ಕೊರೋನಾ ಪ್ಯಾಕೇಜ್ ವಿಚಾರ; ರಾಜಕೀಯ ಮುಖಂಡರ ವಾಕ್ಸಮರ

ಬೆಂಗಳೂರು: ಕೊರೋನಾ ವೈರಾಣು ಹಾವಳಿಯಿಂದಾಗಿ ದೇಶ ತತ್ತರಿಸಿದೆ. ಕೊರೋನಾ ಸಂಕಟದಿಂದ ಪಾರಾಗಲು ದೇಶದಲ್ಲಿ ಲಾಕ್’ಡೌನ್ ಜಾರಿಯಲ್ಲಿದ್ದು ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆಯೇ ಹದೆಗೆಟ್ಟಿದೆ. ಪರಿಸ್ಥಿತಿ ಹೀಗಿದ್ದರೂ ರಾಜಕೀಯ ಪಕ್ಷಗಳ ಮುಖಂಡರು ವಾಗ್ದಾಳಿಯಲ್ಲಿ ನಿರತರಾಗಿದ್ದಾರೆ.

ಕೇಂದ್ರ ಸರ್ಕಾರವು ಕಾರ್ಮಿಕರ ಹಿತಾಸಕ್ತಿ ಮರೆತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಿದೆ. ಕಾಂಗ್ರೆಸ್ ಶಾಸಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಿದ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷ ಪ್ರಸ್ತುತ ಜಾರಿಯಾಗಿರುವ ಯೋಜನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನಕ್ಕಿಳಿದಿದೆ.

ಇದನ್ನೂ ಓದಿ.. ಕೊರೋನಾ ಸಂಕಷ್ಟಕ್ಕೆ ಸಿದ್ದು ಶಿಷ್ಯರಂಥವರೇ ಕಾರಣ; ಕೈ ನಾಯಕರ ವಿರುದ್ಧ ಸಚಿವ ರವಿ ವಾಕ್ಪ್ರಹಾರ 

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ದೇಶದ ಜನ ಸಂಕಷ್ಟದಲ್ಲಿರುವಾಗ ಮೋದಿ ಸರ್ಕಾರವು ಭಾರತ ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜ್ ನೀಡಿದೆ. ‘ಜೀವ ಮೊದಲು ಜೀವನ ಅನಂತರ’ ಎನ್ನುವ ಸೂತ್ರದಂತೆ ಪ್ರಧಾನಿಯವರು ಬಡವರ ಜೀವ ಉಳಿಸುವ ಪ್ರಯತ್ನ ನಡೆಸಿದ್ದಾರೆ. ಅದರಂತೆ ರೈತರು, ಕಾರ್ಮಿಕರು, ಬಡವರು, ಅಂಗವಿಕಲರಿಗಾಗಿ ವಿವಿಧ ಯೋಜನೆಗಳಡಿ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ದೇಶದ ಇತಿಹಾಸದಲ್ಲೇ ಇಷ್ಟೊಂದು ಭಾರೀ ಮೊತ್ತದ ಪ್ಯಾಕೇಜ್ ಈ ವರೆಗೆ ಯಾವ ಸರ್ಕಾರವೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪ್ಯಾಕೇಜ್’ನ ಹೈಲೈಟ್ ಹೀಗಿದೆ:

  •  ಜಾನ್ ಧನ್ ಯೋಜನೆಯಡಿ 20 ಕೋಟಿ 5 ಲಕ್ಷ ಜನರಿಗೆ 10 ಸಾವಿರ 25 ಕೋಟಿ ರೂಪಾಯಿ ಜಮೆ ಮಾಡಲಾಗಿದೆ.
  • ಕಿಸಾನ್ ಸಮ್ಮಾನ್ ಯೋಜನೆಯಡಿ 8 ಕೋಟಿ ರೈತರು ಖಾತೆಗೆ 16,146 ಕೋಟಿ ರೂಪಾಯಿ ಜಮೆ ಮಾಡಲಾಗಿದೆ.
  • ದಿವ್ಯಾಂಗರಿಗೆ, ಅಸಹಾಯಕರಿಗೆ 1405 ಕೋಟಿ ರೂಪಾಯಿ ಮಾಸಾಶನ ಸಿಕ್ಕಿದೆ.
  • 2 ಕೋಟಿ 17 ಲಕ್ಷ ಜನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3497 ಕೋಟಿ ರೂಪಾಯಿ ನೀಡಲಾಗಿದೆ.
  • 162 ಕೋಟಿ ರೂಪಾಯಿ ಇಪಿಎಫ್ ಹಣ ಪಾವತಿಸಲಾಗಿದೆ.
  • ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತವಾಗಿ 2 ತಿಂಗಳ ರೇಷನ್ ವಿತರಣೆ ಮಾಡಲಾಗಿದೆ.
  • 2 ಕೋಟಿ 66 ಲಕ್ಷ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ೩ ತಿಂಗಳ ಗ್ಯಾಸ್ ವಿತರಿಸಲಾಗಿದೆ. 

ಇದನ್ನೂ ಓದಿ.. ಸಾಮಾಜಿಕ ಜಾಲತಾಣಗಳಲ್ಲಿ ಜನಾರ್ಧನ ಪೂಜಾರಿ ಬಗ್ಗೆ.. ಏನಿದು ಗೊತ್ತಾ?

 

Related posts