ಈರುಳ್ಳಿ ಬೆಲೆ ಕುಂಠಿತ; ಮತ್ತೆ ಬೆಲೆ ಏರಿಕೆಯಾ ಆತಂಕ

ಬೆಂಗಳೂರು: ಕೆಲವು ತಿಂಗಳ ಹಿಂದಷ್ಟೇ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಇತ್ತೀಚೆಗಷ್ಟೇ ಸಹಜ ಸ್ಥಿತಿಗೆ ಮರಳಿತ್ತು. ಇದೀಗ ಮತ್ತೆ ಈರುಳ್ಳಿ ದರ ಹೆಚ್ಚಳದ ಆತಂಕ ಎದುರಾಗಿದೆ.
ದೇಶದ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಅಭಾವದಿಂದಾಗಿ ಬೆಳೆ ಇಳುವರಿ ಕಡಿಮೆಯಾಗಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಈರುಳ್ಳಿ ಬೆಳೆಯುವ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಗದಗ, ವಿಜಯಪುರ ಸಹಿತ ಬಹುತೇಕ ಜಿಲ್ಲೆಗಳು ಬರದ ಭೀಕರತೆಯಿಂದ ತತ್ತರಿಸಿದೆ. ಈ ಬಾರಿ ಈರುಳ್ಳಿ ಇಳುವರಿ ಕೇವಲ ಶೇ 40ಕ್ಕೆ ಇಳಿದಿದ್ದು ಬೇಡಿಕೆ ಪ್ರಮಾಣ ಹೆಚ್ಸಿದೆ. ಹಾಗಾಗಿ ಮುಂದಿನ 15 ದಿನಗಳಲ್ಲಿ ಈರುಳ್ಳಿ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ.

Related posts