರಿವಾರ ಸಜ್ಜಾಗುತ್ತಿದೆ. ಒಂದೆಡೆ ರೈತರ ಪ್ರತಿಭಟನೆ ಸಾಗಿದ್ದಾರೆ, ಅದಕ್ಕೆ ಪ್ರತಿಯಾಗಿ ಮಸೂದೆ ಬಗ್ಗೆ ಜಾಗೃತಿ ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲಿತ ಸಂಘಟನೆಗಳು ಮುಂದಾಗಿವೆ.

ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಮಸೂದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಉತ್ತರ ಪ್ರದೇಶದ ಹಲವು ಕಡೆ ರೈತರ ಸಭೆಗಳನ್ನು ನಡೆಸಲು ಬಿಜೆಪಿ ತೀರ್ಮಾನಿಸಿದೆ. ಈ ಸಂಬಂಧ ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕರ ಉಸ್ತುವಾರಿಯಲ್ಲಿ ಆಯೋಜಿಸಿರುವ ಕಿಸಾನ್ ಸಮ್ಮೇಳನ ದೇಶದ ಗಮನಸೆಳೆದಿದೆ. ಈ ಕಿಸಾನ್ ಸಮ್ಮೇಳನ ಡಿಸೆಂಬರ್ 18ರವರೆಗೆ ನಡೆಯಲಿದೆ.

Related posts