ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ‌‌

ಪಣಜಿ: 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ‌‌ ಸಿಕ್ಕಿದೆ. ಪಣಜಿಯ ಡಾ. ಶ್ಯಾಮಪ್ರಸಾದ‌ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಚಾಲನೆ‌‌ ನೀಡಲಾಯಿತು. ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ಸಾಂ, ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸಿನಿಮಾ ಲೋಕದ ಗಣ್ಯಾತಿಗಣ್ಯರು ಈ ಸಿನಿಮಾ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಜೀವಮಾನದ ಸಾಧನೆ ಪರಿಗಣಿಸಿ ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಅಂಗವಾಗಿ ರಜನೀಕಾಂತ್ ಅವರನ್ನು ಸಮ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅಮಿತಾಬ್ ಬಚ್ಚನ್, ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ತಂತ್ರಜ್ಞರು, ನಿರ್ದೇಶಕರು, ಅಭಿಮಾನಿಗಳು ಕಾರಣ. ಅವರೆಲ್ಲರಿಗೂ ನಾನು ಚಿರ ಋಣಿ ಎಂದರು.

ರಜನೀಕಾಂತ್ ಕೂಡಾ ತಂಗೆ ಸಿಕ್ಕಿರುವ ಸನ್ಮಾನದ ಗೌರವ ನನ್ನ ಯಶಸ್ಸಿಗೆ ಕಾರಣರಾದ ನಿರ್ಮಾಪಕರಿಗೆ, ನಿರ್ದೆಶಕರಿಗೆ, ತಂತ್ರಜ್ಞರಿಗೆ ಸಲ್ಲಬೇಕು ಎಂದರು. ಅಭಿಮಾನಿಗಳ ಅಭಿಮಾನ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದವರು ಹೇಳಿದರು

Related posts