ರಾಜ್ಯ ದಲ್ಲಿ ಮತ್ತೆ 53 ಹೊಸ ಕೊರೋನಾ ಕೇಸ್; ಇವರಲ್ಲಿ 39 ಮಂದಿ ಅಜ್ಮೀರ್, ಅಹಮದಾಬಾದ್ ಪ್ರವಾಸ ಹಿನ್ನೆಲೆಯವರು

ಬೆಂಗಳೂರು: ಕೊರೋನಾ ರೌದ್ರಾವತಾರಕ್ಕೆ ಕರುನಾಡು ನಲುಗಿದೆ. ಮಲೆನಾಡನ್ನೂ ಕೊರೋನಾದ ಕಬಂಧ ಬಾಹು ಆಲಿಂಗಿಸಿಕೊಂಡಿದೆ. ದಿಢೀರ್ ಬೆಳವಣಿಗೆಯಲ್ಲಿ ಸಿಎಂ ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಹಲವರು ಕೊರೋನಾ ಸೋಂಕಿಗೊಳಗಾಗಿದ್ದಾರೆ.

ಭಾನುವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಈ ಹಿಂದೆಗಿಂತಲೂ ಕಾರಾಳ ಪರಿಸ್ಥಿತಿಯತ್ತ ಬೊಟ್ಟು ಮಾಡಿದೆ. ಶನಿವಾರ ಸಂಜೆ ನಂತರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಹೊಸದಾಗಿ 53 ಮಂದಿಯಲ್ಲಿ ಸೋಂಕು ಕಂಡುಬಂದಿರುವುದನ್ನು ವಿವರಿಸಿದೆ. ಈ ಪೈಕಿ ಮಲೆನಾಡ ಸೆರಗು ಶಿವಮೊಗ್ಗ ಜಿಲ್ಲೆಯಲ್ಲಿ ಬಹಳಷ್ಟು ಮಂದಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಅದರಲ್ಲೂ ಸಿಎಂ ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿಕಾರಿಪುರದಲ್ಲೇ 7 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಅದೇ ಜಿಲ್ಲೆಯ ತೀರ್ಥಹಳ್ಳಿಯಲ್ಲೂ ಒಬ್ಬರೋ ಸೋಂಕಿಗೊಳಗಾಗಿದ್ದಾರೆ. ಉತ್ತರಕನ್ನಡ ಭಟ್ಕಳದ ಮತ್ತೆ 7 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ.. ಉತ್ತರ ಭಾರತದ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ ನಳಿನ್ ಕುಮಾರ್

ಇದೆ ವೇಳೆ ಬೆಳಗಾವಿಯಲ್ಲಿ ಬರೋಬ್ಬರಿ 22 ಮಂದಿ ಹೊಸ ಕೊರೋನಾ ಸೋಂಕಿತರನ್ನು ಗುರುತಿಸಲಾಗಿದೆ. ಈ ಹೆಲ್ತ್ ಬುಲೆಟಿನ್ ಪ್ರಕಾರ ಜಿಲ್ಲಾವಾರು ಮಾಹಿತಿ ಹೀಗಿದೆ.

  • ಬೆಳಗಾವಿ – 22 ಕೇಸ್
  • ಶಿವಮೊಗ್ಗ – 8 ಕೇಸ್
  • ಬಾಗಲಕೋಟೆ – 8 ಕೇಸ್
  • ಉತ್ತರಕನ್ನಡ – 7 ಕೇಸ್
  • ಬೆಂಗಳೂರು ನಗರ – 3 ಕೇಸ್
  • ಕಲಬುರ್ಗಿ -3 ಕೇಸ್
  • ದಾವಣಗೆರೆ – 1 ಕೇಸ್
  • ಚಿಕ್ಕಬಳ್ಳಾಪುರ – 1 ಕೇಸ್

ಇದನ್ನೂ ಓದಿ.. 1800 ಅಸಹಾಯಕ ಯಕ್ಷ ಕಲಾವಿದರ ಕೈ ಹಿಡಿದ ಕೊಲ್ಲೂರು ಮೂಕಾಂಬಿಕೆ

ಇದೀಗ ಕರ್ನಾಟಕದಲ್ಲಿ ಹೊಸದಾಗಿ 53 ಪ್ರಕರಣಗಳು ಬೆಳಕಿಗೆ ಬಂದಿದಿದ್ದು, ಈ ಪೈಕಿ 31 ಮಂದಿ ಅಜಮೀರ್ ಪ್ರವಾಸ ತೆರಳಿದ್ದವರಉ, ಹಾಗೂ 8 ಮಂದಿ ಅಹಮದಾಬಾದ್ ಪ್ರವಾಸ ಹಿಸ್ಟರಿ ಇರುವವರೆಂದು ಆರೋಗ್ಯ ಇಲಾಖೆ ತನ್ನ ಹೆಲ್ತ್ ಬುಲೆಟಿನ್’ನಲ್ಲಿ  ಈ ಮೂಲಕ ವಿವರ ಒದಗಿಸಿದೆ. ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆಯಾಗಿದೆ. ಈಗಾಗಲೇ 31 ಮಂದಿ ಕರ್ನಾಟಕದಲ್ಲೇ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ..  ಕಿಕ್’ನಲ್ಲಿರುವ ಎಣ್ಣೆಪ್ರಿಯರಿಗೆ ಶಾಕ್ 

 

Related posts