ಮಣಿಪುರ ಹಿಂಸಾಚಾರ: ಸಚಿವೆಯ ಬಂಗಲೆಗೆ ದುಷ್ಕರ್ಮಿಗಳಿಂದ ಬೆಂಕಿ

ಗುವಾಹಟಿ: ಮಣಿಪುರ ಹಿಂಸಾಚಾರ ಪರಿಸ್ಥಿತಿಗೆ ಸವಾಲೆಂಬಂತಿದೆ. ಹಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಇದೀಗ ವಿಕೋಪಕ್ಕೆ ತಿರುಗಿದ್ದು, ಸಚಿವೆಯ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ.

ಸಚಿವರ ಅಧಿಕೃತ ನಿವಾಸಕ್ಕೆ ದುಷ್ಕರ್ಮಿಗಳ ಗುಂಪು ಬುಧವಾರ ಬೆಂಕಿ ಹಚ್ಚಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಲಂಫೇಲ್ ಪ್ರದೇಶದಲ್ಲಿರುವ ಕೈಗಾರಿಕಾ ಸಚಿವ ನೆಮ್ಚಾ ಕಿಪ್ಗೆನ್ ಅವರ ಬಂಗಲೆ ಮೇಲೆ ಈ ದಾಳಿ ನಡೆದಿದೆ. ಈ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಭಾರೀ ಅನಾಹುತ ತಪ್ಪಿದೆ.

ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ದದ ಆಕ್ರೋಶವನ್ನು ಕಿಡಿಗೇಡುಗಳು ಈ ರೀತಿ ವ್ಯಕ್ತಪಡಿಸಿದ್ದಾರೆ.

Related posts