ರಾಜ್ಯದಲ್ಲಿ ಮತ್ತೆ 11 ಹೊಸ ಕೊರೋನಾ ಕೇಸ್; ಒಟ್ಟು 9 ಮಂದಿ ಸಾವು

ರಾಜ್ಯದಲ್ಲಿ ನಿಲ್ಲದ ಸಾವಿನ ಕಥೆ. ಕಲಬುರ್ಗಿ, ಬೆಂಗಳೂರು, ವಿಜಯಪುರದಲ್ಲಿ ಸೋಂಕಿತರು ಸಾವನ್ನಪ್ಪಿದ್ದು ಕರ್ನಾಟಕದಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಇದೀಗ ಮತ್ತೆ 11 ಸೋಂಕಿನ ಪತ್ರಕರಣಗಳು ಬೆಳಕಿಗೆ ಬಂದಿವೆ. ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಪಟ್ಟಿ ಬೆಳೆಯುತ್ತಲೇ ಇದ್ದು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಲಾಕ್ ಡೌನ್ ಜಾರಿಗೊಳಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಆದರೂ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ. ನಿತ್ಯವೂ ಹತ್ತಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಡುತ್ತಿರುವುದು ಕಳವಳಕಾರಿ ಸಂಗತಿ.

ಮಂಗಳವಾರ ಬೆಳಿಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಕೂಡಾ ಕಳವಳಕಾರಿ ಸಂಗತಿಯತ್ತ ಬೆಳಕು ಚೆಲ್ಲಿತು. ಏಪ್ರಿಲ್ 13ರ ಸಂಜೆಯಿಂದ ಏಪ್ರಿಲ್ 14ರ ಮಧ್ಯಾಹ್ನದವರೆಗಿನ ವರದಿಯಂತೆ ಕರ್ನಾಟಕದಲ್ಲಿ 12 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಬುಲೆಟಿನ್ ಹೇಳಿದೆ.

  • ಬಾಗಲಕೋಟೆಯಲ್ಲಿ 3 ಹೊಸ ಪ್ರಕರಣಗಳು
  • ಕಲಬುರ್ಗಿಯಲ್ಲಿ 3 ಹೊಸ ಪ್ರಕರಣಗಳು
  • ಬೆಂಗಳೂರು ನಗರದಲ್ಲಿ 2 ಹೊಸ ಪ್ರಕರಣಗಳು
  • ವಿಜಯಪುರದಲ್ಲಿ 1 ಹೊಸ ಪ್ರಕರಣ
  • ಬೆಳಗಾವಿಯಲ್ಲಿ 1  ಹೊಸ ಪ್ರಕರಣ

ಈ ಮೂಲಕ ರಾಜ್ಯದಲ್ಲಿ ಲೋರೋನಾ ಸೋಂಕಿತರ ಸಂಖ್ಯೆ 258 ಕ್ಕೆ ಏರಿಕೆಯಾಗಿದೆ.  ಸೋಂಕು ದೃಢಪಟ್ಟಿರುವ 258 ಮಂದಿಯ ಪೈಕಿ 65 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಈ ನಡುವೆ ಸೋಮವಾರ ಸಂಜೆ ನಂತರ ಕಲಬುರ್ಗಿಯಲ್ಲಿ 55 ವರ್ಷ ವ್ಯಕ್ತಿ, ಬೆಂಗಳೂರು ನಗರದಲ್ಲಿ 65 ವರ್ಷದ ವೃದ್ಧ ಹಾಗೂ ವಿಜಯಪುರದಲ್ಲಿ 69 ವರ್ಷದ ವೃದ್ಧ ಕೋವಿಡ್-೧೯ ಸೋಂಕಿಗೆ ಬಲಿಯಾಗಿದ್ದಾರೆಂದು ಹೆಲ್ತ್ ಬುಲೆಟಿನ್ ವರದಿ ಹೇಳಿದೆ.

ಇದನ್ನೂ ಓದಿ.. ಕೊರೋನಾ ಸೋಂಕಿತರು ಹತ್ತಿರ ಬಂದರೆ ಅಲಾರ್ಮ್: ಇಲ್ಲಿದೆ ನೋಡಿ ಮೊಬೈಲ್ ಆ್ಯಪ್ ವಿಶೇಷ. 

 

Related posts