ಐಟಿ ದಾಳಿ ವೇಳೆ ‘ಕೈ’ ಆಪ್ತನ ಮನೆಯಲ್ಲಿ 42 ಕೋಟಿ ರೂ ಪತ್ತೆ..! ಇದು ಯಾರಿಗೆ ಸೇರಿದ್ದು ಎಂದು ಸಿದ್ದು-ಡಿಕೆಗೆ ರವಿ ಪ್ರಶ್ನೆ

ಬೆಂಗಳೂರು: ಅಂದು ಬಿಜೆಪಿ ಮೇಲೆ ಕಾಂಗ್ರೆಸ್ ನಾಯಕರು 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಕಾಂಗ್ರೆಸ್ ನಾಯಕರ ಆಪ್ತನ ಮನೆಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಹಣ ಸಿಕ್ಕಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ಐಟಿ ದಾಳಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಆಪ್ತನ‌ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ಕಾಂಗ್ರೆಸ್ ನಾಯಕರ ವಿರುದ್ದ ತಮ್ಮದೇ ಶೈಲಿಯಲ್ಲಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಸಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಕ್ರಿಯೆ ನೀಡಿರುವ ಅವರು, ಹಿಂದಿನ ಬಿಜೆಪಿ ಸರಕಾರದ ಮೇಲೆ 40% ಸರಕಾರ ಎಂದು ಸುಳ್ಳು ಆರೋಪ ಮಾಡಿದ, ಕಾಂಗ್ರೆಸ್ಸಿನ ಹಿರಿಯ ನಾಯಕರ ಆಪ್ತ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಹಾಗೂ ಆತನ ಪತ್ನಿ ಕಾಂಗ್ರೆಸ್ಸಿನ ಮಾಜಿ ಕಾರ್ಪೊರೇಟರ್ ದಂಪತಿಯ ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ 42 ಕೋಟಿ ರೂಪಾಯಿ ನಗದು ಯಾರಿಗೆ ಸೇರಿದ್ದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ಮೊನ್ನೆಯ ಪಾಲಿಕೆಯಲ್ಲಿ 600 ಕೋಟಿ ರೂ ಬಾಕಿ ಹಣ ಬಿಡುಗಡೆಯಾಗಿತ್ತು. ಇದು ಅದರ ಕಮಿಷನ್ ಹಣದ ಬಾಬ್ತು ಎಂದು ಅನೇಕ ಗುತ್ತಿಗೆದಾರರು ಹೇಳುತ್ತಿದ್ದಾರೆ ನಿಜವೇ ಎಂದು ಸಿ.ಟಿ.ರವಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೂ ಪ್ರಶ್ನಿಸಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಯಾವ ಯಾವ ರಾಜ್ಯದ ಚುನಾವಣೆಗೆ ನಮ್ಮ ಕರ್ನಾಟಕವನ್ನು ATM ಮಾಡಿಕೊಂಡಿದ್ದೀರಿ ಕಾಂಗ್ರೆಸ್ಸಿಗರೇ? ಗ್ಯಾರೆಂಟಿ ಎಂಬ ಸುಳ್ಳು ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ನೀವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಲು ಯೋಜನೆ ಹಾಕಿಕೊಂಡಿದ್ದೀರಿ? ಎಂದೂ ಅವರು ಪ್ರಶ್ನಿಸಿದ್ದಾರೆ.

Related posts