ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’

ಮುಂಬೈ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿಯ ಸನ್ನಿವೇಶವನ್ನೇ ಮುಂದಿಟ್ಟು ಸಿನಿಮಾವನ್ನು ನಿರ್ಮಾಣಮಾಡಲಾಗುತ್ತಿದೆ.

ಒಂದಿಲ್ಲೊಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೊರೋನಾ ಕಥಾನಕದ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಕೊರೊನಾ ವೈರಸ್ ಹಾವಳಿ, ಲಾಕ್ಡೌನ್ ಪರಿಸ್ಥಿತಿ, ಜನಸಾಮಾನ್ಯರ ನೋವುಗಳತ್ತ ಈ ಸಿನಿಮಾ ಬೆಳಕು ಚೆಲ್ಲಿದೆ. ಈ ಸಿನಿಮಾ ಟ್ರೇಲರೇ ಕೊರೋನಾ ವಿರುದ್ಧ ಜಾಗೃತಿ ಕಹಳೆ ಉಡುವಂತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಇದನ್ನೂ ಓದಿ.. ‘ಕಾಲವೇ ಮೋಸಗಾರ’; ಹೆಸರಲ್ಲೇ ಒಂದು ಕುತೂಹಲ

Related posts