ಯುವತಿಯರೇ ಹುಷಾರ್.. ಫೇಸ್’ಬುಕ್ ಫ್ರೆಂಡ್ಸ್ ಬಗ್ಗೆ ಎಚ್ಚರವಿರಿ

ಫೇಸ್’ಬುಕ್’ನಲ್ಲಿನ ಫ್ರೆಂಡ್ಸ್ ಬಗ್ಗೆ ಎಚ್ಚರವಿರಲಿ. ಅದರಲ್ಲೂ ಯುವತಿಯರು ಎಚ್ಚರ ತಪ್ಪದಿರಿ. ಸ್ನೇಹದ ನೆಪದಲ್ಲಿ ನಂಟು ಬೆಳೆಸಿ, ಪ್ರೇಮಿಸುವ ಸೋಗಿನಲ್ಲಿ ವಂಚಿಸುವ ಮಹಾನುಭಾವರಿದ್ದಾರೆ. ಈ ರೀತಿಯ ವಂಚಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು: ಯುವತಿಯರೇ ಹುಷಾರ್.. ಫೇಸ್ ಬುಕ್ ನಲ್ಲಿ ಫ್ರೆಂಡ್ ಸೋಗಿನಲ್ಲಿ ನಿಮ್ಮನ್ನು ಯಾಮಾರಿಸುವವರು ಇರ್ತರೆ. ಕೆಟ್ಟವರನ್ನು ನಂಬಿದರೆ ಕೆಡುತ್ತೀರಿ ಎಂಬ ಮುತ್ಸದ್ದಿಗಳ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ಪೊಲೀಸರು ಖದೀಮನೊಬ್ಬನನ್ನು ಬಂಧಿಸಿದ ಬೆಳವಣಿಗೆ ನಂತರ ಫೇಸ್’ಬುಕ್ ಕುರಿತ ಚರ್ಚೆಗಳಿಗೆ ಮತ್ತೆ ರೆಕ್ಕೆ ಪುಕ್ಕಗಳು ಬೆಳೆಯಲಾರಂಭಿಸಿದೆ.

ಏನಿದು ಪ್ರಕರಣ?

ಬೆಂಗಳೂರಿನ ನಂದಿನಿ ಲೇಔಟ್ ಠಾಣೆಯ ಪೊಲೀಸರು ಫೇಸ್’ಬುಕ್ ಕಾಮಣ್ಣನನ್ನು ಬಂಧಿಸಿದ್ದಾರೆ. ಈತ ಫೇಸ್’ಬುಕ್’ನಲ್ಲಿ ನಕಲಿ ಖಾತೆ ತೆರೆದು ಯುವತಿಯರ ಫ್ರೆಂಡ್ ಆಗುತ್ತಾನೆ. ಸಲುಗೆಯಿಂದ ವರ್ತಿಸಿ ಮೋಹದ ಬಲೆ ಬೀಸುತ್ತಾನೆ. ಆತನ ಬಣ್ಣದ ಮಾತುಗಳನ್ನು ನಂಬಿ ಸಲುಗೆಯಿಂದ ಇದ್ದವರನ್ನು ಯಾಮಾರಿಸುತ್ತಾನೆ. ತಾನು ಕಷ್ಟದಲ್ಲಿರುವುದಾಗಿ ಹೇಳಿ ಹಣ, ಒಡವೆ ಪಡೆಯುತ್ತಾನೆ. ವಾಪಸ್ ಕೇಳೋಕೆ ಮುಂದಾದರೆ ನಂತರ ಆತನ ಸುಳಿವೇ ಇರುವುದಿಲ್ಲ.

ಈ ರೀತಿ 50ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ನಂದಿನಿ ಲೇಔಟ್ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಬಾಲಕಿಯೊಬ್ಬಳ ಜೊತೆ ಫೇಸ್’ಬುಕ್’ನಲ್ಲಿ ಫ್ರೆಂಡ್ಫ್ ಆದ ತುಮಕೂರು ಜಿಲ್ಲೆ ಮಧುಗಿರಿಯ ಅಭಿಷೇಕ್ ಗೌಡ (ಧನುಷ್ ಎಂಬುದು ಮತ್ತೊಂದು ಹೆಸರು) ಎಂಬಾತ ಪ್ರೀತಿಸುವ ನಾಟಕವಾಡಿ ಅತ್ಯಾಚಾರ ನಡೆಸಿದ್ದಾನಂತೆ. ತಾನು ಕಷ್ಟದಲ್ಲಿದ್ದೇನೆಂದು ಹೇಳಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಒಡವೆಯನ್ನೂ ದೋಚಿದ್ದಾನೆನ್ನಲಾಗಿದೆ. ಸ್ವಲ್ಪ ಸಮಯದ ನಂತರ ಈತನ ವಂಚನೆ ಬಯಲಾಗಿದ್ದು ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ಹಲವರಿಗೆ ಈ ರೀತಿ ವಂಚಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ.. ಬೈಕ್’ನಲ್ಲಿ ಇನ್ನು ಮುಂದೆ ಇಬ್ಬರು ಹೋಗುವಂತಿಲ್ಲ; ಹೊಸ ರೂಲ್ಸ್ ಜಾರಿ 

 

Related posts