ಲೋಕಸಭಾ ಸಮರಕ್ಕೆ ಬಿಜೆಪಿ ರಣವ್ಯೂಹ; ದೇಶಾದ್ಯಂತ 10 ಲಕ್ಷ ಬೂತ್‌ಗಳ ಕಾರ್ಯಕರ್ತರೊಂದಿಗೆ ಪ್ರಧಾನಿ ಮಾತು

ದೆಹಲಿ: ಲೋಕಸಭಾ ಚುನಾವಣೆಗೆ ತಯಾರಿಯಲ್ಲಿ ತೊಡಗಿರುವ ಬಿಜೆಪಿ, ತನ್ನ ಕಾರ್ಯಕರ್ತರನ್ನು ಸನ್ನದ್ದಗೊಳಿಸುತ್ತಿದೆ. ಇದಕ್ಕೆ ಪ್ರಧಾನಿ ಮೋದಿಯವರೇ ಮುನ್ನುಡಿ ಬರೆಯಲಿದ್ದಾರೆ.

ನರೇಂದ್ರ ಮೋದಿ ಅವರು ಜೂನ್ 27ರಂದು ಭೋಪಾಲ್‌ಗೆ ಭೇಟಿ ನೀಡಲಿದ್ದು ಅಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಅಂದೇ ವರ್ಚುವಲ್ ಕಾರ್ಯಕ್ರಮ ಆಯೋಜಿಸಿದ್ದು, ದೇಶಾದ್ಯಂತ 10 ಲಕ್ಷ ಬೂತ್‌ಗಳ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂಬಂಧ ತಯಾರಿ ನಡೆದಿದೆ. ಆ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಸುಮಾರು 64,100 ಬೂತ್‌ಗಳ 38 ಲಕ್ಷ ಕಾರ್ಯಕರ್ತರು ನೇರವಾಗಿ ಭಾಗವಹಿಸುವ ಸಾಧ್ಯತೆಗಳಿವೆ.

Related posts