ಹಲಸಿನ ಹಣ್ಣು ಎಷ್ಟು ಟೆಸ್ಟೋ ಜನರಿಗೂ ಅಷ್ಟೇ ಇಷ್ಟ. ಈ ಹಣ್ಣಿನ ಉಪಯೋಗ ಒಂದೆರಡಲ್ಲ. ಇನ್ಸ್ಟಾಂಟ್ ಟೇಸ್ಟೀ ಫುಡ್ ಎಂದೇ ಗುರುತಾಗಿರುವ ಹಲಸಿನ ಹಣ್ಣು ಬಗೆಬಗೆಯ ಖಾದ್ಯಗಳಿಗೂ ಸೂಕ್ತ. ಅದರಲ್ಲೂ ತುಳುನಾಡ ಖಾದ್ಯ ಹಲಸಿನ ಹಣ್ಣಿನ ದೋಸೆಯಂತೂ ಭಾರೀ ಫೇಮಸ್ಸು. ಈ ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನವೂ ಬಲು ಸುಲಭ. ಕರಾವಳಿ ಫ್ಲೇವರ್ ತಂಡ ‘ಹಲಸಿನ ಹಣ್ಣಿನ ದೋಸೆ’ ತಯಾರಿಸುವ ಸರಳ ವಿಧಾನವನ್ನು ತೋರಿಸಿಕೊಟ್ಟಿದೆ. ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು
Category: ವೈವಿದ್ಯ
ತೆಂಗಿನಕಾಯಿ ಹಾಲು, ಪೌಡರ್.. ಮಾಡೋ ವಿಧಾನ ಬಲು ಸುಲಭ
ತೆಂಗಿನಕಾಯಿ ಹಾಲು ಅಥವಾ ತೆಂಗಿನಕಾಯಿ ಪುಡಿ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಮಾರುಕಟ್ಟೆಗಳಲ್ಲಿ ಪೈಪೋಟಿ ದರದಲ್ಲಿ ಈ ವಸ್ತು ಸಿಗುತ್ತದೆಯಾದರೂ ಹಳ್ಳಿ ಸೊಗಡಿನ ಪರಿಶುದ್ಧ ತೆಂಗಿನಕಾಯಿ ಹಾಲು ಸಿಗಲಾರದು. ಸಮಯ ಹೊಂದಿಸಿಕೊಂಡಲ್ಲಿ ಮನೆಯಲ್ಲೇ ಇದನ್ನು ತಯಾರಿಸಬಹುದು. ಇದರ ತಯಾರಿಯೂ ಬಲು ಸುಲಭ. ಬೇಕಾದ ಸಾಮಗ್ರಿ ತೆಂಗಿನಕಾಯಿ 1 ಮಾಡುವ ವಿಧಾನ ಮೊದಲಿಗೆ ತೆಂಗಿನಕಾಯಿಯನ್ನು ತುಂಡು ಅಥವಾ ತುರಿದು ಇಟ್ಟುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಬಟ್ಟೆ ಹಾಕಿ ಅದಕ್ಕೆ ರುಬ್ಬಿಕೊಂಡದ್ದನ್ನು ಹಾಕಿ 2-3. ಸಲ ಹಿಂಡಬೇಕು. ಹಾಗೆ ಹಿಂಡಿದಾಗ ತೆಂಗಿನಕಾಯಿ ಹಾಲು ಸಿದ್ಧವಾಗುತ್ತದೆ. ಆ ಬಟ್ಟೆಯಲ್ಲಿ ಉಳಿದ ತೆಂಗಿನಕಾಯಿಯನ್ನು ತೆಗದು ಒಂದು ಬಾಣಲೆಯಲ್ಲಿ 10 ನಿಮಿಷಗಳ ಕಾಲ ಹುರಿಯಬೇಕು. ನಂತರ ಅದನ್ನು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಂಡಾಗ ಪೌಡರ್ ತರಹ ತೆಂಗಿನಕಾಯಿ ಹುಡಿ ಸಿದ್ಧವಾಗುತ್ತದೆ. ಇದನ್ನು…
ಮಾವು ಸೂಪರ್.. ‘ಮಾವಿನ ಹಲ್ವಾ’ ಸೂಪರೋ ಸೂಪರ್
ಈಗ ಬಿರು ಬೇಸಿಗೆಯ ಸಮಯ.. ಕಡಿಮೆಯಾಗದ ಬಿಸಿಲ ಧಗೆ.. ಈ ವಸಂತಕಾಲದಲ್ಲಿ ಸಿಗುವ ‘ಮಾವು’ ಅದೆಲ್ಲವನ್ನೂ ಮರೆಸುವ ಮಾಂತ್ರಿಕ ಹಣ್ಣು..! ಮನೆಯೊಳಗೇ ಕುಳ್ಳಿರಿಸುವಂತೆ ಮಾಡುವ ಬೇಸಿಗೆಯ ವೇಳೆ ಬಗೆಬಗೆಯ ನಳಪಾಕಕ್ಕೆ ಅವಕಾಶ ಕೊಟ್ಟಿರುವುದೂ ಇದೇ ಮಾವು. ಹಣ್ಣುಗಳ ರಾಜ ‘ಮಾವು’ ತಿನ್ನಲಷ್ಟೆ ಅಲ್ಲ, ರಾಸಾಯನಕ್ಕೂ ಸೂಕ್ತ. ಅಷ್ಟೇ ಏಕೆ? ಮಾವಿನ ಖಾದ್ಯಗಳು ಅವೆಷ್ಟೋ? ಅದರಲ್ಲೂ ‘ಮಾವು ಹಲ್ವಾ’ ಅಂದ್ರೆ..? ವ್ಹಾ..!! ತಿಂದರೆ ಮತ್ತೆ ಮತ್ತೆ ಆಸ್ವಾದಿಸಬೇಕೆಂದು ಹಾತೊರೆಯುತ್ತೀರಿ ಖಂಡಿತ. ಸ್ವಾದಿಷ್ಟದ ‘ಮ್ಯಾಂಗೋ ಕೋಕನಟ್ ಹಲ್ವಾ’ ಮಾಡುವ ವಿಧಾನವೂ ಬಲು ಸುಲಭ.. ಇಲ್ಲಿದೆ ನೋಡಿ ‘ಮಾವಿನ ಹಣ್ಣಿನ ಹಲ್ವಾ’ ಮಾಡುವ ವಿಧಾನ.. ಇದನ್ನೂ ಓದಿ.. ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕ; ‘ಮೊಟ್ಟೆ ಸುಕ್ಕ’ದ ಹಿಂದಿದೆ ಸ್ವಾದಿಷ್ಟದ ರಹಸ್ಯ
ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕ; ‘ಮೊಟ್ಟೆ ಸುಕ್ಕ’ದ ಹಿಂದಿದೆ ಸ್ವಾದಿಷ್ಟದ ರಹಸ್ಯ
ಕರಾವಳಿ ಮಲಬಾರ್ ಖಾದ್ಯ ಅಂದ್ರೆ ನಾನ್ ವೆಜ್ ಪ್ರಿಯರಿಗೆ ಖುಷಿ. ಕಡಲಲ್ಲಿ ಸಿಗುವ ಮೀನುಗಳಷ್ಟೇ ಅಲ್ಲ ಕೋಳಿ ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕದಲ್ಲೂ ಕಡಲತಡಿಯ ಜನ ಸೂಪರ್. ಅದರಲ್ಲೂ ಕೋಳಿ ಮೊಟ್ಟೆ ಸ್ವಾದಿಷ್ಟ ಸೈ ಹಾಗೂ ಆರೋಗ್ಯಕ್ಕೂ ಜೈ ಎಂಬಂಥದ್ದು. ಇತ್ತೀಚಿನ ದಿನಗಳಲ್ಲಿ ಕರಾವಳಿಯ ಎಗ್ ಕರಿಗೆ ಚೈನೀಸ್ ಸ್ಪರ್ಶವೂ ಸಿಕ್ಕಿದೆ. ಆದರೂ ಕರಾವಳಿಯ ವಿಶಿಷ್ಟ ಸ್ವಾದಿಷ್ಟದ ಮುಂದೆ ಅದ್ಯಾವುದೂ ಸಾಟಿಯಲ್ಲ. ವಿಶಿಷ್ಟ ಸ್ವಾದಿಷ್ಟದ ‘ಮೊಟ್ಟೆ ಸುಕ್ಕ’ ಮಾಡುವ ವಿಧಾನ ಇಲ್ಲಿದೆ.
ಹಲಸಿನ ಬೀಜದ ಪರೋಟ ತಿಂದಿದ್ದೀರಾ? ‘ಹಸಿವಿಗೂ ಸೂಕ್ತ.. ಆರೋಗ್ಯಯುಕ್ತ’
ಪರೋಟಾಗಳಲ್ಲಿ ಹತ್ತಾರು ವಿಧಗಳಿವೆ. ಆದರೆ ಹಲಸಿನ ಬೀಜದ ಪರೋಟ ತಿಂದಿದ್ದೀರಾ? ಅದರ ಸವಿಯುಂಡಿದ್ದೀರಾ? ಕೇರಳ ಪರೋಟಾ, ಪನೀರ್ ಪರೋಟ ರೀತಿಯಲ್ಲೇ ಇದ್ದರೂ ಟೇಸ್ಟ್ ಡಿಫರೆಂಟ್.. ಟೆಸ್ಟ್ ಬಗ್ಗೆ ಕೇಳ್ತೀರಾ? ಸ್ವಾದಿಷ್ಟ ತಿಂಡಿ ಬಗ್ಗೆ ಹೇಳೋದೇ ಬೇಡ.. ‘ಹಸಿವಿಗೂ ಸೂಕ್ತ ಮತ್ತು ಆರೋಗ್ಯಯುಕ್ತ’ ಎನ್ನುವುದು ಹಿರಿಯರ ಮಾತು.. ಇಲ್ಲಿದೆ ನೋಡಿ ಹಲಸಿನ ಬೀಜ ಪರೋಟ ಮಾಡುವ ವಿಧಾನ. ಬೇಕಾದ ಸಾಮಗ್ರಿ: ಹಲಸಿನ ಬೀಜ 50 ಈರುಳ್ಳಿ 1 ಗೋಧಿಹುಡಿ 3 ಕಪ್ ಆಮ್ಚೂರ್ ಅರ್ಧ ಚಮಚ ಕೆಂಪು ಮೆಣಸಿನ ಹುಡಿ ಅರ್ಧ ಚಮಚ ಕೊತ್ತಂಬರಿ ಹುಡಿ ಅರ್ಧ ಚಮಚ ಎಣ್ಣೆ 7-8 ಚಮಚ ಜೀರ 1 ಚಮಚ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರ್ ನಲ್ಲಿ ಹಲಸಿನಕಾಯಿ ಬೀಜಕ್ಕೆ ನೀರು ಹಾಕಿ 6-7 ವಿಸಿಲ್ ಬರೆಸಬೇಕು. ನಂತರ ಅದರ ಸಿಪ್ಪೆ ತೆಗೆದು ಚೆನ್ನಾಗಿ ಸ್ಮ್ಯಾಷ್…
‘ನೀರಕಡ್ಡಿ ತಂಬುಳಿ’ ಆಹ್ಲಾದವೂ ಹೌದು.. ಆರೋಗ್ಯಕರವೂ ಹೌದು..
ಬೇಸಿಗೆಯ ಬೇಗೆಯ ನಡುವೆ ದಾಹ ತಣಿಸಲು ಮಜ್ಜಿಗೆ ಸೂಕ್ತ.. ಅದಷ್ಟೇ ಅಲ್ಲ ಅದರ ಜೊತೆ ‘ನೀರಕಡ್ಡಿ ತಂಬುಳಿ’ ಕೂಡಾ ಒಳ್ಳೆಯದು. ‘ನೀರಕಡ್ಡಿ ತಂಬುಳಿ’ ಸೇವಿಸಿದರೆ.. ಆ ಆಹ್ಲಾದಕ್ಕೆ ಇನ್ನಾವುದೂ ಸಾಟಿ ಇಲ್ಲ. ಊಟದ ಜೊತೆಗೂ ಇದು ಸ್ವಾದಿಷ್ಟ. ಹಾಗಾಗಿ ‘ನೀರಕಡ್ಡಿ ತಂಬುಳಿ’ ಇಷ್ಟಪಡುವವರೇ ಹೆಚ್ಚು. https://kitchen.trendyangel.in/recipes/peperomia-pellucida-thambuli/ ಬೇಕಾದ ಸಾಮಾಗ್ರಿ: ತೆಂಗಿನತುರಿ 1 ಕಪ್ ಜೀರ 1 s ಹಸಿಮೆಣಸು 1 ನೀರಕಡ್ಡಿ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ: ಮೊದಲಿಗೆ ನೀರಕಡ್ಡಿಯನ್ನು ಚೆನ್ನಾಗಿ ತೊಳೆದು, ಅದನ್ನು ಕಟ್ ಮಾಡಬೇಕು. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ. ಬೆಂದ ನಂತರ ನೀರನ್ನು ಸೋಸಿ ಅಥವಾ ತಣ್ಣಗಾಗಲು…
ಅಪರೂಪದಲ್ಲಿ ಅಪರೂಪವಾಗುತ್ತಿದೆ ಸ್ವಾದಿಷ್ಟದ ಸ್ವೀಟು ‘ಕಾಯಿ ಸುಕ್ಕಿನ ಉಂಡೆ’
ದುರ್ಗಾರಾಧನೆಯ ನವರಾತ್ರಿ ಎಂದರೆ ಸಾಕು ಕೈಂಕರ್ಯದ ಜೊತೆಗೆ ಒಂದಿಷ್ಟು ಸ್ವಾದಿಷ್ಟದ ತಿನಿಸುಗಳ ಸೊಗಸು.. ದೀಪಾವಳಿ ಅಂದರೆ ಸಾಕು, ದೇವರ ಆರಾಧನೆಯ ಜೊತೆಗೆ ಮತ್ತಷ್ಟು ಸ್ವಾದಿಷ್ಟದ ಸ್ವೀಟು.. ಸ್ವೀಟು ಇದ್ದಾರೆ ಸಾಕು ನಿತ್ಯವೂ ನವರಾತ್ರಿಗಳೇ.. ಪ್ರತಿ ನಿತ್ಯವೂ ದೀಪಾವಳಿಯೇ.. ಆದರೆ ನವರಾತ್ರಿ, ದೀಪಾವಳಿ ಸಂದರ್ಭದ ಸಿಹಿತಿನಿಸುಗಳಲ್ಲಿ ಒಂದಾದ ಅಪರೂಪದ ‘ಕಾಯಿ ಸುಕ್ಕಿನ ಉಂಡೆ’ ನಿತ್ಯವೂ ಸಿಗುತ್ತಾ? ಇತ್ತೀಚಿನ ತಲೆಮಾರನ್ನು ಗಮನಿಸಿದರೆ ಹಳ್ಳಿ ಸೊಗಡಿನ ಈ ಖಾದ್ಯ ದೀಪಾವಳಿ-ನವರಾತ್ರಿ ಸಂದರ್ಭದಲ್ಲೂ ವಿರಳ ಎಂಬಂತಿದೆ. ಆದರೆ ಈ ‘ಕಾಯಿ ಸುಕ್ಕಿನ ಉಂಡೆ’ಯನ್ನು ಸವಿದ ಮಂದಿ ಮಾತ್ರ ಕಲ್ಪನೆಯ ಲೋಕದಲ್ಲಿ ತೇಲಿ ಹೋಗುವರೆಂಬುದು ಸಿಹಿ ಸತ್ಯ. ಈ ‘ಕಾಯಿ ಸುಕ್ಕಿನ ಉಂಡೆ’ ಅಥವಾ ‘ಸುಕ್ರುಂಡೆ’ ಮಾಡುವ ವಿಧಾನ ಕೂಡಾ ಬಲು ಸುಲಭ. ಇಲ್ಲಿದೆ ನೋಡಿ ಈ ನಳಪಾಕ ಮಾಡುವ ವಿಧಾನ. ಇದನ್ನೂ ಮಾಡಿ ನೋಡಿ ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ…
ಹಳ್ಳಿ ಶೈಲಿಯ ಚಿಕನ್ ಚಾಪ್ಸ್’ಗೆ ಟೇಸ್ಟೀ ಟಚ್
ಕರಾವಳಿಯಲ್ಲಿ ಮೀನೂಟ ಸವಿಯುವುದೇ ಒಂದು ಸೊಗಸು. ಮತ್ಸ್ಯ ಸ್ವಾದಿಷ್ಟಕ್ಕಷ್ಟೆ ಅಲ್ಲ, ಕರಾವಳಿ ಮಲೆನಾಡು ಮಾಂಸ ಖಾದ್ಯದ ವಿಚಾರದಲ್ಲೂ ಮುಂದಿದೆ. ಅದರಲ್ಲೂ ಚಿಕನ್ ಕರಿ ವಿಚಾರದಲ್ಲಿ ಬಗೆಬಗೆಯ ಪ್ರಯೋಗಗಳೂ ನಡೆಯುತ್ತಿದೆ. ಅದರಲ್ಲೂ ಹಳ್ಳಿ ಶೈಲಿಯ “ಚಿಕನ್ ಚಾಪ್ಸ್” ಸಿಕ್ಕಿದರೆ..? ಆಹಾ ಏನೊಂದು ಸ್ವಾಧಿಷ್ಠಾ ಅಂತೀರಾ.. ಇಲ್ಲಿದೆ ನೋಡಿ ವಿಶಿಷ್ಟ ನಳಪಾಕ. ಇದನ್ನೂ ಓದಿ.. ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ವೀಡಿಯೋ ಕುತೂಹಲ
ಬಿರುಬೇಸಿಗೆ ಕಾಲದಲ್ಲಿ ತಂಪಾಗಿಸುತ್ತೆ ‘ಫ್ರೂಟ್ಸ್ ಫಾಲೋಡ’
ಇದು ಬಿರು ಬೇಸಿಗೆಯ ಕಾಲ. ಎಷ್ಟು ತಂಪು ಪಾನೀಯ ಕುಡಿದರೂ ದೂರವಾಗದ ಬಾಯಾರಿಕೆ. ಇಂತಹಾ ಸಮಯದಲ್ಲಿ ತಂಪು ಪಾನೀಯದ ಮೊರೆ ಹೋಗದೆ ಹಣ್ಣಿನ ರಸ, ಎಳನೀರಿನಂತಹಾ ಪದಾರ್ಥಗಳ ಮೊರೆ ಹೋಗಿ. ಬಾಯಾರಿಕೆಯೂ ದೂರವಾಗುತ್ತೆ; ಆರೋಗ್ಯವೂ ಸುಧಾರಿಸುತ್ತೆ. ಅಂತಹಾ ನಳಪಾಕವೊಂದು ಇಲ್ಲಿದೆ. ಅದುವೇ ‘ಫ್ರೂಟ್ಸ್ ಫಾಲೋಡ’. ಸ್ವಾದಿಷ್ಟ ‘ಫ್ರೂಟ್ಸ್ ಫಾಲೋಡ’ ಮಾಡುವ ವಿಧಾನ ಹೀಗಿದೆ. ಬೇಕಾದ ಸಾಮಗ್ರಿ: ಪಪ್ಪಾಯ ಅರ್ಧ ಕಪ್ ಕಲ್ಲಂಗಡಿ ಅರ್ಧ ಕಪ್ ಬಾಳೆಹಣ್ಣು ಅರ್ಧ ಕಸ್ ಕಸ್ 3 ಸಕ್ಕರೆ 1 ಉಪ್ಪು ಒಂದು ಚಿಟಿಕೆ ಚಿಕ್ಕು ಇಸ್ ಕ್ರೀಮ್ 3 ಸ್ಕೂಪ್ ಜೇನುತುಪ್ಪ 3 ಚಮಚ ಮಾಡುವ ವಿಧಾನ: ಮೊದಲಿಗೆ ಹಣ್ಣುಗಳನ್ನು ಸಣ್ಣ ಸಣ್ಣಗೆ ಹಚ್ಚಿ ಇಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕಸ್ ಕಸ್ ಸಿದ್ಧಮಾಡಿಕೊಳ್ಳಬೇಕು. ಅಮೇಲೇ ಒಂದು ಲೋಟ ತೆಗೆದುಕೊಂಡು ಅದಕ್ಕೆ ಒಂದರ ಮೇಲೆ ಒಂದು ಹಚ್ಚಿಕೊಂಡ ಹಣ್ಣು,…
‘ಪುಳಿ ಮುಂಚಿ’ಗಿಂತ ಭಿನ್ನ ‘ಚಿಕನ್ ಪೆಪ್ಪರ್ ಡ್ರೈ’
ಕರಾವಳಿ ಮಲಬಾರ್ ತಿನಿಸುಗಳೆಂದರೆ ಅದೇನೋ ಸ್ಪೆಷಲ್. ಫಿಶ್ ಕರಿ ಅಷ್ಟೇ ಅಲ್ಲ ಎಲ್ಲಾ ರೀತಿಯ ನಾನ್ ವೆಜ್ ಪದಾರ್ಥಗಳೂ ತನ್ನದೇ ಆದ ಟೇಸ್ಟೀ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾನ್ ವೆಜ್ ವಿಚಾರಕ್ಕೆ ಬಂದಾಗ ಹಳ್ಳಿ ಸೊಗಡಿನ ಭಾಷೆಯಲ್ಲಿ ‘ಪುಳಿ ಮುಂಚಿ’ ಎಂಬ ಪದದಲ್ಲಿ ಕರಾವಳಿ ಕರಿಯನ್ನು ವರ್ಣಿಸಲಾಗುತ್ತಿತ್ತು. ಈಗೀಗ ಕರಾವಳಿ ನಳಪಾಕದಲ್ಲೂ ವೈವಿದ್ಯತೆಯನ್ನು ಕಾಣಬಹುದಾಗಿದೆ. ಚಿಕನ್ ಪೆಪ್ಪರ್ ಡ್ರೈ ಒಂದು ರೀತಿ ಸ್ಪೆಷಲ್ ಎಂದೇ ಹೇಳಬಹುದು. ಇದನ್ನು ಮಾಡುವ ವಿಧಾನ ಹೀಗಿದೆ ನೋಡಿ.. ಇದನ್ನೂ ಓದಿ.. ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ ಬಲು ಸೊಗಸು.. ಮಾಡೋ ವಿಧಾನ ಗೊತ್ತಾ?
