ಕರಾವಳಿಯಲ್ಲಿ ಕೋಮುಧ್ವೇಷಕ್ಕೆ ಬಲಿಯಾದವರ ಕುಟುಂಬದವರಿಗೆ ತಲಾ 25 ಲಕ್ಷ ರೂ ಪರಿಹಾರ

ಬೆಂಗಳೂರು: ಮಂಗಳೂರು ಸಹಿತ ಕರಾವಳಿಯಲ್ಲಿ ಕೋಮುಧ್ವೇಷಕ್ಕೆ ಬಲಿಯಾದವರ ಕುಟುಂಬದವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ.

ನಾಲ್ವರು ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.

ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಪ್ರಕಟಿಸಿದ್ದು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related posts