ಮನೆಯ ಬಳಿ ಫಲಭರಿತ ಗಾಂಜಾ ಗಿಡಗಳು; ಅಬಕಾರಿ ಇಲಾಖೆ ದಾಳಿ 55 ಸಾವಿರ ಮೌಲ್ಯದ ಗಾಂಜಾ ಜಪ್ತಿ

ದೊಡ್ಡಬಳ್ಳಾಪುರ; ಮನೆಯ ಬಳಿಯ ಜಾಗದಲ್ಲಿ ಗಾಂಜಾ ಗಿಡವನ್ನು ಬೆಳೆಯಲಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು 55 ಸಾವಿರ ಮೌಲ್ಯದ ಗಾಂಜಾವನ್ನ ಜಪ್ತಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಸೂಲಕುಂಟೆ ಗ್ರಾಮದ ಆದಿನಾರಾಯಣ ಎಂಬುವರ ಮನೆ ಬಳಿಯ ಜಾಗದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ನೆಲಮಂಗಲ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ವಲಯ ಹಾಗೂ ಉಪ ವಿಭಾಗದ ಸಿಬ್ಬಂದಿ ದಾಳಿ ಮಾಡಿದ್ದಾರೆ.

ಈ ವೇಳೆ 3 ಫಲಭರಿತ ಗಾಂಜಾ ಗಿಡಗಳು (1.200 ಕೆಜಿ) ಹಾಗೂ ಮಾರಾಟಕ್ಕಾಗಿ ಸಂಗ್ರಹಿಸಿದ 1.300 ಕೆಜಿ ಒಣ ಗಾಂಜಾ ಜಪ್ತಿ ಮಾಡಿದ್ದಾರೆ, NDPS ಕಾಯ್ದೆ 1985ರಡಿ ಪ್ರಕರಣ ದಾಖಲಿಸಿ ಆರೋಪಿ ಆದಿನಾರಾಯಣ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಇಲಾಖೆ ದಾಳಿಯಲ್ಲಿ ಪರಮೇಶ್ವರಪ್ಪ ಅಬಕಾರಿ ಉಪ ಅಧೀಕ್ಷಕರು ನೆಲಮಂಗಲ ಉಪ ವಿಭಾಗ, ಎಸ್ ಎಂ ಪಾಟೀಲ್ ಅಬಕಾರಿ ನಿರೀಕ್ಷಕರು ದೊಡ್ಡಬಳ್ಳಾಪುರ ವಲಯ. ಶುಭಾಶಚಂದ್ರ ಅಬಕಾರಿ ನಿರೀಕ್ಷಕರು ನೆಲಮಂಗಲ ಉಪ ವಿಭಾಗ, ಸಿಬ್ಬಂದಿಗಳಾದ ಹನುಮಂತರಾಜು ರಾಜಶೇಖರ, ಬಸಪ್ಪ, ಕೃಷ್ಣ , ಮಂಜುನಾಥ್, ಅಶಾರಾಣಿ, ನಾಗೇಶ್ ಭಾಗವಹಿಸಿದ್ದರು

Related posts