NEP ಜಟಾಪಟಿ: ಕಾಂಗ್ರೆಸ್ ವಿರುದ್ದ ಬಿಜೆಪಿ ಆಕ್ರೋಶ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಇಲ್ಲಿನ ರಾಜ್ಯ ಸರಕಾರದ ರಾಜಕೀಯಪ್ರೇರಿತ ನಿರ್ಧಾರದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ ಗೊತ್ತಿಲ್ಲ. ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ವಿವರಿಸಿದರು. ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ. ತಯಾರಿ, ಅಧ್ಯಯನ, ಚರ್ಚೆ ಇಲ್ಲದೆ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೊನೆಗೊಳಿಸುತ್ತೇವೆ ಎನ್ನುವ, 2024ರಿಂದ ರಾಜ್ಯ ಶಿಕ್ಷಣ…

ಈಗ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟ್ ಸಹ ಬರಲ್ಲ

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದ್ದು ಈಗ ಮತ್ತೊಮ್ಮೆ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟು ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್‌ ಶೆಟ್ಟರ್‌, ರಾಜ್ಯದಲ್ಲಿ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ಈಗ ಚುನಾವಣಾ ನಡೆದರೆ ಬಿಜೆಪಿಗೆ 66 ಅಲ್ಲ 40 ಸೀಟ್ ಸಹ ಬರಲ್ಲ. ವಿಜಯೇಂದ್ರ ಅಲ್ಲ, ಯಾರೂ ಅಧ್ಯಕ್ಷರಾದ್ರೂ ಬಿಜೆಪಿಯನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದರು. ರಾಜಕೀಯ ಉದ್ದೇಶಕ್ಕೆ ಸಿಬಿಐ ಐಟಿ ಇಡಿ ದಾಳಿಗಳು ನಡೆಯುತ್ತಿವೆ. ಹಾಗಾಗಿ ಸಿಬಿಐ ಐಟಿ ಇಡಿ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಬಣ್ಣಿಸಿದ ಶೆಟ್ಟರ್, ಈವರೆಗೆ ನಡೆದಿರುವ ಐಟಿ ಮತ್ತು ಇಡಿ ದಾಳಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿ ದಾಳಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಹಾಸನ ಬಳಿ ಮದುವೆ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ಅಪಹರಣ

ಹಾಸನ: ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಎಂಬವರನ್ನು ಶಾಲೆ ಮುಂಭಾಗದಿಂದಲೇ ಕಿಡಿಗೇಡಿಗಳು ಅಪಹರಿಸಿದ್ದಾರೆ. ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ ಆಕೆಯ ಸಂಬಂಧಿಯೇ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ರಾಮು ಎಂಬಾತ ಈ ಯುವತಿಯ ಮನೆಗೆ ತೆರಳಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ ಎನ್ನಲಾಗಿದೆ. ಆದರೆ ಮದುವೆಗೆ ಅರ್ಪಿತಾ ಹಾಗೂ ಮನೆಯವರು ಒಪ್ಪಿಕೊಂಡಿಲ್ಲ. ಈ ದ್ವೇಷದಿಂದ ಈ ಅಪಹರಣ ನಡೆದಿರಬಹುದು ಎಂದು ಶಿಕ್ಷಕಿಯ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ

ತೆಲಂಗಾಣದಲ್ಲಿ ಭರ್ಜರಿ ಮತದಾನ; BRS ನಾಯಕಿ ಕವಿತಾ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆ ದೂರು

ಹೈದರಾಬಾದ್: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಅಂತಿಮ ಹಂತದಲ್ಲಿದ್ದು ತೆಲಂಗಾಣದಲ್ಲಿ ಗುರುವಾರ ಭರ್ಜರಿ ಮತದಾನವಾಗಿದೆ. ಇದೇ ವೇಳೆ ರಾಜಕೀಯ ನಾಯಕರಿಂದ ನೀತಿ ಸಂಹಿತೆ ಉಲ್ಲಂಘನೆಯ ಆರೋಪವೂ ಕೇಳಿಬಂದಿದೆ. ಮತದಾನದ ದಿನದಂದು ‘ಮತ ಕೇಳುವ’ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಬಿಆರ್‌ಎಸ್ ನಾಯಕಿ ಕೆ ಕವಿತಾ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ತೆಲಂಗಾಣ ಕಾಂಗ್ರೆಸ್ ನಾಯಕ ನಿರಂಜನ್ ಅವರು ಗುರುವಾರ ದೂರು ದಾಖಲಿಸಿದ್ದಾರೆ. ಕವಿತಾ ಅವರು ಗುರುವಾರ ಬಂಜಾರಾ ಹಿಲ್ಸ್‌ನ ಡಿಎವಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬಿಆರ್‌ಎಸ್‌ಗೆ ಮತ ಹಾಕುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ನಿರಂಜನ್ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ

ಬೆಂಗಳೂರು ‘ಕಂಬಳ’ದಲ್ಲಿ ಪದಕ ಗೆದ್ದಿದ್ದು ಪುತ್ತೂರಿನ ಕೋಣಗಳು; ನಾಯಕನಾಗಿ ಮಿಂಚಿದ್ದು ‘ಜೈ ತುಳುನಾಡು’ ಕಿಶೋರ್ ಭಂಡಾರಿ

ಮಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ‘ಕಂಬಳ’ ಇಡೀ ದೇಶದ ಗಮನಸೆಳೆಯಿತು. ತುಳುನಾಡಿಗೆ ಸೀಮಿತ ಎಂಬಂತಿದ್ದ ‘ಕಂಬಳ’ವು ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನದ ಫಲವಾಗಿ ರಾಜ್ಯ ರಾಜಧಾನಿಯಲ್ಲೂ ಕಲರವ ಸೃಷ್ಟಿಸಿ ‘ಮಹಾಹಬ್ಬ’ವಾಗಿ ಕುತೂಹಲದ ಕೇಂದ್ರಬಿಂದುವಾಯಿತು. ಪದಕ ಗೆದ್ದ ಕೋಣಗಳು ತವರಿಗೆ ತಲುಪಿದಾಗ ಕಂಡುಬಂದ ಉತ್ಸಾಹ ಕೂಡಾ ಚಾರಿತ್ರಿಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬೆಂಗಳೂರು ಕಂಬಳದಲ್ಲಿ 200ಕ್ಕೂ ಹೆಚ್ಚು ದೈತ್ಯ ಕೋಣಗಳು ಭಾಗವಹಿಸಿ ರೋಚಕತೆ ತುಂಬಿದ್ದವು. ಎಲ್ಲಾ ಕಂಬಳ ಕೋಣಗಳ ತಂಡಗಳ ಸೆಣಸಾಟದಲ್ಲಿ ಪದಕವನ್ನು ಬಾಚಿರುವ ಬೊಟ್ಯಾಡಿ ಕಿಶೋರ್ ಭಂಡಾರಿ ಮುಂದಾಳುತ್ವದ ಯುವಕರ ಪಡೆಯಾದ ‘ಜೈ ತುಳುನಾಡು ಪುತ್ತೂರು’ ತಂಡದ ಕೋಣಗಳು ಚಿನ್ನದ ಪುರಸ್ಕಾರದೊಂದಿಗೆ ಗೆದ್ದು ಬೀಗಿದೆ. ನೇಗಿಲು ಕಿರಿಯ (ಜೂನಿಯರ್) ವಿಭಾಗದಲ್ಲಿ ಕಿಶೋರ್ ಭಂಡಾರಿ ಅವರ ಕೋಣಗಳು ಚಿನ್ನದ ಪದಕ ಹಾಗೂ 50,000 ರೂಪಾಯಿ ಜಯಿಸಿ ತುಳುನಾಡಿನ ಜನರ ಹರ್ಷವನ್ನು ಮುಗಿಲೆತ್ತರ ರಾಚುವಂತೆ ಮಾಡಿವೆ.  …