ಪ್ರಜ್ವಲಿಸಿತು ದಿಗ್ವಿಜಯದ ಜ್ಯೋತಿ;  ದೀಪ ಯಜ್ಞ ಕಂಡು ಬಾವುಕರಾದ ಮೋದಿ

ಮತ್ತೆ ಒಗ್ಗಟ್ಟಿನ ಮಂತ್ರ.. ಪುಟ್ಟ ಪುಟ್ಟ ಹಣತೆಗಳಲ್ಲೇ ಭವ್ಯ ಭಾರತ…

ಹೌದು.. ಕೊರೋನಾ ಹಾವಳಿಯಿಂದ ತತ್ತರಿಸಿರುವ ಭಾರತದಲ್ಲಿ ಆತಂಕದಲ್ಲಿರುವ ಜನತೆಗೆ ಆತ್ಮವಿಶ್ವಾಸ ತುಂಬಲು ಮೋದಿ ನೀಡಿದ ಟಾಸ್ಕನ್ನು ಇಡೀ ರಾಷ್ಟ್ರವೇ ಗೌರವದಿಂದ ಮಾಡಿ ತೋರಿಸಿದೆ.

ದೇಶದ ಬೀದಿ ಬೀದಿಗಳಲ್ಲೂ ಪುಟ್ಟ ಹಣತೆಗಳಲ್ಲೂ ಜಗತ್ತನ್ನೇ ಬೆಳಗಿಸುವ ಜ್ಯೋತಿ ಪ್ರಜ್ವಲಿಸಿತು. ಕಾಯಾ ವಾಚಾ ಮನಸಾ.. ಜನತೆ ಏಕಕಾಲದಲ್ಲಿ  ಅತ್ಯಂತ ಶ್ರದ್ದೆಯಿಂದ ಈ ದೀಪೋತ್ಸವದಲ್ಲಿ ಪಾಲ್ಗೊಂಡು ಅಂಧಶ್ರದ್ದೆಯಲ್ಲಿದ್ದವರಲ್ಲಿ ಜ್ಞಾನ ತುಂಬುವ ಪ್ರಯತ್ನಕ್ಕೆ ಮುನ್ನುಡಿ ಬರೆದರು.

ಅಂದು ಚಪ್ಪಾಳೆ, ಇಂದು ದೀಪ ಯಜ್ಞ

ಕೊರೋನಾ ವೈರಾಣು ಭಾರತದಲ್ಲಿ ಹರಿದಾಡಲಾರಂಭಿಸಿದಾಗಲೇ ಪ್ರಧಾನಿ ಮೋದಿಯವರು ಜನತಾ ಕರ್ಫ್ಯೂ’ಗೆ ಕರೆ ನೀಡಿ ಚಪ್ಪಾಳೆ ಮೂಲಕ ಮಾರಕ ರೋಗದ ವಿರುದ್ಧ ಸೆಣಸಾಡುತ್ತಿರುವ ವೈದ್ಯರು ಹಾಗೂ ಸೇನಾನಿಗಳಿಗೆ ಧನ್ಯವಾದ ಹೇಳಲು ಮನವಿ ಮಾಡಿದ್ದರು. ಇದನ್ನು ಭಕ್ತಿಯ ಸಂಕೇತವಾಗಿ ಇಡೀ ದೇಶವೇ ಪಾಲಿಸಿತ್ತು. ಅನಂತರದ ಲಾಕ್ ಡೌನ್ ಆದೇಶವನ್ನೂ ಇಡೀ ದೇಶದ ಜನ ಗೌರವದಿಂದಲೇ ಪಾಲಿಸುತ್ತಿದ್ದಾರೆ. ಇದೀಗ ಭಾನುವಾರ ರಾತ್ರಿ 9 ಗಂಟೆ ಹೊತ್ತಿಗೆ ನವ ನಿಮಿಷಗಳ ದೀಪ ಇಡೀ ದೇಶಕ್ಕೆ ಚೈತನ್ಯ ತುಂಬಿತು.

ದೇಶದಲ್ಲೇ ಅಪೂರ್ವ ಸನ್ನಿವೇಶ

ಪ್ರಧಾನಿಯೊಬ್ಬರು ಸಾಮಾಜಿಕ ವ್ಯವಸ್ಥೆಯಲ್ಲಿ ಕೈಂಕರ್ಯದ ಸೂತ್ರವನ್ನು ಪಾಲಿಸಲು ಕರೆ ಕೊಟ್ಟ ಇತಿಹಾಸ ಅಪೂರ್ವ. ಇದೀಗ ಮೋದಿಯವರ ಈ ಕರೆಯನ್ನು ಬಹಳಷ್ಟು ಮಂದಿ ಆರಾಧನೆಯ ರೂಪದಲ್ಲಿ ಅನುಸರಿಸಿದರು.. ಇನ್ನೂ ಕೆಲವರು ದೇಶಭಕ್ತಿಯ ಪ್ರತೀಕವಾಗಿ ಕಂಡರು..

 

ಇವರೆಲ್ಲರ ಕೆಲಸದಲ್ಲೂ ದಿಗ್ವಿಜಯದ ಜ್ಯೋತಿ ಪ್ರಜ್ವಲಿಸುತ್ತಲಿತ್ತು. ಈ ಅಪೂರ್ವ ಸನ್ನಿವೇಶ ಕಂಡ ಮೋದಿ ಬಾವಪರವಶರಾದರು.

 

ಇದನ್ನೂ ಓದಿ..  ಟ್ರಂಪ್-ಮೋದಿ ನಡುವಿನ ಮಾತುಕತೆಯ ರಹಸ್ಯ; ಪಾಕ್-ಚೀನಾಕ್ಕೆ ಮುಂದಿದೆ ಮಾರಿಹಬ್ಬ?

Related posts