ಉಪಚುನಾವಣೆ ; ಅನರ್ಹ ಶಾಸಕ ರಿಗೆ ಬಿಜೆಪಿ  ಟಿಕೆಟ್

​ಬೆಂಗಳೂರು : ಸುಪ್ರೀಂಕೋರ್ಟ್​ ತೀರ್ಪಿನ ಬೆನ್ನಲ್ಲೇ ಅವರಿಗೆ ಉಪಚುನಾವಣೆಯ ಅಭ್ಯರ್ಥಿಯಾಗಿ ಟಿಕೆಟ್​ ನೀಡಲು ಆಡಳಿತ ಪಕ್ಷ ಬಿಜೆಪಿ ತೀರ್ಮಾನಿಸಿದೆ. ಅನರ್ಹ ಶಾಸಕರು ಪಕ್ಷ ಸೇರ್ಪಡೆ ಬಳಿಕ ಅವರನ್ನು ಅಭ್ಯರ್ಥಿ ಎಂದು ಘೋಷಿಸಲು ಪಕ್ಷ ನಿರ್ಧರಿಸಿದೆ.  ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ನಾಯಕರು ಈ ತೀರ್ಮಾನ ಕೈಕೊಂಡಿದ್ದಾರೆ.

ಅನರ್ಹ ಶಾಸಕರು ನಾಳೆ ಪಕ್ಷ ಸೇರ್ಪಡನೆಯಾದ ಬಳಿಕ ಅವರಿಗೆ ಟಿಕೆಟ್​ ನೀಡಲಾಗುವುದು. ಯಾರಿಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಸಭೆಯಲ್ಲಿ ಟಿಕೆಟ್ ನೀಡುವ​ ಜೊತೆಗೆ 15 ಕ್ಷೇತ್ರಗಳಿಗೆ ಉಸ್ತುವಾರಿಗಳ ಆಯ್ಕೆ ಮಾಡಲಾಗಿದೆ.

ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಲಾಗುವುದು. ನಾನು ಹಾಗೂ ರಾಜ್ಯಾಧ್ಯಕ್ಷರು ಈ ವಿಚಾರ ಚರ್ಚಿಸಿದ್ದು,  ಸಮಾಲೋಚನೆ ನಡೆಸಿದ್ದೇವೆ  ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದರು.

Uncategorized

Related posts