ಕರಾವಳಿಯಲ್ಲಿ ಮೀನೂಟ ಸವಿಯುವುದೇ ಒಂದು ಸೊಗಸು. ಮತ್ಸ್ಯ ಸ್ವಾದಿಷ್ಟಕ್ಕಷ್ಟೆ ಅಲ್ಲ, ಕರಾವಳಿ ಮಲೆನಾಡು ಮಾಂಸ ಖಾದ್ಯದ ವಿಚಾರದಲ್ಲೂ ಮುಂದಿದೆ. ಅದರಲ್ಲೂ ಚಿಕನ್ ಕರಿ ವಿಚಾರದಲ್ಲಿ ಬಗೆಬಗೆಯ ಪ್ರಯೋಗಗಳೂ ನಡೆಯುತ್ತಿದೆ. ಅದರಲ್ಲೂ ಹಳ್ಳಿ ಶೈಲಿಯ “ಚಿಕನ್ ಚಾಪ್ಸ್” ಸಿಕ್ಕಿದರೆ..? ಆಹಾ ಏನೊಂದು ಸ್ವಾಧಿಷ್ಠಾ ಅಂತೀರಾ.. ಇಲ್ಲಿದೆ ನೋಡಿ ವಿಶಿಷ್ಟ ನಳಪಾಕ. ಇದನ್ನೂ ಓದಿ.. ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ವೀಡಿಯೋ ಕುತೂಹಲ
Category: ವೈವಿದ್ಯ
ಬಿರುಬೇಸಿಗೆ ಕಾಲದಲ್ಲಿ ತಂಪಾಗಿಸುತ್ತೆ ‘ಫ್ರೂಟ್ಸ್ ಫಾಲೋಡ’
ಇದು ಬಿರು ಬೇಸಿಗೆಯ ಕಾಲ. ಎಷ್ಟು ತಂಪು ಪಾನೀಯ ಕುಡಿದರೂ ದೂರವಾಗದ ಬಾಯಾರಿಕೆ. ಇಂತಹಾ ಸಮಯದಲ್ಲಿ ತಂಪು ಪಾನೀಯದ ಮೊರೆ ಹೋಗದೆ ಹಣ್ಣಿನ ರಸ, ಎಳನೀರಿನಂತಹಾ ಪದಾರ್ಥಗಳ ಮೊರೆ ಹೋಗಿ. ಬಾಯಾರಿಕೆಯೂ ದೂರವಾಗುತ್ತೆ; ಆರೋಗ್ಯವೂ ಸುಧಾರಿಸುತ್ತೆ. ಅಂತಹಾ ನಳಪಾಕವೊಂದು ಇಲ್ಲಿದೆ. ಅದುವೇ ‘ಫ್ರೂಟ್ಸ್ ಫಾಲೋಡ’. ಸ್ವಾದಿಷ್ಟ ‘ಫ್ರೂಟ್ಸ್ ಫಾಲೋಡ’ ಮಾಡುವ ವಿಧಾನ ಹೀಗಿದೆ. ಬೇಕಾದ ಸಾಮಗ್ರಿ: ಪಪ್ಪಾಯ ಅರ್ಧ ಕಪ್ ಕಲ್ಲಂಗಡಿ ಅರ್ಧ ಕಪ್ ಬಾಳೆಹಣ್ಣು ಅರ್ಧ ಕಸ್ ಕಸ್ 3 ಸಕ್ಕರೆ 1 ಉಪ್ಪು ಒಂದು ಚಿಟಿಕೆ ಚಿಕ್ಕು ಇಸ್ ಕ್ರೀಮ್ 3 ಸ್ಕೂಪ್ ಜೇನುತುಪ್ಪ 3 ಚಮಚ ಮಾಡುವ ವಿಧಾನ: ಮೊದಲಿಗೆ ಹಣ್ಣುಗಳನ್ನು ಸಣ್ಣ ಸಣ್ಣಗೆ ಹಚ್ಚಿ ಇಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕಸ್ ಕಸ್ ಸಿದ್ಧಮಾಡಿಕೊಳ್ಳಬೇಕು. ಅಮೇಲೇ ಒಂದು ಲೋಟ ತೆಗೆದುಕೊಂಡು ಅದಕ್ಕೆ ಒಂದರ ಮೇಲೆ ಒಂದು ಹಚ್ಚಿಕೊಂಡ ಹಣ್ಣು,…
‘ಪುಳಿ ಮುಂಚಿ’ಗಿಂತ ಭಿನ್ನ ‘ಚಿಕನ್ ಪೆಪ್ಪರ್ ಡ್ರೈ’
ಕರಾವಳಿ ಮಲಬಾರ್ ತಿನಿಸುಗಳೆಂದರೆ ಅದೇನೋ ಸ್ಪೆಷಲ್. ಫಿಶ್ ಕರಿ ಅಷ್ಟೇ ಅಲ್ಲ ಎಲ್ಲಾ ರೀತಿಯ ನಾನ್ ವೆಜ್ ಪದಾರ್ಥಗಳೂ ತನ್ನದೇ ಆದ ಟೇಸ್ಟೀ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾನ್ ವೆಜ್ ವಿಚಾರಕ್ಕೆ ಬಂದಾಗ ಹಳ್ಳಿ ಸೊಗಡಿನ ಭಾಷೆಯಲ್ಲಿ ‘ಪುಳಿ ಮುಂಚಿ’ ಎಂಬ ಪದದಲ್ಲಿ ಕರಾವಳಿ ಕರಿಯನ್ನು ವರ್ಣಿಸಲಾಗುತ್ತಿತ್ತು. ಈಗೀಗ ಕರಾವಳಿ ನಳಪಾಕದಲ್ಲೂ ವೈವಿದ್ಯತೆಯನ್ನು ಕಾಣಬಹುದಾಗಿದೆ. ಚಿಕನ್ ಪೆಪ್ಪರ್ ಡ್ರೈ ಒಂದು ರೀತಿ ಸ್ಪೆಷಲ್ ಎಂದೇ ಹೇಳಬಹುದು. ಇದನ್ನು ಮಾಡುವ ವಿಧಾನ ಹೀಗಿದೆ ನೋಡಿ.. ಇದನ್ನೂ ಓದಿ.. ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ ಬಲು ಸೊಗಸು.. ಮಾಡೋ ವಿಧಾನ ಗೊತ್ತಾ?
ಪಾಜ್ಹಂ ಪೋರಿ.. ಇದು ಬರೀ ಮಲಬಾರ್ ಫುಡ್ ಅಷ್ಟೇ ಅಲ್ಲ, ಎಲ್ಲರ ಇಷ್ಟದ ಸ್ನಾಕ್
ಪಾಜ್ಹಂ ಪೋರಿ.. ಬಾಳೆಹಣ್ಣು ಬಜ್ಜಿ ಎನ್ನುವವರೂ ಇದ್ದಾರೆ. ಇದು ಕೇರಳೀಯರ ಫೆವರೇಟ್ ಸ್ನಾಕ್ ಎಂದೇ ಜನ ತಿಳಿದಿದ್ದಾರೆ.. ಆದರೆ ಇದು ಉತ್ತಮ ಆರೋಗ್ಯದ ಗುತ್ತಿನ ತಿಂಡಿ ಎಂದೂ ತಿಳಿದ ಮಂದಿ ಈಗೀಗ ಎಲ್ಲೆಡೆಯ ಮಂದಿ ತಿನ್ನುತ್ತಾರೆ. ಅದರ ಸ್ವಾದಿಷ್ಟ ಗೊತ್ತಾದ ನಂತರವಂತೂ ಇಷ್ಟಪಡದೆ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ಅನೇಕರು. ಬಾಳೆಹಣ್ಣಿನ ನವಗೆ ಮಾಡುವ ವಿಧಾನ ಹೀಗಿದೆ ನೋಡಿ.. ಬೇಕಾಗುವ ಸಾಮಗ್ರಿ: ಬಾಳೆ ಹಣ್ಣು ಮೈದಾ 1 ಕಪ್ ಅಕ್ಕಿಹುಡಿ ಅರ್ಧ ಕಪ್ ಸಕ್ಕರೆ 2 ಚಮಚ ಅರಶಿನ ಹುಡಿ ಅರ್ಧ ಚಮಚ ಕಪ್ಪು ಎಳ್ಳು ಅರ್ಧ ಚಮಚ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ಬಾಳೆಹಣ್ಣಿನ್ನು ಬೇಕಾದ ಹಾಗೆ ಕಟ್ ಮಾಡಿಕೊಳ್ಳಬೇಕು. ಮೈದಾ, ಅಕ್ಕಿಹುಡಿ (2:1 ಹೇಳಿ ಲೆಕ್ಕ), ಸಕ್ಕರೆ, ಅರಿಶಿನ, ಕಪ್ಪು ಎಳ್ಳು, ಉಪ್ಪು ಎಲ್ಲ ಹಾಕಿ ಒಂದರಿ ಕಲಸಿ. ಮತ್ತೆ ಸ್ವಲ್ಪ ಸ್ವಲ್ಪ ನೀರು…
ನೀವು ಪಾಕ ಪ್ರವೀಣರಲ್ಲವೇ; ಚಿಂತೆ ಬಿಡಿ, ‘ಆಮ್ಚೂರ್’ ಮಾಡಿ
ಲಾಕ್’ಡೌನ್ ಮೂಡ್’ನಿಂದ ಹೊರಬನ್ನಿ.. ಕೆಲಸ ಇಲ್ಲ ಎಂದು ಕೈಚೆಲ್ಲಿ ಕುಳಿತಿದ್ದವರು ಇದೀಗ ಪಾಕ ಪ್ರವೀಣರಾಗಿದ್ದಾರೆ. ಅದರಲ್ಲೂ ಮರೆತುಹೋಗಿದ್ದ ಹಳ್ಳಿ ತಿಂಡಿಗಳು ಮತ್ತೆ ಘಮಘಮಿಸುತ್ತಿದೆ. ಆ ಸಾಲಿಗೆ ಆಮ್ಚೂರ್ ಕೂಡಾ ಸೇರಿದೆ. ಏನಿದು ಆಮ್ಚೂರ್? ಇದನ್ನು ಮಾಡುವುದು ಹೇಗೆ ಎಂಬ ಚಿಂತೆಯೇ? ಇಲ್ಲಿದೆ ನೋಡಿ ಪಾಕ ಸೂತ್ರ.. ಬೇಕಾದ ಸಾಮಾಗ್ರಿ: ಮಾವಿನಕಾಯಿ 15 ಉಪ್ಪು 5 ಚಮಚ ಮಾಡುವ ವಿಧಾನ: ಮಾವಿನಕಾಯಿಯನ್ನು ಸಣ್ಣಗೆ ತುಂಡು ಮಾಡಬೇಕು. ಅದನ್ನು ಬಿಸಿಲಿನಲ್ಲಿ 6 -7 ದಿನ ಇಡೀ. ಅದು ಕಂದು ಬಣ್ಣ ಬಂದು ಅದಲ್ಲಿರುವ ಎಲ್ಲ ನೀರಿನ ಅಂಶ ಹೋಗುತ್ತದೆ. ಆಮೇಲೆ ಅದನ್ನು ಒಂದು ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಬೇಕು. ಅದನ್ನು ಜಾಲಿಸಬಹುದು ಅಥವಾ ಹಾಗೆಯೇ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಆಮ್ಚೂರ್ ಸಿದ್ಧವಾಗುತ್ತದೆ. ಇದನ್ನೂ ಓದಿ.. ಸ್ವಾದಿಷ್ಟಕ್ಕೆ ಮತ್ತೊಂದು ಹೆಸರೇ ‘ಮಾವಿನಕಾಯಿ ತೊಕ್ಕು’ — ಇದನ್ನೂ ಓದಿ.. ಮದ್ಯಪ್ರಿಯರಿಗೆ…
ಸ್ವಾದಿಷ್ಟಕ್ಕೆ ಮತ್ತೊಂದು ಹೆಸರೇ ‘ಮಾವಿನಕಾಯಿ ತೊಕ್ಕು’
ಒಂದೆಡೆ ಲಾಕ್’ಡೌನ್ ಪರಿಸ್ಥಿತಿ.. ಇನ್ನೊಂದೆಡೆ ಬಿರು ಬಿಸಿಲ ಧಗೆ.. ಈ ಕಾರಣದಿಂದಾಗಿಯೇ ಮನೆಯೊಳಗೇ ಕುಟುಂಬ ಸದಸ್ಯರ ನಡುವೆ ಬಂಧುತ್ವದ ಬೆಸುಗೆಯಾಗಿದೆ. ಕುಟುಂಬ ಸದಸ್ಯರೆಲ್ಲರೂ ಒಂದಿಲ್ಲೊಂದು ಪಾಕ ವೈವಿಧ್ಯತೆಯಲ್ಲಿ ತಲ್ಲೀನರಾಗಿದ್ದಾರೆ. ಅವರಿಗಾಗಿ ಇಲ್ಲಿದೆ ಮತ್ತೊಂದು ಪಾಕ ಸೂತ್ರ. ಮಾವಿನ ಕಾಯಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಿಂದ ಬಗೆಬಗೆಯ ತಿಂಡಿ ಮಾಡಬಹುದು. ಆ ಪೈಕಿ ಮಾವಿನಕಾಯಿ ತೊಕ್ಕು ಕೂಡಾ ಒಂದು. ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.. 4 ಮಾವಿನಕಾಯಿಯನ್ನು ತುರಿದು ಇಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿ ಆದ ನಂತ್ರ ಅದಕ್ಕೆ ಕೆಂಪು ಮೆಣಸು ಸಾಸಿವೆ ಹಾಕಿ ಸಿಡಿಸಿ. ಸಿಡಿದ ಮೇಲೆ ಕರಿಬೇವುನ್ನು ಹಾಕಬೇಕು. ಮತ್ತೆ ತುರಿದಿಟ್ಟ ಮವಿನಕಾಯಿಯನ್ನು ಹಾಕಿ 5 ನಿಮಿಷಗಳ ಕಾಲ ಹಾಗೆ ಇಡೀ. ಮತ್ತೆ ಅದಕ್ಕೆ ಮೆಣಸಿನ ಹುಡಿ,ಅರಿಶಿನ ಹುಡಿ, ಬೆಲ್ಲ ,ಉಪ್ಪು ಹಾಕಿ 10 ನಿಮಿಷಗಳ ಕಾಲ ಸಣ್ಣ…
ಬೇಸಿಗೆಯ ಬೇಗೆಗೆ ಪಾನೀಯಾ ತಂಪು.. ಹಲಸಿನ ಬೀಜದ ಮಿಲ್ಕ್ ಶೇಕ್..
ಬೇಸಿಗೆಯ ಬೇಗೆ.. ಬಿಸಿಲ ಧಗೆ.. ಸುಸ್ತು-ಆಯಾಸ ಅಂತಾ ಹೇಳುವ ಮಂದಿಗೆ ಇಲ್ಲಿದೆ ಚೈತನ್ಯದಾಯಕ ಪಾನೀಯ.. ಹಳ್ಳಿ ಸೊಗಡಿನ ಈ ಪಾಣಿಯಾದ ಆಹ್ಲಾದ ಹೇಗಿದೆ ಗೊತ್ತಾ? ಹಲಸಿನ ಬೀಜವನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಗೆ ಹಾಕಿ, ಸ್ವಲ್ಪ ನೀರನ್ನು ಹಾಕಿ 4 -5 ವಿಸಿಲ್ ಹಾಕಿಸಬೇಕು. ಅದು ಬೆಂದ ನಂತರ ಅದರ ಸಿಪ್ಪೆಯನ್ನು ತೆಗೆಯಬೇಕು. ಆಮೇಲೆ ಒಂದು ಜಾರಿಗೆ ಸಿಪ್ಪೆ ತೆಗೆದ ಹಲಸಿನ ಬೀಜ, ಬೆಲ್ಲ , ಇಸ್ ಕ್ಯೂಬ್ ಹಾಕಿ ರುಬ್ಬಿಕೊಳ್ಳಬೇಕು. ಒಂದು ಬಾರಿ ರುಬ್ಬಿ ಆದ ಮೇಲೆ ಕೋಲ್ಡ್ ಹಾಲನ್ನು ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಬೇಕು. ಮತ್ತೆ ಬೇಕಾದ ಹಾಗೆ ಹಾಲು ಹಾಕಿಕೊಂಡು ಹದ ಮಾಡಿಕೊಂಡರೆ ಹಲಸಿನ ಬೀಜದ ಮಿಲ್ಕ್ ಶೇಕ್ ಸವಿಯಲು ಸಿದ್ಧವಾಗುತ್ತದೆ. ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಫ್ರಿಜ್’ನಲ್ಲಿಟ್ಟು ಸ್ವಲ್ಪ ಹೊತ್ತಿನ ಬಳಿಕ ಸವಿಯಬಹುದು. ವೀಡಿಯೋ ನೋಡಿ ನೀವೂ ಮಾಡಿ.. Detailed…
ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ ಬಲು ಸೊಗಸು.. ಮಾಡೋ ವಿಧಾನ ಗೊತ್ತಾ?
ಲಾಕ್‌ಡೌನ್ ಅಂತ ಮನೆಯಲ್ಲೇ ಇದ್ದಾಗ ಏನಾದರೊಂದು ಮಾಡಬೇಕೆನಿಸುತ್ತೋ..? ಅದರಲ್ಲೂ ಹಳ್ಳಿ ತಿಂಡಿ ಅಂದರೆ ಬಾಯಿ ಚಪ್ಪರಿಸಲೇಬೇಕು ಅಲ್ಲವೇ? ಕರಾವಳಿ-ಮಲೆನಾಡಲ್ಲಿ ನೀರು ದೋಸೆ ಬಲು ಫೇಮಸ್ಸು. ಅದರಂತೆ ಬೂದು ಕುಂಬಲಕಾಯಿ ದೋಸೆ ಕೂಡಾ ಬಲು ಸೊಗಸು. ಕರಾವಳಿಯ ತಿಂಡಿ ಪ್ರಕಾರಗಳಲ್ಲಿ ಈ ದೋಸೆಗೆ ತುಂಬಾ ಪ್ರಾಧಾನ್ಯತೆ. ಯಾಕೆಂದರೆ ಸಕತ್ ರುಚಿ, ಅಷ್ಟೇ ಅರೋಗ್ಯಪೂರ್ಣ. ಸಿಟಿಯಲ್ಲಿ ಸಿಗದ ಈ ದೋಸೆಯನ್ನು ಮನೆಯಲ್ಲೇ ಮಾಡಿದರೆ ಹೇಗಿರುತ್ತೆ ಅಂತೀರಾ? ನೀವೇ ನೋಡಿ.. ಇದನ್ನೂ ಓದಿ.. ನಾನ್ ವೆಜ್ ಕರಿಗಿಂತಲೂ ಸ್ವಾದಿಷ್ಟ ಸುವರ್ಣಗಡ್ಡೆ ಸುಕ್ಕ
ನಾನ್ ವೆಜ್ ಕರಿಗಿಂತಲೂ ಸ್ವಾದಿಷ್ಟ ಸುವರ್ಣಗಡ್ಡೆ ಸುಕ್ಕ
ಕೊರೋನಾ ವೈರಾಣು ಭೀತಿ ಹಿನ್ನೆಲೆಯಲ್ಲಿ ನಾಡಿನ ಜನ ಇದೀಗ ಗೃಹಬಂಧನದಲ್ಲಿದ್ದಾರೆ. ದೈನಂದಿನ ಜಂಜಾಟದಿಂದ ದೂರ ಉಳಿದು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಹಳ್ಳಿ ತೊರೆದು ಸಿಟಿ ಸೇರಿರುವ ಅವೆಷ್ಟೋ ಕುಟುಂಬಗಳಿಗೆ ಇದೀಗ ಕೊರೋನಾ ಸಂಕಟ ಕಾಲದಲ್ಲಿ ಹಳ್ಳಿ ಸೊಗಡಿನ ನೆನಪಾಗುತ್ತಿದೆ. ಸಿಟಿಯಲ್ಲಿರುವ ಮಂದಿಗೆ ಹಳ್ಳಿ ತಿನಿಸುಗಳನ್ನು ಸವಿಯುವ ಅವಕಾಶ ಸಿಗುವುದು ತೀರಾ ಕಡಿಮೆ. ಅದರಲ್ಲೂ ಕರಾವಳಿ-ಮಲೆನಾಡಿನ ತಿನಿಸುಗಳನ್ನು ನೆನಪಿಸಿದರೆ ಸಾಕು, ಬಾಯಲ್ಲಿ ನೀರೂರಿಸುತ್ತದೆ. ಅಂತಹಾ ಖಾದ್ಯಗಳ ಪೈಕಿ ಸುವರ್ಣಗಡ್ಡೆಯ ಡಿಶ್ ಕೂಡಾ ಒಂದು. ರುಚಿಯಲ್ಲೂ ಸ್ವಾದಿಷ್ಟ, ಆರೋಗ್ಯ ವಿಚಾರದಲ್ಲೂ ಇದು ಸಂಜೀವಿನಿ. ತರಕಾರಿಯಾಗಿದ್ದರೂ ನಾನ್ ವೆಜ್ ಕರಿಯನ್ನೂ ಮೀರಿಸುವ ಟೇಸ್ಟೀ ಸುವರ್ಣಗಡ್ಡೆ ಸುಕ್ಕಾ.. ಈ ವೈವಿದ್ಯತೆಯ ಸುಕ್ಕಾ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದೆ ಕರಾವಳಿ ಫ್ಲೇವರ್ ಟೀಮ್. ಈ ವೀಡಿಯೋ ಮೂಲಕ ಮಾಡುವ ವಿಧಾನ ತಿಳಿಯಿರಿ.. ಸುಕ್ಕಾ ಸವಿರುಚಿ ಅನುಭವಿಸಿ.. ಇಲ್ಲಿದೆ ನೋಡಿ.. ‘ರಾಗಿಮಣ್ಣಿ’ ಮಾಡುವ…
ಕೊರೋನಾ ಸಂಕಟವೇ..? ಕವಿತೆಗಳ ಸಾಲುಗಳೇ ಇಲ್ಲಿ ಚೈತನ್ಯ.. ಸಂಗೀತದ ನಿನಾದವೇ ಔಷಧ
ಮಂಗಳೂರು: ಕೊರೋನಾ ಸಂಕಟ ಇಡೀ ಜಗತ್ತನೇ ಆವರಿಸಿಕೊಂಡಿದೆ. ನಿಜಕ್ಕೂ ಇದು ಸಂಕಟ ಕಾಲ. ಕೊರೋನಾ ಹೊಡೆತದಿಂದ ಪಾರಾಗಲು ಲಾಕ್’ಡೌನ್ ಸಂಕೋಲೆ ಹೆಣೆದು ಜನರನ್ನು ಗೃಹಬಂಧನಕ್ಕೆ ತಳ್ಳಿರುವ ಈ ಪರಿಸ್ಥಿತಿಯಲ್ಲಿ ಪರಿಹಾರದ ಹುಡುಕಾಟ ಸಾಧ್ಯವೇ? ಈ ಸಂಧಿಕಾಲದಲ್ಲೂ ನಿರ್ಮಲ ಮನಸುಗಳು ಒಂದಾಗಿವೆ.. ಸಾಲು ಸಾಲು ಕವಿತೆಗಳನ್ನು ಹರಿಯಬಿಟ್ಟಿವೆ.. ಕೊರೋನಾ ಬೀಸಿರುವ ಬಲೆಯಲ್ಲಿ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಅದರಿಂದ ಹೊರಬರಲು ಈ ಕವಿತೆಗಳ ಸಾಲು ಚೈತನ್ಯವಾಗಿವೆ. ಸಂಗೀತದ ನಿನಾದವೇ ಔಷಧಿಯಾಗಿವೆ.. ಸರಕಾರ ಈ ಕೊರೊನ ಸಂಕೋಲೆಯನ್ನು ತುಂಡರಿಸಲು ಲಾಕ್’ಡೌನ್ ಸೂತ್ರಕ್ಕೆ ಮೊರೆ ಹೋಗಿದ್ದರಿಂದಾಗಿ ಜನ ದಿಗ್ಬಂಧನಕ್ಕೊಳಗಾಗಿದ್ದಾರೆ. ಮನೆಯೊಳಗಡೆ ಕೂತು ಜನ ವಿವಿಧ ಕಸರತ್ತುಗಳನ್ನು ಮಾಡಿ ಕಾಲ ಕಳೆಯುತ್ತಿದ್ದಾರೆ.ಇವೆಲ್ಲದರ ನಡುವೆ ಕೊಂಕಣಿ ಕವಿಗಳ ಮಸ್ತಕಕ್ಕೆ ಒಂದು ವಿಭಿನ್ನ ಆಲೋಚನೆ ಹೊಳೆಯಿತು. ಅದುವೇ ಕವನ ಸಂಕೋಲೆ (ಕವಿತಾ ಸಾಂಕಳ್). ದೂರದ ಇಸ್ರೇಲ್ ದೇಶದಿಂದ ಲೆನಾರ್ಡ್ ಫೆರ್ನಾಂಡಿಸ್ ವಾಮಂಜೂರು ಈ ಒಂದು ಐಡಿಯಾವನ್ನು ಫೇಸ್’ಬುಕ್…
