ತವರು ಚೀನಾದಿಂದ ಜಾರಿದ ಕೊರೋನಾ; ಐರೋಪ್ಯ ರಾಷ್ಟ್ರಗಳು ತಲ್ಲಣ

ದೆಹಲಿ: ಚೀನಾದಲ್ಲಿ ಮರಣ ಮೃದಂಗ ಭಾರಿಸಿ ಜಗತ್ತಿನಾದ್ಯಂತ ಕಬಂದ ಬಾಹುಗಳನ್ನು ಚಾಚುತ್ತಿರುವ ಕೊರೋನಾ ವೈರಸ್ ಇಟೆಲಿ ದೇಶವನ್ನು ಸ್ಮಶಾನವನ್ನಾಗಿಸಿದೆ. ಕೋವಿಡ್‌ 19 ಸೋಂಕು ತಗುಲಿ ಇಟೆಲಿ ದೇಶವೊಂದರಲ್ಲೇ ಸುಮಾರು ಮೂರೂವರೆ ಸಾವಿರ ಮಂದಿ ಬಲಿಯಾಗಿದ್ದಾರೆ.

ಜಗತ್ತಿನಾದ್ಯಂತ ಸುಮಾರು ಎರಡೂವರೆ ಲಕ್ಷ ಮಂದಿ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು ಇಟಲಿಯಲ್ಲಿ ಸುಮಾರು ೪೧೦೦೦ ಮಂದಿ ಆಸ್ಪತ್ರೆಪಾಲಾಗಿದ್ದಾರೆ. ಐರೋಪ್ಯ ರಾಷ್ಟ್ರಗಳಲ್ಲಿ ಸುಮಾರು ೫,೦೦೦ ಮಂದಿ ಕೊರೋನಾ ರುದ್ರ ನರ್ತನಕ್ಕೆ ಬಲಿಯಾಗಿದ್ದಾರೆ.

ಚೀನದಲ್ಲಿ 3,೨೪೯ ಜನರನ್ನು ಕೊರೋನಾ ವೈರಸ್ ಬಳಿ ತೆಗೆದುಕೊಂಡಿತ್ತಾದರೂ ಇದೀಗ, ಕೋವಿಡ್‌ 19 ತವರು ಎಂದೇ ಗುರುತಾಗಿರುವ ವುಹಾನ್‌ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ವುಹಾನ್‌ ನಗರವನ್ನು ಕೊರೊನಾ ಮುಕ್ತ ಎಂದು ಚೀನ ಘೋಷಿಸಿದೆ.

Related posts