ಕೊರೋನಾ ಕಾರಣಕ್ಕಾಗಿ ಎಲ್ಲೆಲ್ಲೂ ಲಾಕ್’ಡೌನ್. ಹಾಗಾಗಿ ಎಲ್ಲೂ ಓಡಾಡೋ ಸ್ಥಿತಿ ಇಲ್ಲ. ಮನೆಯಲ್ಲೇ ಇರುವುದಕ್ಕೂ ಬೋರು. ಒಂದರ್ಥದಲ್ಲಿ ಈ ಲಾಕ್’ಡೌನ್ ಪರಿಸ್ಥಿತಿಯು ಕ್ರಿಯಾಶೀಲತೆಯ ಪಾಠವನ್ನೂ ಕಲಿಸುತ್ತಿದೆ ಎಂದೂ ಹೇಳಬಹುದು. ಆಫೀಸುಗಳಲ್ಲೇ ಕಾಲವ್ಯಯ ಮಾಡುವ ಬಹುತೇಕ ಮಂದಿ ಇದೀಗ ಅಡುಗೆ ಮನೆಯಲ್ಲೂ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಬಗೆಬಗೆಯ ನಳಪಾಕದ ಆವಿಷ್ಕಾರ ಮಾಡುವವರೂ ಹಲವರು. ಅದೇ ರೀತಿ ಕರಾವಳಿ ಫ್ಲೇವರ್ಸ್ ಸಿದ್ದಪಡಿಸಿರುವ ‘ರಾಗಿ ಮಣ್ಣಿ’ ಸಿಹಿ ತಿಂಡಿ.. ಹಳ್ಳಿ ಸೊಗಡಿನ ಖಾದ್ಯದ ಸವಿರುಚಿ ಅನುಭವಿಸದ ಮಂದಿಗೆ ಇದೂ ಒಂದು ಮಾಗದರ್ಶಿ. ಇಲ್ಲಿದೆ ನೋಡಿ ‘ರಾಗಿಮಣ್ಣಿ’ ಮಾಡುವ ವಿಧಾನ.. ಇದನ್ನೂ ಓದಿ.. ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App
Category: ವೈವಿದ್ಯ
ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App
ಬೆಂಗಳೂರು: ಜಗತ್ತಿನಾದ್ಯಂತ ಕೊರೋನಾ ಹಾವಳಿ ಮುಂದುವರಿದಿದ್ದು ಲಕ್ಷಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಈಗಿನ್ನೂ ಕೋವಿಡ್-19 ಮರಣ ಮೃದಂಗವನ್ನೇ ಭಾರಿಸುತ್ತಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳ ಜನರು ಈ ವಿಚಾರದಲ್ಲಿ ಚೀನಾ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಇದೇ ವೇಳೆ ಭಾರತೀಯರೂ ಚೀನಾ ವಿರುದ್ಧ ಸಿಟ್ಟಾಗಿದ್ದು, ಆ ದೇಶದ ವಸ್ತುಗಳನ್ನು ತಿರಸ್ಕರಿಸಬೇಕೆಂಬ ಬಗ್ಗೆ ಅಭಿಯಾನವನ್ನೇ ಆರಂಭಿಸಿದ್ದಾರೆ. ಅದರಲ್ಲೂ ಜನಪ್ರಿಯ ಟಿಕ್ ಟಾಕ್ App ವಿರುದ್ಧ ಬಲವಾದ ಸಮರ ಆರಂಭಗೊಂಡಿದೆ. ಕೆಂಪು ರಾಷ್ಟ್ರ ಚೀನಾವು ಭಾರತದ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರ ಎಂದೇ ಅನೇಕ ದಶಕಗಳಿಂದಲೂ ಗುರುತಾಗಿವೆ. ಅನೇಕ ಸಂದರ್ಭಗಳಲ್ಲಿ, ಅನೇಕ ಸನ್ನಿವೇಶಗಳಲ್ಲಿ ಭಾರತದ ವಿರುದ್ಧ ಪಿತೂರಿ ಮಾಡುತ್ತಲೇ ಇರುವ ಚೀನಾ, ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಸ್ಥಾನಮಾನ ಸಿಗುವ ವಿಚಾರವಾಗಲಿ, ಭಾರತ-ಪಾಕ್ ಗಡಿ ವಿಚಾರವಾಗಲಿ ನಮ್ಮ ಎದುರಾಳಿಯಾಗಿ ನಿಲುವು ತಾಳುತ್ತಲಿದೆ. ಭಾರತದ ಗಡಿಯಾಚೆಗೆ ಬಂದು ಆಗಾಗ್ಗೆ ಜಗಳ ತೆಗೆಯುತ್ತಿರುವ ಚೀನಾ…
ಕೊರೋನಾ ಸೋಂಕಿತರು ಹತ್ತಿರ ಬಂದರೆ ಅಲಾರ್ಮ್: ಇಲ್ಲಿದೆ ನೋಡಿ ಮೊಬೈಲ್ ಆ್ಯಪ್ ವಿಶೇಷ.
ಆದುನಿಕ ತಂತ್ರಜ್ಞಾನ ಸೋಂಕು ತಡೆಯುವಲ್ಲೂ ಮಹತ್ವದ ಪಾತ್ರವಹಿಸುತ್ತದೆ. ಅದರಲ್ಲೂ ‘ಆರೋಗ್ಯ ಸೇತು’ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದೆ. ಬೆಂಗಳೂರು: ಕೊರೋನಾ ವೈರಾಣು ಎಲ್ಲೆಲ್ಲೂ ಭೀತಿಯ ಕಾರ್ಮೋಡ ಆವರಿಸುವಂತೆ ಮಾಡಿದೆ. ಮನೆಯಿಂದ ಹೊರ ಹೋಗಲಾಗದ ಸ್ಥಿತಿ ಇದ್ದು, ಒಂದು ವೇಳೆ ದೀನಸಿ, ಹಣ್ಣು-ತರಕಾರಿಗೆಂದು ಹೊರಗೆ ಹೋದರೆ ಸಾಕು ಸೋಂಕು ಅಂಟಿಕೊಳ್ಳಬಹುದೆಂಬ ಆತಂಕ ಸಹಜ. ಯಾರಲ್ಲಿ ಸೋಕು ಇರಬಹುದೇನೋ ಎಂಬ ಅನುಮಾನ ಕೂಡಾ. ಇಂತಹಾ ಸಂದರ್ಭದಲ್ಲಿ ಸೋಂಕಿತರ ಬಗ್ಗೆ ಮೊಬೈಲ್ ಆ್ಯಪ್ ಸುಳಿವು ನೀಡುತ್ತದೆ ಅಂದ್ರೆ ನಂಬುತ್ತೀರಾ? ಆರೋಗ್ಯ ಸೇವೆಗಳನ್ನು ಸಂಪರ್ಕಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ‘ಆರೋಗ್ಯ ಸೇತು’ ಆ್ಯಪ್ ಇಂಥದ್ದೊಂದು ಕಾರ್ಯ ನಿರ್ವಹಿಸುತ್ತದಂತೆ. ಕೆಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ಗೆ ಟ್ರ್ಯಾಕರ್ ಸಿಸ್ಟಂ ಅಳವಡಿಸಲಾಗಿದ್ದು, ಸೋಂಕಿತರು ಹತ್ತಿರ ಬಂದರೆ ಎಚ್ಚರಿಕೆಯ ಸೂಚನೆಯನ್ನು ಇದು ನೀಡುತ್ತದಂತೆ. ಈಗಿರುವ ಆ್ಯಪನ್ನು ಇನ್ನಷ್ಟು ಡೆವೆಲಪ್ ಮಾಡುವ ಪ್ರಕ್ರಿಯೆ…
ಮಾವು ಪ್ರಿಯರಿಗೆ ಸಿಹಿ ಸುದ್ದಿ; ಮತ್ತಷ್ಟು ಹಾಪ್’ಕಾಮ್ಸ್ ಮಳಿಗೆ ತೆರೆಯಲು ನಿರ್ಧಾರ
ಮಾವು ಸೀಸನ್ ಸಂದರ್ಭದಲ್ಲೂ ಜನರಿಗೆ ಈ ಹಣ್ಣು ಸಿಗುತ್ತಿಲ್ಲ. ಲಾಕ್’ಡೌನ್ ಕಾರಣಕ್ಕಾಗಿ ಹಣ್ಣು ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಈ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ಲಾನ್ ಮಾಡಿದೆ. ಕೋಲಾರ: ಇದೀಗ ಬೇಸಿಗೆ. ಹೇರಳವಾಗಿ ಮಾವು ಬೆಳೆಯಲಾಗಿದ್ದರೂ ಜನರಿಗೆ ಸಿಗುತ್ತಿಲ್ಲ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮಾವು ಹಾಗೂ ಹಣ್ಣು-ತರಕಾರಿ ಸಾಗಿಸಲು ಅಡ್ಡಿಯಾಗುತ್ತಿವೆರ್. ಇದರಿಂದಾಗಿ ಹಣ್ಣು ಪ್ರಿಯರಿಗೆ ನಿರಾಸೆಯಾಗಿದ್ದರೆ ಬೆಳೆಗಾರವು ನಷ್ಟದಿಂದ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಚ್ಚುವರಿ ಹಾಪ್’ಕಾಮ್ಸ್ ಮಳಿಗೆಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ರಾಜ್ಯದ ಇತರೆಡೆಗೆ ಹೋಲಿಸಿದರೆ ಕೋಲಾರದಲ್ಲಿ ಗಣನೀಯ ಪ್ರಮಾಣದಲ್ಲಿ ತರಕಾರಿ, ಮಾವು ಬೆಳೆಯುತ್ತಾರೆ. ಈ ಬಾರಿ ಟೊಮ್ಯಾಟೊ, ಕ್ಯಾಪ್ಸಿಕಂ ಉತ್ತಮ ಇಳುವರಿ ಬಂದಿದೆ. ಆದರೆ ಎಂದಿನಂತೆ ಮಾರುಕಟ್ಟೆ ಇಲ್ಲದಿರುವುದರಿಂದ ತೊಂದರೆಯಾಗಿದೆ. ಆದ್ದರಿಂದ ರಾಜ್ಯದ್ಯಂತ ಈಗ ಇರುವುದಕ್ಕಿಂತಲೂ ದುಪ್ಪಟ್ಟು ಸಂಖ್ಯೆಯ ಹಾಪ್ ಕಾಮ್ಸ್ ಮಳಿಗೆ ತೆರೆಯುವ ನಿಟ್ಟಿನಲ್ಲಿ ಸರ್ಕಾರ…
ಪ್ರಜ್ವಲಿಸಿತು ದಿಗ್ವಿಜಯದ ಜ್ಯೋತಿ; ದೀಪ ಯಜ್ಞ ಕಂಡು ಬಾವುಕರಾದ ಮೋದಿ
ಮತ್ತೆ ಒಗ್ಗಟ್ಟಿನ ಮಂತ್ರ.. ಪುಟ್ಟ ಪುಟ್ಟ ಹಣತೆಗಳಲ್ಲೇ ಭವ್ಯ ಭಾರತ… ಹೌದು.. ಕೊರೋನಾ ಹಾವಳಿಯಿಂದ ತತ್ತರಿಸಿರುವ ಭಾರತದಲ್ಲಿ ಆತಂಕದಲ್ಲಿರುವ ಜನತೆಗೆ ಆತ್ಮವಿಶ್ವಾಸ ತುಂಬಲು ಮೋದಿ ನೀಡಿದ ಟಾಸ್ಕನ್ನು ಇಡೀ ರಾಷ್ಟ್ರವೇ ಗೌರವದಿಂದ ಮಾಡಿ ತೋರಿಸಿದೆ. ದೇಶದ ಬೀದಿ ಬೀದಿಗಳಲ್ಲೂ ಪುಟ್ಟ ಹಣತೆಗಳಲ್ಲೂ ಜಗತ್ತನ್ನೇ ಬೆಳಗಿಸುವ ಜ್ಯೋತಿ ಪ್ರಜ್ವಲಿಸಿತು. ಕಾಯಾ ವಾಚಾ ಮನಸಾ.. ಜನತೆ ಏಕಕಾಲದಲ್ಲಿ ಅತ್ಯಂತ ಶ್ರದ್ದೆಯಿಂದ ಈ ದೀಪೋತ್ಸವದಲ್ಲಿ ಪಾಲ್ಗೊಂಡು ಅಂಧಶ್ರದ್ದೆಯಲ್ಲಿದ್ದವರಲ್ಲಿ ಜ್ಞಾನ ತುಂಬುವ ಪ್ರಯತ್ನಕ್ಕೆ ಮುನ್ನುಡಿ ಬರೆದರು. ಅಂದು ಚಪ್ಪಾಳೆ, ಇಂದು ದೀಪ ಯಜ್ಞ ಕೊರೋನಾ ವೈರಾಣು ಭಾರತದಲ್ಲಿ ಹರಿದಾಡಲಾರಂಭಿಸಿದಾಗಲೇ ಪ್ರಧಾನಿ ಮೋದಿಯವರು ಜನತಾ ಕರ್ಫ್ಯೂ’ಗೆ ಕರೆ ನೀಡಿ ಚಪ್ಪಾಳೆ ಮೂಲಕ ಮಾರಕ ರೋಗದ ವಿರುದ್ಧ ಸೆಣಸಾಡುತ್ತಿರುವ ವೈದ್ಯರು ಹಾಗೂ ಸೇನಾನಿಗಳಿಗೆ ಧನ್ಯವಾದ ಹೇಳಲು ಮನವಿ ಮಾಡಿದ್ದರು. ಇದನ್ನು ಭಕ್ತಿಯ ಸಂಕೇತವಾಗಿ ಇಡೀ ದೇಶವೇ ಪಾಲಿಸಿತ್ತು. ಅನಂತರದ ಲಾಕ್ ಡೌನ್ ಆದೇಶವನ್ನೂ ಇಡೀ ದೇಶದ…
ಕೊರೋನಾ ವಿಚಾರ: ಚಪ್ಪಾಳೆ ನಂತರ ಇದೀಗ ‘ನವದೀಪ’ ಅಭಿಯಾನಕ್ಕೆ ಕರೆ
ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರು ದೇವಾಲಯ, ಮಂದಿರಗಳಿಗೆ ಹೋಗುವಂತಿಲ್ಲ. ಇದೇ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಹೊಸ ಅಭಿಯಾನಕ್ಕೆ ಮುನ್ನುಡಿ ಬರೆದಿವೆ. ಕೆಲ ದಿನಗಳ ಹಿಂದೆ ಕೊರೋನಾ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು. ಅಂದು ದಿನವಿಡೀ ಮನೆಯಲ್ಲೇ ಇದ್ದು, ಸಂಜೆ ಚಪ್ಪಾಳೆ ತಟ್ಟಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಸೇನಾನಿಗಳಿಗೆ ಧನ್ಯವಾದ ಹೇಳುವಂತೆ ಕರೆ ನೀಡಿದ್ದರು. ಅಂದು ದೇಶವ್ಯಾಪಿ ಚಪ್ಪಾಳೆಯ ಸದ್ದಷ್ಟೇ ಅಲ್ಲ, ಹಲವರು ಶಂಖನಾದ, ಘಂಟೆ-ಜಾಗಟೆಗಳನ್ನು ಭಾರಿಸಿ ಹೊಸದೊಂದು ತರಂಗ ಸೃಷ್ಟಿಸಿದ್ದರು. ಇದೀಗ ರಾಮನವಮಿ ಸರದಿ. ಈ ಬಾರಿಯ ರಾಮನವಮಿಯನ್ನು ಕೊರೋನಾ ಸಂಹಾರಕ್ಕೆ ಮೀಸಲಿಡಲು ಆಸ್ತಿಕ ಸಮುದಾಯ ಸಲಹೆ ಮಾಡಿದೆ. ಹಾಗಾಗಿ ಹಿಂದೂ ಸಂಘಟನೆಗಳು ರಾಮ ನವಮಿಯ ದಿನವಾದ ಗುರುವಾರ ಸಂಜೆ ‘ನವದೀಪ’ ಕೈಂಕರ್ಯ ನೆರವೇರಿಸುವಂತೆ ಕರೆ ನೀಡಿವೆ. ಶ್ರೀ ರಾಮ ಜಯಂತಿ…
ಕೊರೋನಾ ಓಡಿಸಲು ಅಂದು ‘ಚಪ್ಪಾಳೆ’, ಇದೀಗ ‘ನವದೀಪ’.. ಏನಿದು ವಿಶೇಷ ಗೊತ್ತಾ?
ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರು ದೇವಾಲಯ, ಮಂದಿರಗಳಿಗೆ ಹೋಗುವಂತಿಲ್ಲ. ಇದೇ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಹೊಸ ಅಭಿಯಾನಕ್ಕೆ ಮುನ್ನುಡಿ ಬರೆದಿವೆ. ಕೆಲ ದಿನಗಳ ಹಿಂದೆ ಕೊರೋನಾ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು. ಅಂದು ದಿನವಿಡೀ ಮನೆಯಲ್ಲೇ ಇದ್ದು, ಸಂಜೆ ಚಪ್ಪಾಳೆ ತಟ್ಟಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಸೇನಾನಿಗಳಿಗೆ ಧನ್ಯವಾದ ಹೇಳುವಂತೆ ಕರೆ ನೀಡಿದ್ದರು. ಅಂದು ದೇಶವ್ಯಾಪಿ ಚಪ್ಪಾಳೆಯ ಸದ್ದಷ್ಟೇ ಅಲ್ಲ, ಹಲವರು ಶಂಖನಾದ, ಘಂಟೆ-ಜಾಗಟೆಗಳನ್ನು ಭಾರಿಸಿ ಹೊಸದೊಂದು ತರಂಗ ಸೃಷ್ಟಿಸಿದ್ದರು. ಇದೀಗ ರಾಮನವಮಿ ಸರದಿ. ಈ ಬಾರಿಯ ರಾಮನವಮಿಯನ್ನು ಕೊರೋನಾ ಸಂಹಾರಕ್ಕೆ ಮೀಸಲಿಡಲು ಆಸ್ತಿಕ ಸಮುದಾಯ ಸಲಹೆ ಮಾಡಿದೆ. ಹಾಗಾಗಿ ಹಿಂದೂ ಸಂಘಟನೆಗಳು ರಾಮ ನವಮಿಯ ದಿನವಾದ ಗುರುವಾರ ಸಂಜೆ ‘ನವದೀಪ’ ಕೈಂಕರ್ಯ ನೆರವೇರಿಸುವಂತೆ ಕರೆ ನೀಡಿವೆ. ಇದನ್ನೂ ಓದಿ.. ಕೊರೋನಾ…
ಹೊಸ ನಿರೀಕ್ಷೆಯ ನಿರೀಕ್ಷೆಯ ‘ಚೌಕಿ’
ಕನ್ನಡ ಸಿನಿಮಾ ರಂಗದಲ್ಲಿ ‘ಚೌಕಿ’ ಚಿತ್ರ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ವರ್ಷಗಳ ಹಿಂದಿನ ರಂಗಿತರಂಗದ ಯಶಸ್ಸಿನ ಹಾದಿಯಲ್ಲಿ ಈ ಸಿನಿಮಾ ಕೂಡಾ ಸಾಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು. ಅಮಿಶ್ ಕುಮಾರ್, ವಚನಾ ಶೆಟ್ಟಿ ಮತ್ತಿತರರು ನಟಿಸಿದ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಡ್ಡು ಮಾಡುತ್ತಿದೆ. ಶಕೀಲ್ ಅಹಮದ್ ನಿರ್ಮಾಣದ ‘ಚೌಕಿ’ ಚಿತ್ರವನ್ನು ಸಿಎಸ್ ಜಯಪ್ರಕಾಶ್ ನಿರ್ದೇಶಿಸಿದ್ದಾರೆ.
ಬರಲಿದೆ ಹೊಸ 100 ರೂ ನೋಟು.. ವಿಶೇಷತೆ ಏನು ಗೊತ್ತಾ?
ದೆಹಲಿ: ಎಲ್ಲೆಲ್ಲೂ 2000 ರೂಪಾಯಿ ನೋಟ್ ಬ್ಯಾನ್ ವದಂತಿ ಹಬ್ಬಿದೆ. ಆದರೆ ಇಂತಹಾ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಸರ್ಕಾರ ಕೂಡಾ ಹೇಳಿದೆ. ಆದರೆ ಶೀಘ್ರವೇ 100 ರೂಪಾಯಿಯ ಹೊಸ ನೋಟು ಚಾಲ್ತಿಗೆ ಬರಲಿದೆ. ಹಲವು ವೈಶಿಷ್ಟ್ಯಗಳ ಹೊಸ ನೋಟು ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. 100 ರೂಪಾಯಿ ಮುಖಬೆಲೆಯ ಈ ಹೊಸ ನೋಟಿನ ವಿಶೇಷತೆ ಎಂದರೆ ಇದು ಸುಲಭದಲ್ಲಿ ಹರಿದುಹೋಗಲ್ಲ. ವಾರ್ನಿಸ್ ಪೇಂಟ್ ಬಳಸಿ ಮುದ್ರಿಸಲಾಗಿರುವ ಈ ಹೊಸ ನೋಟನ್ನು ನೀರಿನಲ್ಲಿ ನೆನೆದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಸದ್ಯ ಚಾಲ್ತಿಯಲ್ಲಿರುವ ನೋಟುಗಳಿಗಿಂತ ದುಪ್ಪಟ್ಟು ಬಾಳಿಕೆ ಬರಲಿವೆ. ಈಗಿರುವ 100 ರೂಪಾಯಿ ನೋಟನ್ನು ಹೋಲುವ ಹೊಸ 100 ರೂಪಾಯಿ ನೋಟು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ದೇಗುಲಗಳ ಮೂಲಕ ಗೋವುಗಳ ಪಾಲನೆ, ಆರಾಧನೆ; ಸಚಿವ ಪೂಜಾರಿ ಕೈಂಕರ್ಯಕ್ಕೆ ಪ್ರಶಂಶೆ
(ಜಯ ಪ್ರಕಾಶ್) ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಪೂಜೆ ಪುನಸ್ಕಾರ, ವೈದಿಕ ವಿಧಿ ವಿಧಾನಗಳಿಗಷ್ಟೇ ದೇವಾಲಯಗಳು ಸೀಮಿತವಾಗಿಲ್ಲ. ಹಿಂದೂ ಸಂಸ್ಕೃತಿ-ಪರಂಪರೆ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಲು ಈ ಧಾರ್ಮಿಕ ಕೇಂದ್ರ ಸಜ್ಜಾಗುತ್ತಿವೆ. ಸಾಮಾನ್ಯವಾಗಿ ದೇವಾಲಯ ಬೆರಳೆಣಿಕೆಯ ದೇವರ ಮೂರ್ತಿ ಪೂಜೆಗೆ ಸೀಮಿತವಾಗುವುದುಂಟು. ಇದೀಗ ಆ ದೇವಾಲಯಗಳು ಮುಕ್ಕೋಟಿ ದೇವರನ್ನು ಹೊತ್ತುಕೊಂಡಿರುವ ಗೋವುಗಳ ಆರಾಧನೆಯ ತಾಣವಾಗಲಿದೆ. ಇದಕ್ಕೆಂದು ವೇದಿಕೆ ಕಲ್ಪಿಸಿದ್ದಾರೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ. ರಾಜ್ಯದ ಪ್ರಮಖ 25 ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆಗಳನ್ನು ನಿರ್ಮಿಸಲು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕ್ರಮ ಆರಂಭಿಸಿದ್ದಾರೆ. ಪ್ರಕೃತಿಯನ್ನು ಆರಾಧಿಸುವುದು ಹಿಂದೂ ಸಂಸ್ಕೃತಿಯ ಒಂದು ಭಾಗ. ಅದರಲ್ಲೂ ಹಾಲು ನೀಡುವ ಹಸುಗಳು ಹಿಂದೂಗಳ ಪಾಲಿಗೆ ಜೀವಂತ ದೈವ. ಆದರೆ ಇದೇ ಗೋವುಗಳು ಕಟುಕರ…
