‘ಪ್ರತಿಜ್ಞಾ’ ಯಶಸ್ಸಿಗೆ ಡಿಕೆಶಿ ಪಣ; ಕೈನಾಯಕರ ಜೊತೆ ಕಾರ್ಯತಂತ್ರ

ಬೆಂಗಳೂರು: ಕೊರೋನಾ ಸಂಕಟದ ನಡುವೆಯೇ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪಕ್ಷದ ಸಾರಥ್ಯ ವಹಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರಾದರೂ ಪದಗ್ರಹಣ ಮಾಡಿಲ್ಲ. ಅವರ ಈ ಕಾರ್ಯಕ್ರಮಕ್ಕೆ ಕೊರೋನಾ ಪರಿಸ್ಥಿತಿ ಅಡ್ಡಿಯಾಗುತ್ತಲೇ ಇವೆ.

ಈ ಮಧ್ಯೆ ಜುಲೈ 2 ರಂದು ಪ್ರತಿಜ್ಞಾ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಪ್ರತಿಜ್ಞಾ ಯಶಸ್ವಿಗೊಳಿಸಲು ಕೈ ಟೊಂಕ ಕಟ್ಟಿ ನಿಂತಿದ್ದಾರೆ.

ಈ ನಡುವೆ, ಪ್ರತಿಜ್ಞಾ ದಿನದ ಪೂರ್ವಭಾವಿ ತಯಾರಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಪ್ರಮುಖರ ಜೊತೆ ಇಂದು ಸಮಾಲೋಚನೆ ನಡೆಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖರು, ಕೆಪಿಸಿಸಿ ಮಾಜಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಉಸ್ತುವಾರಿ ನಾಯಕರು ಹಾಗೂ ಕೆಪಿಸಿಸಿ ಸಮನ್ವಯಕಾರರ ಜೊತೆ ಚರ್ಚಿಸಿದರು. ಈ ಮೂಲಕ ಪ್ರತಿಜ್ಞಾ ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯತಂತ್ರ ರೂಪಿಸಿದರು.

Related posts