ಕೋಯಿಕ್ಕೋಡ್ ವಿಮಾನ ದುರಂತ; ಸಾವನ್ನಪ್ಪಿದವರ ಸಂಖ್ಯೆ18ಕ್ಕೆ ಏರಿಕೆ

ಕೊಚ್ಚಿ: ಕೇರಳದ ಕೋಯಿಕ್ಕೋಡ್’ನಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಶುಕ್ರವಾರ ದುಬೈನಿಂದ ಕೋಯಿಕ್ಕೋಡ್’ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತ ಸಂಭವಿಸಿತ್ತು.

ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 174 ಪ್ರಯಾಣಿಕರು 10 ಮಕ್ಕಳು 5 ವಿಮಾನ ಸಿಬ್ಬಂದಿಗಳು, ಇಬ್ಬರು ಪೈಲಟ್ ಗಳು ಇದ್ದರು. ರನ್’ವೇಯಿಂದ ಪಕ್ಕಕ್ಕೆ ಜಾರಿದ ಪರಿಣಾಮ ವಿಮಾನ ಇಬ್ಭಾಗವಾಗಿದೆ. ಈ ಘಟನೆ ಸಂಬಂಧ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ ತನಿಖೆಗೆ ಆದೇಶಸಿದೆ.

Related posts