ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು 6 ತಿಂಗಳು ಮುಂದೂಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 6,012 ಗ್ರಾಮ ಪಂಚಾಯತ್’ಗಳಿದ್ದು, ಬಹುತೇಕ ಗ್ರಾಮ ಪಂಚಾಯತ್’ಗಳ ಅವಧಿ ಜೂನ್-ಜುಲೈರೊಳಗೆ ಅಂತ್ಯಗೊಳ್ಳಲಿದೆ. ಕೊರೋನಾ ಪರಿಣಾಮ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆಯನ್ನು 6 ತಿಂಗಳು ಮುಂದೂಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಗ್ರಾಮ ಪಂಚಾಯತ್’ಗಳಿಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಆಯಾ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಹುತೇಕ ಕಡೆ ಜಿ.ಪಂ. ಮಟ್ಟದ ಅಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ನೂತನ ಆಡಳಿತಾಧಿಕಾರಿಗಳ ಪಟ್ಟಿ ಹೀಗಿದೆ: ಬಾಗಲಕೋಟೆ ಜಿಲ್ಲೆ: ಗುಳೇಗುಡ್ಡ, ರಬಕವಿ-ಬನಹಟ್ಟಿ, ಇಲಕಲ್ ತಾಲೂಕುಗಳಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ. ಬೆಳಗಾವಿ ಜಿಲ್ಲೆ: ನಿಪ್ಪಾಣಿ ತಾಲೂಕು ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ (ಆಡಳಿತ); ಕಾಗವಾಡ, ಮೂಡಲಗಿಗೆ ಆಡಳಿತಾಧಿಕಾರಿಯಾಗಿ ಜಿ.ಪಂ. ಉಪ ಕಾರ್ಯದರ್ಶಿ…
Year: 2020
ಅಫಾನ್ ಚಂಡಮಾರುತದ ಸುಳಿಯಲ್ಲಿ ಪೂರ್ವ ಕರಾವಳಿ; ಸ್ಮಶಾನವಾದ ದೀದಿ ನಾಡು
ಕೋಲ್ಕತಾ: ಅಫಾನ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ತತ್ತರಿಸಿವೆ. ಗಂಟೆಗೆ 190 ಕಿಮೀ ವೇಗದ ಚಂಡಮಾರುತದ ತೀವ್ರತೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಪಶ್ಚಿಮ ಬಂಗಾಲವಂತೂ ಈ ಚಂಡಮಾರುತದ ಹೊಡೆತದಿಂದಾಗಿ ಸಂಪೂರ್ಣವಾಗಿ ನಲುಗಿಹೋಗಿದ್ದು ಮತ್ತೆ ಚೇತರಿಸಿಕೊಳ್ಳಲು ಸುದೀರ್ಘ ಸಮಯವೇ ಬೇಕಾಗಬಹುದು. ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 15 ಮಂದಿ ಕೋಲ್ಕತ್ತಾದಲ್ಲಿಯೇ ಮೃತಪಟ್ಟಿದ್ದಾರೆ. ಅಫಾನ್ ನಿಂದ ಸುಂದರಬನ್ ಪ್ರದೇಶ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ತತ್ತರಿಸಿವೆ. ಹಲವು ಜಿಲ್ಲೆಗಳು ಜಲಾವೃತವಾಗಿದ್ದು ಕೋಲ್ಕತಾ ವಿಮಾನ ನಿಲ್ದಾಣ ಕೆರೆಯಂತಾಗಿದೆ. ಈ ಕಾರಣದಿಂದಾಗಿ ನಿಲ್ದಾಣದಲ್ಲಿನ ಚಟುವಟಿಕೆ ಸ್ತಬ್ಧವಾಗಿದೆ. ಒಡಿಶಾದಲ್ಲಿ ರಾಜ್ಯವೂ ಅಫಾನ್ ಚಂಡಮಾರುತದ ಹೊಡೆತದಿಂದ ತತ್ತರಿಸಿದೆ. ಚಂಡಮಾರುತದ ಮುನ್ಸೂಚನೆ ಲಭ್ಯವಾದ ಸಂದರ್ಭದಲ್ಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಸುಮಾರು 6.58 ಲಕ್ಷ ಮಂದಿಯನ್ನು ಸುರಕ್ಷಿತ…
ಕೊರೋನಾ ಅಬ್ಬರಕ್ಕೆ ಮಹಾರಾಷ್ಟ್ರ ತತ್ತರ; ಸೋಂಕಿತರ ಸಂಖ್ಯೆ 40,000ಕ್ಕೂ ಹೆಚ್ಚು
ಮುಂಬೈ: ದೇಶಾದ್ಯಂತ ಕೊರೋನಾ ಮರಣ ಮೃದಂಗ ಭಾರಿಸುತ್ತಿದ್ದು ಈ ಅಗೋಚರ ವೈರಾಣು ವಿನಿಂದಾಗಿ ವಿವಿಧ ರಾಜ್ಯಗಳು ತತ್ತರಿಸಿವೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯವಂತೂ ಸ್ಮಶಾನ ಮೌನ ಆವರಿಸಿದಂತಿದೆ. ಗುರುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 1,382 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜೊತೆಗೆ ಸೋಂಕು ಕಾಣಿಸಿಕೊಂಡು ಮಹಾರಾಷ್ಟ್ರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4೦ಕ್ಕೂ ಒಂದೇ ದಿನ ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆ ಪ್ರಕಾರ ಮಹಾರಾಷ್ಟ್ರದಲ್ಲಿ 41,000 ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಅದರಲ್ಲೂ ಮುಂಬೈ ನಗರರಲ್ಲಿಯೇ ಬರೋಬ್ಬರಿ 25,000 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ.. ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದಲ್ಲಿ FIR; ಡಿಕೆಶಿ ಗರಂ
ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದಲ್ಲಿ FIR; ಡಿಕೆಶಿ ಗರಂ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಕೇಳಿಬಂದಿದೆ. ಈ ಆರೋಪ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಮೋದಿಯವರು ಪಿಎಂ ಕೇರ್ ಫಂಡ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಪಿಎಂ ಕೇರ್ ಫಂಡ್ ಫ್ರಾಡ್ ಎಂದು ಟ್ವಿಟರ್ ನಲ್ಲಿ ಟೀಕಿಸಲಾಗಿದೆ. ಈ ಮೂಲಕ ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡಲಾಗಿದೆ ಎಂದು ವಕೀಲ ಪ್ರವೀಣ್ ಎಂಬುವವರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಎಎಫ್ಐಆರ್ ದಾಖಲಾಗಿದೆ. ಡಿಕೆಶಿ ಆಕ್ರೋಶ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಕಾರ್ಯಕರ್ತನೊಬ್ಬ ನೀಡಿರುವ ಸುಳ್ಳು ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬೆಳವಣಿಗೆ ಕುರಿತು…
ಕಡಲತಡಿಯಲ್ಲಿ ಒಂದೇ ದಿನ ಬರೋಬ್ಬರಿ 41 ಕೇಸ್; ಕರಾವಳಿ ಜನ ಎಷ್ಟು ಸೇಫ್?
ಮಂಗಳೂರು: ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಲೇ ಇದ್ದು ಮತ್ತೆ ಒಂದೇ ದಿನ ಸೋಂಕಿತರ ನೂರರ ಗಡಿ ದಾಟಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಬಹುಪಾಲು ಸೋಂಕಿತರ ಲೆಕ್ಕ ಕೇಂದ್ರೀಕೃತವಾಗಿರುವುದು ಆತಂಕಕಾರಿ ಸಂಗತಿ. ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದ ವಿದ್ಯಮಾನಗಳನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಒಂದೇ ದಿನದಲ್ಲಿ 116 ಸೋಂಕು ಪ್ರಕರಣಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿದ್ದರೆ, ಇದರಲ್ಲಿ ಕರಾವಳಿಯ ಕೇಸ್’ಗಳು 41. ಉಡುಪಿ – 27 ಹೊಸ ಕೇಸ್ ಉತ್ತರ ಕನ್ನಡ – 9 ಹೊಸ ಕೇಸ್ ದಕ್ಷಿಣ ಕನ್ನಡ – 5 ಹೊಸ ಕೇಸ್ ಒಂದೇ ದಿನ ಇಷ್ಟೊಂದು ಸೋಂಕಿನ ಪ್ರಕರಣಗಳಿಗೆ ಮುಂಬೈ ಟ್ರಾವೆಲ್ ಹಿಸ್ಟರಿಯುಳ್ಳವರು ಹಾಗೂ ಗಲ್ಫ್ ರಾಷ್ಟ್ರಗಳಿಂದ ಬಂದವರು ಕಾರಣ ಎನ್ನಲಾಗಿದೆ. ಈ ನಡುವೆ ದಕ್ಷಿಣಕನ್ನಡದ ಬಂಟ್ವಾಳ ಹಾಗೂ ಉಡುಪಿ ಜಿಲ್ಲೆ ಹೆಬ್ರಿಯಲ್ಲಿನ ಕಂಟೈನ್ಮೆಂಟ್ ಪ್ರದೇಶದಲ್ಲಿ ಗೊಂದಲದ ಸನ್ನಿವೇಶ…
ಬೆಚ್ಚಿ ಬೀಳಿಸಿದ ವಿದ್ಯಮಾನ; ರಾಜ್ಯದಲ್ಲಿ ಒಂದೇ ದಿನ 116 ಕೇಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕುರಿತ ವರದಿಗಳು ಜನರನ್ನು ಬೆಚ್ಚಿ ಬೀಳಿಸುವಂತಿದೆ. ಇದೀಗ ಮತ್ತೆ ಒಂದೇ ದಿನ ನೂರರ ಗಡಿ ದಾಟಿದ ಸಂಖ್ಯೆಗೆ ಗುರವಾರದ ಹೆಲ್ತ್ ಬುಲೆಟಿನ್ ಸಾಕ್ಷಿಯಾಯಿತು. ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದ ವಿದ್ಯಮಾನಗಳನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಒಂದೇ ದಿನದಲ್ಲಿ 116 ಸೋಂಕು ಪ್ರಕರಣಗಳು ದೃಢಪಟ್ಟಿರುವ ಕಳವಳಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಉಡುಪಿ – 27 ಹೊಸ ಕೇಸ್ ಹಾಸನ – 19 ಹೊಸ ಕೇಸ್ ಮಂಡ್ಯ- 14 ಹೊಸ ಕೇಸ್ ಉತ್ತರ ಕನ್ನಡ – 9 ಹೊಸ ಕೇಸ್ ಬಳ್ಳಾರಿ – 7 ಹೊಸ ಕೇಸ್ ಬೆಂಗಳೂರು ನಗರ – 7 ಹೊಸ ಕೇಸ್ ದಕ್ಷಿಣ ಕನ್ನಡ – 5 ಹೊಸ ಕೇಸ್ ಶಿವಮೊಗ್ಗ – 6…
ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕ; ‘ಮೊಟ್ಟೆ ಸುಕ್ಕ’ದ ಹಿಂದಿದೆ ಸ್ವಾದಿಷ್ಟದ ರಹಸ್ಯ
ಕರಾವಳಿ ಮಲಬಾರ್ ಖಾದ್ಯ ಅಂದ್ರೆ ನಾನ್ ವೆಜ್ ಪ್ರಿಯರಿಗೆ ಖುಷಿ. ಕಡಲಲ್ಲಿ ಸಿಗುವ ಮೀನುಗಳಷ್ಟೇ ಅಲ್ಲ ಕೋಳಿ ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕದಲ್ಲೂ ಕಡಲತಡಿಯ ಜನ ಸೂಪರ್. ಅದರಲ್ಲೂ ಕೋಳಿ ಮೊಟ್ಟೆ ಸ್ವಾದಿಷ್ಟ ಸೈ ಹಾಗೂ ಆರೋಗ್ಯಕ್ಕೂ ಜೈ ಎಂಬಂಥದ್ದು. ಇತ್ತೀಚಿನ ದಿನಗಳಲ್ಲಿ ಕರಾವಳಿಯ ಎಗ್ ಕರಿಗೆ ಚೈನೀಸ್ ಸ್ಪರ್ಶವೂ ಸಿಕ್ಕಿದೆ. ಆದರೂ ಕರಾವಳಿಯ ವಿಶಿಷ್ಟ ಸ್ವಾದಿಷ್ಟದ ಮುಂದೆ ಅದ್ಯಾವುದೂ ಸಾಟಿಯಲ್ಲ. ವಿಶಿಷ್ಟ ಸ್ವಾದಿಷ್ಟದ ‘ಮೊಟ್ಟೆ ಸುಕ್ಕ’ ಮಾಡುವ ವಿಧಾನ ಇಲ್ಲಿದೆ.
ಡೆಡ್ಲಿ ಕೊರೊನ ಮದ್ಯೆ ಮರಿ ಜಿರಾಫೆ ದತ್ತು; ವಿಂಗ್ ಕಮಾಂಡರ್ ಜಿ.ಬಿ. ಅತ್ರಿಗೆ ಸೆಲ್ಯೂಟ್
ಬೆಂಗಳೂರು: ನಿವೃತ್ತ ಸೇನಾನಿ, ಸಾಮಾಜಿಕ ಹೋರಾಟಗಾರ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಪ್ರಾಣಿಪ್ರಿಯರ ಸಂತಸಕ್ಕೆ ಕಾರಣರಾಗಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿ ಜಿರಾಫೆ ದತ್ತು ತೆಗೆದುಕೊಂಡ ಹೆಗ್ಗಳಿಕೆ ಗೆ ಅವರು ಪಾತ್ರರಾಗಿದ್ದಾರೆ. ಕೊರೊನ ಮಹಾಮಾರಿ ತಂದೊಡ್ಡಿರುವ ಸಂಕಷ್ಟದ ಸಂಕೋಲೆಯಲ್ಲಿ ಜನಸಾಮಾನ್ಯರು ಸಿಲುಕಿದ್ದು ಅದರ ಪರಿಣಾಮವಾಗಿ ಉದ್ಯಾನವನಗಳಲ್ಲಿನ ಮೂಕ ಪ್ರಾಣಿಗಳ ಬದುಕೂ ತತ್ತರಿಸಿದೆ. ಪರಿಸ್ಥಿತಿಯ ಬಲವಾದ ಹೊಡೆತಕ್ಕೊಳಗಾಗಿರುವ ಈ ಪ್ರಾಣಿಗಳ ಮೂಕ ವೇದನೆ ಯಾರಿಗೂ ಕೇಳಿಸುತ್ತಿಲ್ಲ. ಬನ್ನೇರುಘಟ್ಟ ಸಹಿತ ದೇಶದ ಪ್ರಮುಖ ಜೂಗಳ ಸ್ಥಿತಿ ಚಿಂತಾಜನಕವಾಗಿದೆ. ಇಂತಹಾ ಸಂದರ್ಭದಲ್ಲಿ ವಾಯುಪಡೆಯ ನಿವೃತ್ತ ಸೇನಾನಿ ಜಿ.ಬಿ.ಅತ್ರಿಯವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಜಿರಾಫೆ ಮರಿಯನ್ನು ದತ್ತು ಪಡೆದು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ತನ್ನ ನಿವೃತ್ತಿ ನಂತರ ಸಾಮಾಜಿಕ ಕಳಕಳಿ ವಿಚಾರ ಹಾಗೂ ಸಾಮಾಜಿಕ ಹೋರಾಟ ಮೂಲಕ ಜನಸ್ನೇಹಿ ಬದುಕಿನತ್ತ ಒಲವು ತೋರಿದವರು. ಆರ್ಟಿಐ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾ ಹಲವಾರು…
ಮೊನ್ನೆ 99, ನಿನ್ನೆ 149 ಕೊರೋನಾ ಕೇಸ್.. ಕರ್ನಾಟಕದಲ್ಲಿ ಇಂದು ಎಷ್ಟು ಗೊತ್ತಾ?
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಸೋಮವಾರ 99 ಕೇಸ್ ಪತ್ತೆಯಾದರೆ, ಮಂಗಳವಾರ 149 ಮಂದಿ ಸಿಂಕಿಗೊಳಗಾದ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿತ್ತು. ಇದೀಗ ಬುಧವಾರ ಬೆಳಿಗ್ಗೆ ಮತ್ತೆ 63 ಪಾಸಿಟಿವ್ ಕೇಸ್’ಗಳು ಹೊಸದಾಗಿ ಪತ್ತೆಯಾಗಿವೆ. ಮಂಗಳವಾರ ಸಂಜೆ ನಂತರ ಬುಧವಾರ ಮಧ್ಯಾಹ್ನದ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 63 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿರುವ ಸಂಗತಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಹೇಳಿದೆ. ಹಾಸನದಲ್ಲಿ 21 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ಮಂಡ್ಯಾದಲ್ಲಿ ಈ ಸಂಖ್ಯೆ 8ಕ್ಕೆ ಇಳಿದಿದೆ. ಕೋವಿಡ್19: ಮಧ್ಯಾಹ್ನದ ವರದಿ20/05/2020#KarnatakaFightsCorona #IndiaFightsCoronavirus pic.twitter.com/ZkF9gWCsS5 — B Sriramulu (Modi Ka Parivar) (@sriramulubjp) May 20, 2020 ಹಾಸನ – 21 ಹೊಸ ಕೇಸ್ ಬೀದರ್ – 10 ಹೊಸ ಕೇಸ್ ಮಂಡ್ಯ – 8 ಹೊಸ…
“ಆ ಅಂಬೆಗಾಲು.. ಮುದ್ದಾದ ಮೊದಲುಗಳು..” ಇದು ಮಗಳಿಗಾಗಿ ಕಿಚ್ಚನ ಹಾಡು..
ಬೆಂಗಳೂರು: ಕನ್ನಡ ಸಿನಿಲೋಕದ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಭಿಮಾನಿಗಳು ಈ ವಿಚಾರದಲ್ಲಿ ಕಾತುರರಾಗಿದ್ದಾರೆ ಕಿಚ್ಚ ಸುದೀಪ್ ಹರಿಯಬಿಟ್ಟಿರುವ ಸುದ್ದಿಯೇ ಬೇರೆ. ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು,, ನನ್ನ ಮಗಳೀಗ ,,ಹದಿನಾರು ವರುಷ. ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ಕನಸು ನೀನು ನಿನ್ನಿಂದಲೇ ಕಲಿಯುವ ಕೂಸು ನಾನು, ಆಸೆಬುರುಕ ಅಪ್ಪ ನಾನು, ಮತ್ತೆ ಮಗುವಾಗು ನೀನು. ನಾಡು ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್‍ಡೌನ್ ಸುಳಿಯಲ್ಲಿದೆ. ಅದಾಗಲೇ ಸುದೀಪ್ ಕೂಡಾ ತನ್ನ ಮುದ್ದಿನ ಮಗಳ ಬಗ್ಗೆ ಕವನಗಳ ಸಾಲುಗಳನ್ನು ಹೆಣೆದಿದ್ದಾರೆ. ಈ ಪೈಕಿ ಸಾಲೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ತಾನೊಬ್ಬ ಆಸೆಬುರುಕ ಅಪ್ಪ.. ನನಗಾಗಿ ಮತ್ತೆ ಮಗುವಾಗು ನೀನು.. ಎಂದು ಕೋರುತ್ತಾ ಮುದ್ದು ಮಗಳಿಗೆ ಹುಟ್ಟುಹಬ್ಬ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ..…
