ಕೊರೋನಾ ಸೋಂಕಿತರ ಸಂಖ್ಯೆ 480; ಭಾರತದಲ್ಲೂ ಹೆಚ್ಚಿದ ಆತಂಕ

ದೆಹಲಿ: ಚೀನಾ, ಇಟೆಲಿ ಮಾತ್ರವಲ್ಲ ಇದೀಗ ಭಾರತದಲ್ಲೂ ಕೊರೋನಾ ಮರಣ ಮೃದಂಗವನ್ನೇ ಭಾರಿಸುತ್ತಿದೆ. ದೇಶದಲ್ಲಿ ಈ ಮಾರಣಾಂತಿಕ ವೈರಸ್ ಮತ್ತಿಬ್ಬರನ್ನು ಬಲಿ ಪಡೆದುಕೊಂಡಿದ್ದು ಭೀತಿ ಮತ್ತಷ್ಟು ಹೆಚ್ಚಿದೆ. ಕೇರಳ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಸೋಂಕಿತರ ಸಂಖ್ಯೆ 480ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 97, ಕೇರಳದಲ್ಲಿ95 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ದೆಹಲಿಯಲ್ಲಿ 26 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಕರ್ನಾಟಕದಲ್ಲಿ 99 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದೀಗ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಕಟ್ಟೆಚ್ಚರ ವಹಿಸಲಾಗಿದೆ. 30 ರಾಜ್ಯಗಳು, 548 ಜಿಲ್ಲೆಗಳು ಸೇರಿ ಕೇಂದ್ರಾಡಳಿತ ಪ್ರದೇಶಗಳನ್ನು ಲಾಕ್ ದೌನ್ ಮಾಡಲಾಗಿದೆ ಎಲ್ಲಾ ದೇಶೀಯ ವಿಮಾನಗಳ ಹಾರಾಟವನ್ನು ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ರದ್ದು ಮಾಡಲಾಗಿದೆ.

Related posts