ರಾಜ್ಯದಲ್ಲಿ ಮತ್ತೊಬ್ಬ ಟೆಕ್ಕಿಗೆ ಕೊರೋನಾ ಸೋಂಕು

ಬೆಂಗಳೂರು: ಚೀನಾ ಹಾಗೂ ಇಟಲಿಯಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ರಾಜ್ಯದ ಐಟಿ ಹಬ್ ಬೆಂಗಳೂರಿನಲ್ಲೂ ತಲ್ಲಣ ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮತ್ತೊಬ್ಬ ಟೆಕ್ಕಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಅಮೆರಿಕಾ ಪ್ರವಾಸದಿಂದ ವಾಪಸಾಗಿರುವ ವ್ಯಕ್ತಿಗೆ ಕರೋನ ಸೋಂಕು ತಗುಲಿದ್ದು ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

Related posts