ಐದು ರಾಜ್ಯಗಳ ಜನರಿಗೆ ಕರ್ನಾಟಕ ಪ್ರವೇಶ ನಿರ್ಬಂಧ; ಪ್ರತಿಪಕ್ಷ ಆಕ್ಷೇಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹೆಚ್ಚು ಸೋಂಕಿತರಿರುವ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಹಾಗೂ ರಾಜಸ್ತಾನದಿಂದ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಗಡಿ ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. . ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಹಾಗೂ ರಾಜಸ್ತಾನದಿಂದ ಬರುವ ಪ್ರಯಾಣಿಕ ವಿಮಾನಗಳನ್ನು ಮುಂದಿನ 15 ದಿನಗಳ ಕಾಲ ನಿರ್ಬಂಧ ವಿಧಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ದೇಶದೊಳಗೆ ಈ ರೀತಿಯ ನಿರ್ಬಂಧ ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ.. ಲಾಕ್’ಡೌನ್-5.0; ಮೇ 31ರ ಮೋದಿ ಮಾತಿನತ್ತ ಎಲ್ಲರ ಚಿತ್ತ   

ಒಂದೇ ದಿನ 6,566 ಮಂದಿಗೆ ಸೋಂಕು; 194 ಮಂದಿ ಸಾವು

ದೆಹಲಿ: ನಹಾರಾಟದಲ್ಲಿ ಕೊರೋನಾ ವೈರಾಣು ಹಾವಳಿ ಸವಾಲಾಗಿ ಪರಿಣಮಿಸಿದ್ದು ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಗುರುವಾರಒಂದೇ ದಿನ 6,566 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ದೇಶದ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು 6,566 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವುದರೊಂದಿಗೆ ಕೊರೋನಾ ಕೇಸ್ ಸಂಖ್ಯೆ 1 ಲಕ್ಷ 58 ಸಾವಿರವನ್ನು ದಾಟಿದೆ. ಇದೇ ವೇಳೆ ನಿನ್ನೆ ಒಂದೇ ದಿನದಲ್ಲಿ 194 ಮಂದಿ ಮೃತಪಟ್ಟಿದ್ದಾರೆಂದು ತಿಳಿಸಿದೆ. ಈ ಮೂಲಕ ಭಾರತದಲ್ಲಿ ಕೊರೋನಾಗೆ ಸಾವನ್ನಪ್ಪಿದವರ ಸಂಖ್ಯೆಯೂ ಸಾವಿನ ಸಂಖ್ಯೆ 4,531ಕ್ಕೆ ತಲುಪಿದೆ. ಅತೀ ಹೆಚ್ಚು ಕೊರೋನಾ ಸೋಂಕಿತ ರಾಜ್ಯಗಳು; ಮಹಾರಾಷ್ಟ್ರ – 56,948 ಕೇಸ್ ತಮಿಳುನಾಡು – 18,545 ಕೇಸ್ ಗುಜರಾತ್ – 15,195, ಕೇಸ್ ದೆಹಲಿ – 15,257 ಕೇಸ್ ಇದನ್ನೂ ಓದಿ.. ಲಾಕ್’ಡೌನ್-5.0; ಮೇ 31ರ…

ಲಾಕ್’ಡೌನ್-5.0; ಮೇ 31ರ ಮೋದಿ ಮಾತಿನತ್ತ ಎಲ್ಲರ ಚಿತ್ತ

ದೆಹಲಿ: ಲಾಕ್’ಡೌನ್ ಜಾರಿಯಲ್ಲಿದ್ದರೂ ಕೊರೋನಾ ಅಟ್ಟಹಾಸ ನಿಂತಿಲ್ಲ. ಹಾಗಾಗಿ ಐದನೇ ಅವಧಿಗೆ ಲಾಕ್’ಡೌನ್ ವಿಸ್ತರಣೆಯಾಗುತ್ತಾ ಎಂಬ ಸಂಶಯ ಮೂಡಿದೆ. ಪ್ರಸ್ತುತ ಜಾರಿಯಲ್ಲಿರುವ ನಾಲ್ಕನೇ ಹಂತದ ಲಾಕ್​ಡೌನ್ ಮೇ 31ರಂದು ಮುಕ್ತಾಯವಾಗಲಿದೆ. ಹಾಗಾಗಿ ಅಂದೇ ಪಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಲಾಕ್​ಡೌನ್​​ ವಿಸ್ತರಣೆ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ. ಒಂದು ಮೂಲದ ಪ್ರಕಾರ ಐದನೇ ಹಂತದಲ್ಲಿ ಜೂನ್ 15 ರವರೆಗೂ ಲಾಕ್​ಡೌನ್​​ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಲಾಕ್​ಡೌನ್​​ ಸಂದರ್ಭದಲ್ಲಿ ಮತ್ತಷ್ಟು ಸಡಿಲಿಕೆ ಇರಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಲಾಕ್’ಡೌನ್ ಕುರಿತಂತೆ ಈಗಾಗಲೇ ಆದೇಶಿಸಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು ಜನತೆ ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, ಲಾಕ್’ಡೌನ್ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಕುರಿತಂತೆ…

ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಸಾವು; ರಾತ್ರಿಯಿಡೀ ಕಾರ್ಯಾಚರಣೆ ವಿಫಲ

ಹೈದರಾಬಾದ್: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ 120 ಅಡಿ ಬೋರ್ವೆಲ್​ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಆಟವಾಡುತ್ತಿದ್ದ ಬಾಲಕ ಸಾಯಿ ವರ್ಧನ್ ಕಾಲು ಜಾರಿ ಬೋರ್’ವೆಲ್’ಗೆ ಬಿದ್ದಿದ್ದ. ಈತನನ್ನು ಉಳಿಸಿಕೊಳ್ಳಲು ಸುದೀರ್ಘ ಕಾರ್ಯಾಚರಣೆ ನಡೆಸಲಾಯಿತಾದರೂ ಪ್ರಯತ್ನ ಸಫಲವಾಗಲಿಲ್ಲ. ರೈತರೊಬ್ಬರು ಕೃಷಿ ಚಟುವಟಿಕೆಗಾಗಿ ಬುಧವಾರ ಬೋರ್ವೆಲ್ ಅನ್ನು 120 ಅಡಿ ಅಗೆಸಿದ್ದರು. ಆದರೆ, ನೀರು ಲಭ್ಯವಾಗಿರಲಿಲ್ಲ. ಸಂಜೆ ಹೊತ್ತಿಗೆ ಆಟವಾಡುತ್ತಿದ್ದ ಬಾಲಕ ಈ ಬೋರ್’ವೆಲ್’ಗೆ ಬಿದ್ದಿದ್ದಾನೆ. ನಿನ್ನೆ ರಾತ್ರಿಯಿಡೀ ಕಾರ್ಯಾರಣೆ ನಡೆಸಿ ನಸುಕಿನ ಜಾವ 4ಗಂಟೆಗೆ ಮಗುವನ್ನು ಮೇಲಕ್ಕೆ ತರಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ.  ಕೆಲವು ದಿನಗಳ ಹಿಂದಷ್ಟೇ ಈ ಬಾಲಕ ತನ್ನ ಅಜ್ಜಿಯ ಮನೆಗೆ ಬಂದಿದ್ದ. ಇದನ್ನೂ ಓದಿ.. ಸಾಮಾಜಿಕ ಜಾಲತಾಣಗಳಲ್ಲಿ ‘ಜೂನಿಯರ್ ರಾಜಾಹುಲಿ’ಗೆ ಸಕತ್ ಲೈಕ್ಸ್   ಸಾಮಾಜಿಕ ಜಾಲತಾಣಗಳಲ್ಲಿ ‘ಜೂನಿಯರ್ ರಾಜಾಹುಲಿ’ಗೆ ಸಕತ್ ಲೈಕ್ಸ್

ಸಾಮಾಜಿಕ ಜಾಲತಾಣಗಳಲ್ಲಿ ‘ಜೂನಿಯರ್ ರಾಜಾಹುಲಿ’ಗೆ ಸಕತ್ ಲೈಕ್ಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿ ಲೋಕವನ್ನು ತನ್ನದಷ್ಟೇ ಆದ ಶೈಲಿಯಲ್ಲಿ ಆಕರ್ಷಿಸುತ್ತಿರುತ್ತಾರೆ. ಅದರಲ್ಲೂ ಕೆಜಿಎಫ್ ಸಿನಿಮಾ ನಂತರವಂತೂ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ‘ಜೂನಿಯರ್ ರಾಜಾಹುಲಿ’ ಮೂಲಕ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಯಶ್ ಅವರ ತಾರಾಪತ್ನಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಕ್ಕಳ ಫೋಟೋವನ್ನು ಹರಿಯಬಿಡುತ್ತಾ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ತನ್ನ ಮುದ್ದು ಕಂದಮ್ಮಗಳ ಫೋಟೋಗಳನ್ನು ಪೋಸ್ಟ್ ಮಾಡಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ. View this post on Instagram A post shared by Radhika Pandit (@iamradhikapandit) ಇನ್‍ಸ್ಟಾಗ್ರಾಂನಲ್ಲಿ ಯಶ್ ಮತ್ತು ಮಗನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ‘ನನ್ನ ನೆಚ್ಚಿನ ಹುಡುಗರು’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಕ್ಯಾಪ್ಶನ್ ಎಲ್ಲರ ಗಮನಕೇಂದ್ರೀಕರಿಸಿದೆ. View this post on Instagram A…

ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’

ಮುಂಬೈ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿಯ ಸನ್ನಿವೇಶವನ್ನೇ ಮುಂದಿಟ್ಟು ಸಿನಿಮಾವನ್ನು ನಿರ್ಮಾಣಮಾಡಲಾಗುತ್ತಿದೆ. ಒಂದಿಲ್ಲೊಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೊರೋನಾ ಕಥಾನಕದ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಕೊರೊನಾ ವೈರಸ್ ಹಾವಳಿ, ಲಾಕ್ಡೌನ್ ಪರಿಸ್ಥಿತಿ, ಜನಸಾಮಾನ್ಯರ ನೋವುಗಳತ್ತ ಈ ಸಿನಿಮಾ ಬೆಳಕು ಚೆಲ್ಲಿದೆ. ಈ ಸಿನಿಮಾ ಟ್ರೇಲರೇ ಕೊರೋನಾ ವಿರುದ್ಧ ಜಾಗೃತಿ ಕಹಳೆ ಉಡುವಂತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಇದನ್ನೂ ಓದಿ.. ‘ಕಾಲವೇ ಮೋಸಗಾರ’; ಹೆಸರಲ್ಲೇ ಒಂದು ಕುತೂಹಲ

‘ಕಾಲವೇ ಮೋಸಗಾರ’; ಹೆಸರಲ್ಲೇ ಒಂದು ಕುತೂಹಲ

ಕಿರಿಕ್ ಪಾರ್ಟಿ ಖ್ಯಾತಿಯ ಶಂಕರ್ ಮೂರ್ತಿ ಹಾಗೂ ಧಾರವಾಹಿ ಕಮಲಿ ಖ್ಯಾತಿಯ ಯಶಸ್ವಿನಿ ರವೀಂದ್ರ ನಟಿಸಿರುವ ‘ಕಾಲವೇ ಮೋಸಗಾರ’ ಸಿನಿಮಾ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹೆಚ್ಚಾಗಿದೆ. ಭಾವಸ್ಪಂದನ ಮತ್ತು ಬಿ ಎಂ ಡಬ್ಲ್ಯೂ ಪ್ರೊಡಕ್ಷನ್ ನಲ್ಲಿ ರಜತ್ ದುರ್ಗೋಜಿ ಸಾಲಂಕೆ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಸಂಜಯ್ ವದತ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಡ್ಡು ಮಾಡುತ್ತಿದೆ. ಭರತ್ ಸಾಗರ್, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ದನ್, ದರ್ಶನ್ ವರ್ನೆಕಾರ್, ಮುರಳಿ ಹಾಸನ್, ಆಶಾ ಸುಜಯ್ ಮೊದಲಾದವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್   

ಲಾಕ್’ಡೌನ್-5.0; ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ

ದೆಹಲಿ: ದೇಶಾದ್ಯಂತ ಈಗಿನ್ನೂ ಕೊರೋನಾ ರಣಕೇಕೆ ಹಾಕುತ್ತಿದೆ. ಮತ್ತೊಂದೆಡೆ ಸುಧೀರ್ಘ ಲಾಕ್’ಡೌನ್’ನಿಂದಾಗಿ ಜಾನ್ ರೋಸಿ ಹೋಗಿದ್ದಾರೆ. ಈ ವರೆಗೂ 4 ಅವಧಿಗಳಲ್ಲಿ ಲಾಕ್’ಡೌನ್ ಪರಿಸ್ಥಿತಿ ಎದುರಿರುವ ಜನರು ಜೂನ್ 1ರ ನಂತರ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ಲಾಕ್’ಡೌನ್ 5ನೇ ಅವಧಿಗೆ ಮುಂದುವರಿಸಲು ಮೋದಿ ತೀರ್ಮಾನಿಸಿದ್ದಾರೆಂಬ ವದಂತಿ ಹಬ್ಬಿದೆ. ಇನ್ನೂ ಕೆಲವರು ಲಾಕ್’ಡೌನ್ ಸಂಪೂರ್ಣ ಸಡಿಲಿಸಲಾಗಿದೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈ ಬಗ್ಗೆ ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದೆ. https://twitter.com/PIBHomeAffairs/status/1265577447916998662  ಇದನ್ನೂ ಓದಿ.. ಸ್ವಾತಂತ್ರ್ಯವೀರನ ಹೆಸರಿಗೆ ಕಾಂಗ್ರೆಸ್, ಜೆಡಿಎಸ್ ವಿರೋಧ   

ಸ್ವಾತಂತ್ರ್ಯವೀರನ ಹೆಸರಿಗೆ ಕಾಂಗ್ರೆಸ್, ಜೆಡಿಎಸ್ ವಿರೋಧ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ನಾಮಕರಣಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 400 ಮೀಟರ್ ಉದ್ಧದ ಮೇಲ್ಸೇತುವೆಯನ್ನು ನಿರ್ಮಿಸಲಾಗಿದ್ದು, ವೀರ ಸಾರ್ವಕರ್ ಜನ್ಮದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಈ ಮೇಲ್ಸೇತುವೆಗೆ ವೀರ ಸಾರ್ವಕರ್ ಅವರ ಹೆಸರಿಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪಿಸಿವೆ. ಈ ಕುರಿತಂತೆ ಟ್ವೀಟ್ ಮಾಡಿರುವ ವಿಧಾನಪಕ್ಷ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ ಎಂದಿದ್ದಾರೆ. ಯಲಹಂಕ‌ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ರಾಜ್ಯದ ಸ್ವಾತಂತ್ರ್ಯಹೋರಾಟಗಾರರೊಬ್ಬರ ಹೆಸರಿಡಬೇಕೆಂದು @CMofKarnataka ಅವರನ್ನು ಆಗ್ರಹಿಸುತ್ತೇನೆ.1/2 —…

ನಾರಾವಿ ಬಳಿ ಕುಸಿದ ಸೇತುವೆ; ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತ

ಮಂಗಳೂರು: ಬೆಳ್ತಂಗಡಿ ಸಮೀಪದ ನಾರಾವಿ ಗ್ರಾಮದಲ್ಲಿರುವ ಕುಕ್ಕುಜೆ ಸೇತುವೆ ಇಂದು ಸಂಜೆ ದೀಡೀರ್ ಕುಸಿದಿದೆ. ಕುತ್ಲೂರು ಸಮೀಪದ ಅಳಂಬ ಸಂಪರ್ಕಿಸುವ ಕುಕ್ಕುಜೆ ಸೇತುವೆ ಇದಾಗಿದೆ. ಕುಕ್ಕುಜೆ ಸೇತುವೆ ತೀರ ಹದೆಗಟ್ಟಿದ್ದು, ಕುಸಿಯುವ ಹಂತದಲ್ಲಿತ್ತು. ಸೇತುವೆ ಪಿಲ್ಲರ್‌ನ ತಳಭಾಗದ ಕಾಂಕ್ರೀಟ್‌ ಸಂಪೂರ್ಣ ಎದ್ದು ಹೋಗಿ ಕಬ್ಬಿಣದ ಸರಳುಗಳು ಹೊರಬಂದಿದ್ದವು. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಸೇತುವೆ ಕುಸಿದು ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿದುಕೊಳ್ಳಬಹುದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸುಮಾರು 45 ವರ್ಷಗಳ ಹಿಂದೆ ಕುಕ್ಕುಜೆಯಿಂದ ಅಳಂಬಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 15 ಮೀಟರ್‌ ಉದ್ದದ ಈ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ದುರಸ್ತಿ ಸಂಬಂಧ ಗ್ರಾಮಸ್ಥರು ಕೂಡಾ ಬಾರಿ ಶಾಸಕರಿಗೆ ಹಾಗು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರು. ಈ ನಡುವೆ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಶಿಥಿಲಾವಸ್ಥೆಯಲ್ಲಿದ್ದ ಈ ಸೇತುವೆ…