ಬೆಂಗಳೂರು: ವಿಧಾನ ಪರಿಷತ್ ಫೈಟ್’ಗೆ ಕಾಂಗ್ರೆಸ್ ಸಜ್ಜಾಗಿದೆ. ಹಲವಾರು ಮಂದಿ ಆಕಾಂಕ್ಷಿಗಳ ಪೈಕಿ ನಾಯಕರ ಬಗ್ಗೆ ಅಳೆದೂ ತೂಗಿ ಕಾಂಗ್ರೆಸ್ ಹೈಕಮಾಂಡ್ ಇಬ್ಬರು ಅಭ್ಯರ್ಥಿಗಳ್ಳನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಸೀರ್ ಅಹ್ಮದ್ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಹೆಸರನ್ನು ಅಮತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಸೀರ್ ಅಹ್ಮದ್ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ್ಯರಾಗಿದ್ದರೆ, ಹರಿಪ್ರಸಾದ್ ಹೆಸರು ಕಾಂಗ್ರೆಸ್ ವರಿಷ್ಠರ ಆಯ್ಜೆಯಾಗಿದೆ.
Year: 2020
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಜುಲೈ 1ರಂದು ಭೂಮಿ ಪೂಜೆ
ದೆಹಲಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಜುಲೈ 1ರಂದು ಭೂಮಿ ಪೂಜೆ ನೆರವೇರಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಗುಲ ನಿರ್ಮಾಣದ ಕೈಂಕರ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ. ಬಹುಕಾಲದ ಕಾನೂನು ಸಮರದ ಬಳಿಕ ಅಯೋಧ್ಯೆಯ ಶ್ರೀರಾಮ ದೇಗುಲ ಹಿಂದೂಗಳ ವಶಕ್ಕೆ ಸಿಕ್ಕಿದೆ. ಆ ಮೂಲಕ ದಶಕಗಳಿಂದ ಉದ್ದೇಶಿತ ಭವ್ಯ ರಾಮಮಂದಿರ ನಿರ್ಮಾಣದ ಕನಸು ಗರಿಗೆದರಿತ್ತು. ಈಗಾಗಲೇ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಬೇಕಿತ್ತಾದರೂ ಕೊರೋನಾ ನಿಯಂತ್ರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದುದರಿಂದಾಗಿ ದಿನಾಂಕ ಮುಂದೂಡಲಾಗಿತ್ತು. ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯ ಜುಲೈ 1ರಂದು ನೆರವೇರಿಸಲು ಸಿದ್ದತೆಗಳು ಸಾಗಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಳುತ್ವದಲ್ಲಿ ಸುಮಾರು 70 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಈ ನಡುವೆ, ದೇವಾಲಯ ಸ್ಥಳದ ನೆಲ ಸಮಗೊಳಿಸುವಿಕೆ ಕಾರ್ಯ ಭರದಿಂದ ಸಾಗಿದೆ…
‘ಬ್ರಹ್ಮೋಸ್’ ಕ್ಷಿಪಣಿಗೆ ಪರಿಪೂರ್ಣ ಪ್ರಮಾಣೀಕರಣ; ಭಾರತದ ವಾಯುಪಡೆಗೆ ಭೀಮಬಲ
ದೆಹಲಿ: ಒಂದೆಡೆ ಲಡಾಕ್ ಗಾಡಿಯಲ್ಲಿ ಚೀನಾ ರಗಳೆ, ಇನ್ನೊಂದೆಡೆ ಪಿಒಕೆಯಲ್ಲಿ ಪಾಕ್ ಪಡೆಯ ಕಿರಿಕ್.. ಈ ಆತಂಕದ ಕಾಲದಲ್ಲಿ ಭಾರತದ ರಕ್ಷಣಾ ಕ್ಷೇತ್ರಕ್ಕೆ ಭೀಮಬಲ ಸಿಕ್ಕಿದೆ. ಭಾರತದ ವಾಯುಪಡೆಯ ಮಹತ್ವಾಕಾಂಕ್ಷೆಯ ‘ಬ್ರಹ್ಮೋಸ್’ ಕ್ಷಿಪಣಿಗೆ ಫ್ಲೀಟ್ ರಿಲೀಸ್ ಕ್ಲಿಯರೆನ್ಸ್ ಪ್ರಮಾಣೀಕರಣ ಲಭಿಸಿದೆ. ಹಾಗಾಗಿ ಯಾವುದೇ ಯುದ್ಧ ಸನ್ನಿವೇಶಗಳಲ್ಲಿ ಈ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬಹುದಾಗಿದೆ. ಬ್ರಹ್ಮೋಸ್ ಪ್ರಯೋಗಿಸಲು ವಾಯುಪಡೆಗೆ ಈಗ ಹಾದಿ ಸುಗಮವಾಗಿದೆ ಎಂದು ಬ್ರಹ್ಮೋಸ್ ಕಾರ್ಪೊರೇಷನ್ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ. ಏನಿದು ‘ಬ್ರಹ್ಮೋಸ್’ ಕ್ಷಿಪಣಿ? ಇಂಡೋ-ರಷ್ಯಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಇದಾಗಿದೆ. ಕಳೆದ ಡಿಸೇಂಬರ್’ನಲ್ಲಿ ಒಡಿಶಾದ ಚಂಡಿಪುರದಲ್ಲಿ ಸಂಯೋಜಿತ ಟೆಸ್ಟ್ ಶ್ರೇಣಿಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಭಾರೀ ಪ್ರಮಾಣದ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಭೂದಾಲಿ ಆವೃತ್ತಿ ಇದಾಗಿದೆ. ಸುಖೋಯ್- 30 ಎಂಕೆಐ ಯುದ್ಧ ವಿಮಾನದ ಮೂಲಕ ತಂಜಾವೂರಿನ ಐಎಎಫ್ ವಾಯುನೆಲೆಗೆ ಜನವರಿ ತಿಂಗಳಿನಲ್ಲಿಯೇ ಸೇರ್ಪಡೆಗೊಂಡಿತ್ತು. 300 ಕಿ.ಮೀ. ಗಮ್ಯದ ದಾಳಿ…
ಉಳ್ಳಾಲ ಕರಾವಳಿ ತೀರದಲ್ಲೀಗ ಕಡಲ್ಕೊರೆತದ ಆತಂಕ
ಮಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕರಾವಳಿ ತೀರದಲ್ಲಿ ಕಡಲ್ಕೊರೆತ ಆತಂಕ ಮನೆಮಾಡಿದೆ. ಉಳ್ಳಾಲ ಸಮುದ್ರ ತೀರದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮನೆಯೊಂದು ಸಮುದ್ರ ಪಾಲಾದ ಘಟನೆ ನಡೆದಿದೆ. ಉಲ್ಲ್ಲಾಳ ಸುತ್ತಮುತ್ತಲ ಕಿಲೇರಿಯಾ ನಗರ, ಸೋಮೇಶ್ವರ, ಉಚ್ಚಿಲ, , ಮೊದಲಾದೆಡೆ ೧೦ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಸೋಮೇಶ್ವರ ರುದ್ರಪಾದೆ ಸಮೀಪ ಕೆಲವು ದಿನಗಳಿಂದ ಸಮುದ್ರದ ಅಲೆ ಅಬ್ಬರ ಜೋರಾಗಿದ್ದು ಅಲೆಗಳ ಹೊಡೆತಕ್ಕೆ ಗಳಿಗೆ ತತ್ತರಿಸಿದ್ದ ಮನೆ ಬಿರುಕು ಬಿಟ್ಟಿದ್ದು ಅದು ಈಗ ಸಮುದ್ರ ಪಾಲಾಗಿದೆ. ಕಡಲ್ಕೊರೆತ ತಡೆ ಬಗ್ಗೆ ಶಾಶ್ವತ ಕಾಮಗಾರಿ ಕೈಗೊಳ್ಳುವ ಭರವಸೆ ಸರ್ಕಾರದಿಂದ ಸಿಗುತ್ತಲೇ ಇವೆ. ಆದರೆ ಕಾಮಗಾರಿ ವಿಳಂಬವಾಗುತ್ತಿದೆ. ಹಾಗಾಗಿ ಅವಾಂತರಗಳು ಸಂಭವಿಸುತ್ತಿವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಸಿನಿಮಾ ಪ್ರಕ್ರಿಯೆಗಳಿಗೆ ರಾಜ್ ಪರಿವಾರ ಮುನ್ನುಡಿ; ‘ಫ್ಯಾಮಿಲಿ ಪ್ಯಾಕ್’ ಕೌತುಕ
ಬೆಂಗಳೂರು: ಲಾಕ್’ಡೌನ್ ನಿಯಮಾವಳಿಗಳು ಬಹುತೇಕ ಸಡಿಲವಾಗಿದೆ ಎಂದೇ ಹೇಳಬಹುದು. ಜೊತೆಗೆ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ದೊರೆತಿದ್ದು ಅದಾಗಲೇ ಸಿನಿಮಾ ನಿರ್ಮಾಣ ಪ್ರಕ್ರಿಯೆಗಳಿಗೆ ರಾಜ್ ಪರಿವಾರ ಮುನ್ನುಡಿ ಬರೆದಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಮೊದಲ ಮೋಷನ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿನಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. https://www.youtube.com/watch?v=LAXYNn1hhgU&feature=emb_title ಅರ್ಜುನ್ ಕುಮಾರ್ ಎಸ್ ಈ ‘ಫ್ಯಾಮಿಲಿ ಪ್ಯಾಕ್’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಲಿಖಿತ್ ಶೆಟ್ಟಿ ನಾಯಕನಾಗಿ ಹಾಗೂ ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಲಿದ್ದು, ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್ ಮೊದಲಾದವರು ತೆರೆಹಂಚಿಕೊಳ್ಳಲಿದ್ದಾರೆ.
ಲಡಾಖ್ ಗಡಿಯಲ್ಲಿ ಸಂಘರ್ಷ; 20 ಭಾರತೀಯ ಯೋಧರು, 43 ಚೀನಾ ಪಡೆ ಸೈನಿಕರ ಸಾವು
ದೆಹಲಿ: ಲಡಾಖ್ ಗಡಿಯಲ್ಲಿ ಭಾರತ ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಉಭಯ ರಾಷ್ಟ್ರಗಳ ಯೋಧರ ಮಾರಣಹೋಮ ನಡೆಯುತ್ತಿದ್ದು, ಗಾಲ್ವಾನ್ ಕಣಿವೆಯಲ್ಲಿನ ಮಲ್ಲಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಲಡಾಕ್ ಗಡಿಭಾಗದ ವಿದ್ಯಮಾನಗಳ ಕುರಿತು ಭಾರತೀಯ ಸೇನೆ ಮಾಹಿತಿ ಬಹಿರಂಗಪಡಿಸಿದೆ. ಇನ್ನೊಂದೆಡೆ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾ ಸೇನೆಯ 43 ಸೈನಿಕರು ಸಾವನ್ನಪ್ಪಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಕೊರೋನಾ ನಡುವೆ ”ತಿರುಮಲ ವೈನ್ ಸ್ಟೋರ್’ ಪಜೀತಿಯ ಕೌತುಕ
ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಾಣು ಜಗತ್ತಿನಾದ್ಯಂತ ಮರಣಮೃದಂಗವನ್ನೇ ಭಾರಿಸಿದೆ. ಈ ಭಯಾನಕ ಅಧ್ಯಾಯವನ್ನಾಧರಿಸಿ ರಾಮ್ ಗೋಪಾಲ್ ವರ್ಮಾ ಅವರು ಹಿಂದಿ ಸಿನಿಮಾವನ್ನು ಮಾಡಿ ಗಮನ ಸೆಳೆದಿದ್ದಾರೆ. ಈ ಲಾಕ್’ಡೌನ್ ಸಂದರ್ಭದಲ್ಲಿ ವೈನ್ ಸ್ಟೋರ್’ಗಳಿಲ್ಲದೆ ಮದ್ಯಪ್ರಿಯರು ಪಟ್ಟ ವೇದನೆ ಕೂಡಾ ಅಷ್ಟಿಷ್ಟಲ್ಲ. ಈ ಸಂಗತಿಗಳನ್ನೇ ಮುಂದಿಟ್ಟು ಕನ್ನಡದಲ್ಲಿ ಸಿನಿಮಾವನ್ನು ಮಾಡಲಾಗುತ್ತಿದೆ. ಕಿರಿಕ್ ಕೀರ್ತಿ ಅಭಿನಯದ ‘ತಿರುಮಲ ವೈನ್ ಸ್ಟೋರ್’ ಚಿತ್ರದ ಟೀಸರ್ ಎಲ್ಲರ ಗಮನಸೆಳೆಯುತ್ತಿದೆ. ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’
ರಾಜ್ಯದಲ್ಲಿ ಕೊರೋನಾ ತಲ್ಲಣ; ಮತ್ತೆ 317 ಮಂದಿಯಲ್ಲಿ ಸೋಂಕು
ಕೋವಿಡ್-19 ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇವೆ. ಕರ್ನಾಟಕದಲ್ಲಿ ಮಂಗಳವಾರ ಮತ್ತೆ 317 ಹೊಸ ಪ್ರಕರಣಗಳು ವರದಿಯಾಗಿದ್ದು ಕರುನಾಡಿನ ಜನರಲ್ಲಿ ಆತಂಕ ಹೆಚ್ಚಿದೆ. ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ ಈ ಕುರಿತಂತೆ ಮಾಹಿತಿ ಬಹಿರಂಗಪಡಿಸಿದ್ದು, ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕಿತರ ಸಂಖ್ಯೆ 7530ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ರಾಜ್ಯದಲ್ಲಿ ಸೋಮವಾರ ಹಾಗೂ ಮಂಗಳವಾರ ನಡುವೆ 7 ಸೋಂಕಿತರು ಮೃತಪಟ್ಟಿದ್ದು, ವೈರಸ್ ಗೆ ಬಲಿಯಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ. ಸಂಜೆಯ ಪತ್ರಿಕಾ ಪ್ರಕಟಣೆ 16/06/2020.ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/xpXIW0ToKf@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/SgzR3baR5O — K'taka Health Dept (@DHFWKA) June 16, 2020
ಕೊರೋನಾ ಹಾವಳಿ ‘ಗುಜರಾತ್ ಮಾದರಿ’; ಟ್ವೀಟ್ ಮಾಡಿದರೆ? ಟೀಕಿಸಿದರೇ ರಾಹುಲ್?
ದೆಹಲಿ: ಕೊರೋನಾ ವೈರಾಣು ಹಾವಳಿ ಗುಜರಾತ್ ಮಾದರಿಯೇ? ಇಂಥದ್ದೊಂದು ಅನುಮಾನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟ್ ಮುನ್ನುಡಿ ಬರೆದಿದೆ. ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಸಾವಿನ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದು, ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೆ ಮುನ್ನ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಗುಜರಾತ್ ರಾಜ್ಯದ ಅಭಿವೃದ್ಧಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಬಹುತೇಕ ರಾಜ್ಯಗಳಲ್ಲಿ ‘ಗುಜರಾತ್ ಮಾದರಿ’ ಎಂಬ ಮಂತ್ರ ಪಠಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯ ಈ ಮಂತ್ರವನ್ನೇ ರಾಹುಲ್ ಗಾಂಧೀ ಇದೀಗ ಕೊರೋನಾ ವಿಚಾರವನ್ನು ಮುಂದಿಟ್ಟು ಟ್ವೀಟ್ ಮಾಡಿರಬಹುದೆಂದು ಹೇಳಲಾಗುತ್ತಿದೆ. ಇದೀಗ ಈ ಟ್ವೀಟ್ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. Covid19 mortality rate: Gujarat: 6.25%Maharashtra: 3.73%Rajasthan: 2.32%Punjab: 2.17%Puducherry: 1.98%Jharkhand: 0.5%Chhattisgarh: 0.35% Gujarat Model exposed.https://t.co/ObbYi7oOoD…
ನಟ ಸುಶಾಂತ್ ಆತ್ಮಹತ್ಯೆಯಲ್ಲ ಕೊಲೆ? ಸಿಬಿಐ ತನಿಖೆಗೆ ಸಂಬಂಧಿಗಳ ಆಗ್ರಹ
ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಇದೀಗ ಅನುಮಾನಗಳ ಹುತ್ತ ಬೆಳೆದಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಯಾರೋ ಕೊಲೆ ಮಾಡಿದ್ದಾರೆ’ ಎಂದು ಅವರ ಸೋದರ ಮಾವ ಅನುಮಾನ ವ್ಯಕ್ತಪಡಿಸಿದ್ದಾರೆ. ನಟ ಸುಶಾಂತ್ ಸಾವಿನ ಬಗ್ಗೆ ಅನುಮಾನವಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅವರ ಮಾವ ಒ.ಪಿ.ಸಿಂಗ್ ಮನವಿ ಮಾಡಿದ್ದಾರೆ. ಇದನ್ನೂ ಓದಿ.. ನಟ ಸುಶಾಂತ್ ಕುಟುಂಬದಲ್ಲಿ ಮತ್ತೊಬ್ಬರು ನಿಧನ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬಯಿಯಲ್ಲಿ ಭಾನುವಾರದಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಾವಿನ ಕುರಿತು ಪಟ್ನಾದಲ್ಲಿನ ಅವರ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರಕರಣದ ಕುರಿತು ಹೆಚ್ಚಿನ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ.. ಮದುವೆ ಸಡಗರದಲ್ಲಿ ನಟಿ ಶುಭ ಪೂಂಜಾ; ವರ…
