ಬರಲಿದೆ ಹೊಸ 100 ರೂ ನೋಟು.. ವಿಶೇಷತೆ ಏನು ಗೊತ್ತಾ?

ದೆಹಲಿ: ಎಲ್ಲೆಲ್ಲೂ 2000 ರೂಪಾಯಿ ನೋಟ್ ಬ್ಯಾನ್ ವದಂತಿ ಹಬ್ಬಿದೆ. ಆದರೆ ಇಂತಹಾ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಸರ್ಕಾರ ಕೂಡಾ ಹೇಳಿದೆ. ಆದರೆ ಶೀಘ್ರವೇ 100 ರೂಪಾಯಿಯ ಹೊಸ ನೋಟು ಚಾಲ್ತಿಗೆ ಬರಲಿದೆ.

ಹಲವು ವೈಶಿಷ್ಟ್ಯಗಳ ಹೊಸ ನೋಟು ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. 100 ರೂಪಾಯಿ ಮುಖಬೆಲೆಯ ಈ ಹೊಸ ನೋಟಿನ ವಿಶೇಷತೆ ಎಂದರೆ ಇದು ಸುಲಭದಲ್ಲಿ ಹರಿದುಹೋಗಲ್ಲ. ವಾರ್ನಿಸ್‌ ಪೇಂಟ್‌ ಬಳಸಿ ಮುದ್ರಿಸಲಾಗಿರುವ ಈ ಹೊಸ ನೋಟನ್ನು ನೀರಿನಲ್ಲಿ ನೆನೆದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಸದ್ಯ ಚಾಲ್ತಿಯಲ್ಲಿರುವ ನೋಟುಗಳಿಗಿಂತ ದುಪ್ಪಟ್ಟು ಬಾಳಿಕೆ ಬರಲಿವೆ.

ಈಗಿರುವ 100 ರೂಪಾಯಿ ನೋಟನ್ನು ಹೋಲುವ ಹೊಸ 100 ರೂಪಾಯಿ ನೋಟು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Related posts