ಮಂಗಳೂರು: ಬೆಳ್ತಂಗಡಿ ಸಮೀಪದ ನಾರಾವಿ ಗ್ರಾಮದಲ್ಲಿರುವ ಕುಕ್ಕುಜೆ ಸೇತುವೆ ಇಂದು ಸಂಜೆ ದೀಡೀರ್ ಕುಸಿದಿದೆ. ಕುತ್ಲೂರು ಸಮೀಪದ ಅಳಂಬ ಸಂಪರ್ಕಿಸುವ ಕುಕ್ಕುಜೆ ಸೇತುವೆ ಇದಾಗಿದೆ.
ಕುಕ್ಕುಜೆ ಸೇತುವೆ ತೀರ ಹದೆಗಟ್ಟಿದ್ದು, ಕುಸಿಯುವ ಹಂತದಲ್ಲಿತ್ತು. ಸೇತುವೆ ಪಿಲ್ಲರ್‌ನ ತಳಭಾಗದ ಕಾಂಕ್ರೀಟ್ ಸಂಪೂರ್ಣ ಎದ್ದು ಹೋಗಿ ಕಬ್ಬಿಣದ ಸರಳುಗಳು ಹೊರಬಂದಿದ್ದವು. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಸೇತುವೆ ಕುಸಿದು ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿದುಕೊಳ್ಳಬಹುದು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಸುಮಾರು 45 ವರ್ಷಗಳ ಹಿಂದೆ ಕುಕ್ಕುಜೆಯಿಂದ ಅಳಂಬಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 15 ಮೀಟರ್ ಉದ್ದದ ಈ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ದುರಸ್ತಿ ಸಂಬಂಧ ಗ್ರಾಮಸ್ಥರು ಕೂಡಾ ಬಾರಿ ಶಾಸಕರಿಗೆ ಹಾಗು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರು.
ಈ ನಡುವೆ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಶಿಥಿಲಾವಸ್ಥೆಯಲ್ಲಿದ್ದ ಈ ಸೇತುವೆ ಇದೀಗ ಕುಸಿದಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕ ಕಡೆದುಕೊಂಡಿದೆ.
ಇದನ್ನೂ ಓದಿ.. ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್