ಕೊರೋನಾ ಸೋಂಕಿತರು ಹತ್ತಿರ ಬಂದರೆ ಅಲಾರ್ಮ್: ಇಲ್ಲಿದೆ ನೋಡಿ ಮೊಬೈಲ್ ಆ್ಯಪ್ ವಿಶೇಷ.

ಆದುನಿಕ ತಂತ್ರಜ್ಞಾನ ಸೋಂಕು ತಡೆಯುವಲ್ಲೂ ಮಹತ್ವದ ಪಾತ್ರವಹಿಸುತ್ತದೆ. ಅದರಲ್ಲೂ ‘ಆರೋಗ್ಯ ಸೇತು’ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದೆ.

ಬೆಂಗಳೂರು: ಕೊರೋನಾ ವೈರಾಣು ಎಲ್ಲೆಲ್ಲೂ ಭೀತಿಯ ಕಾರ್ಮೋಡ ಆವರಿಸುವಂತೆ ಮಾಡಿದೆ. ಮನೆಯಿಂದ ಹೊರ ಹೋಗಲಾಗದ ಸ್ಥಿತಿ ಇದ್ದು, ಒಂದು ವೇಳೆ ದೀನಸಿ, ಹಣ್ಣು-ತರಕಾರಿಗೆಂದು ಹೊರಗೆ ಹೋದರೆ ಸಾಕು ಸೋಂಕು ಅಂಟಿಕೊಳ್ಳಬಹುದೆಂಬ ಆತಂಕ ಸಹಜ. ಯಾರಲ್ಲಿ ಸೋಕು ಇರಬಹುದೇನೋ ಎಂಬ ಅನುಮಾನ ಕೂಡಾ.

ಇಂತಹಾ ಸಂದರ್ಭದಲ್ಲಿ ಸೋಂಕಿತರ ಬಗ್ಗೆ ಮೊಬೈಲ್ ಆ್ಯಪ್ ಸುಳಿವು ನೀಡುತ್ತದೆ ಅಂದ್ರೆ ನಂಬುತ್ತೀರಾ? ಆರೋಗ್ಯ ಸೇವೆಗಳನ್ನು ಸಂಪರ್ಕಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ‘ಆರೋಗ್ಯ ಸೇತು’ ಆ್ಯಪ್ ಇಂಥದ್ದೊಂದು ಕಾರ್ಯ ನಿರ್ವಹಿಸುತ್ತದಂತೆ.

ಕೆಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ಗೆ ಟ್ರ್ಯಾಕರ್ ಸಿಸ್ಟಂ ಅಳವಡಿಸಲಾಗಿದ್ದು, ಸೋಂಕಿತರು ಹತ್ತಿರ ಬಂದರೆ ಎಚ್ಚರಿಕೆಯ ಸೂಚನೆಯನ್ನು ಇದು ನೀಡುತ್ತದಂತೆ. ಈಗಿರುವ ಆ್ಯಪನ್ನು ಇನ್ನಷ್ಟು ಡೆವೆಲಪ್ ಮಾಡುವ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ.

ಈಗಾಗಲೇ ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಾ ‘ಆರೋಗ್ಯ ಸೇತು’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಜನತೆಗೆ ಸಲಹೆ ಮಾಡಿದ್ದಾರೆ. ಸಾಂಕ್ರಾಮಿಕ ರೋಗ ತಡೆಗಟ್ಟಲು ಸಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇತು ಆ್ಯಪ್ ಸಹಕಾರಿ ಎನ್ನುತ್ತಾರೆ ಅಧಿಕಾರಿಗಳು.

ಪ್ರಧಾನಿ ಮೋದಿ ಸಲಹೆ

ಲಾಕ್‌ಡೌನ್ ವಿಸ್ತರಣೆಯ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೀಡಾ ‘ಆರೋಗ್ಯ ಸೇತು’ ಆ್ಯಪ್ ಡೌನ್‌ಲೋಡ್ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಹಾಗಾಗಿ ಇದರಿಂದ ಸಾಕಷ್ಟು ಅನುಕೂಲತೆಗಳಿರಬಹುದೆಂಬ ಬಗ್ಗೆ ಚರ್ಚೆಯೂ ನಡೆಯುತ್ತಿದೆ.

ಇದನ್ನೂ ಓದಿ.. ರಾತ್ರಿ ಬೆಳಗಾಗುವಷ್ಟರಲ್ಲಿ ಕಹಿ ಸುದ್ದಿ; ಕೊರೋನಾ ಸಾವಿನ ಸರಣಿ 

 

Related posts