ಮಂಗಳೂರು: ಕೊರೋನಾ ವೈರಾಣು ಸೋಂಕು ತಡೆಯುವ ಉದ್ದೇಶದಿಂದ ಮುಚ್ಚಲ್ಪಟ್ಟಿದ್ದ ದೇವಾಲಯಗಳು ಸೋಮವಾರದಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ಸರ್ಕಾರದ ಆದೇಶದಂತೆ ಮಾರ್ಗಸೂಚಿ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಪೊಳಲಿ ಕ್ಷೇತ್ರದಲ್ಲಿ ಪರಿಪೂರ್ಣ ತಯಾರಿ: ರಾಜ್ಯ ಕರಾವಳಿಯ ಪೊಳಲಿ ರಾಜರಾಜೇಶ್ವರಿ ದೇವಾಲಯ ನಮ್ಮ ದೇಶದ ಪ್ರಸಿದ್ಧ ಕ್ಷೇತ್ರಗಲ್ಲಿ ಒಂದು. ನಿತ್ಯ ಪೂಜೆ ನಡೆಯುವ ದೇಶದ ಅತೀ ದೊಡ್ಡ ಮೂರ್ತಿಯಿರುವ ಏಕೈಕ ಶಕ್ತಿ ದೇಗುಲ ಎಂದೇ ಜನಜನಿತವಾಗಿರುವ ಈ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಮತ್ತು ಸ್ಯಾನಿಟೈಸೇಶನ್ ನಡೆಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರರಾದ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೋಕ್ತೇಸರಾದ ಚೇರ ಸೂರ್ಯನಾರಾಯಣ ರಾವ್, ಪವಿತ್ರಪಾಣಿ ಮೋಕ್ತೇಸರರಾದ ಮಾಧವ ಭಟ್ ಸಹಿತ ದೇವಾಲಯದ ಅರ್ಚಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ, ಕ್ಷೇತ್ರದ ಆಡಳಿತ ಮಂಡಳಿಯ ಸಭೆ…
Year: 2020
ವಿಧಿಯಾಟದ ಮುಂದೆ ನಡೆಯದ ಪವಾಡ; ಅಭಿಮಾನಿಗಳ ಆಕ್ರಂದನ
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ನಿಧನದ ಸುದ್ದಿ ಕನ್ನಡ ಸಿನಿ ಅಭಿಮಾನಿಗಳ ಪಾಲಿಗೆ ಸಿಡಿಲಿನಂತೆ ಅಪ್ಪಳಿಸಿದೆ. ಎರಡು ವರ್ಷಗಳ ಹಿಂದಷ್ಟೇ ಅವರು ನಟಿ ಮೇಘನಾ ರಾಜ್ ಅವರನ್ನು ವಿವಾಹವಾಗಿದ್ದರು. ಸಿನಿ ಲೋಕದಲ್ಲಿ ಸ್ನೇಹಜೀವಿ ಎನಿಸಿದ್ದ ಚಿರಂಜೀವಿ ಸರ್ಜಾ ನಿಧನದಿಂದಾಗಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದುಃಖ ಮಡುಗಟ್ಟಿದೆ. 39 ವರ್ಷ ಹರೆಯದ ಚಿರಂಜೀವಿ ಸರ್ಜಾ ಅವರು ಮನೆಯಲ್ಲಿದ್ದಾಗಲೇ ಎದೆನೋವು ಕಾಣಿಸಿಕೊಂಡಿತು. ಮಧ್ಯಾಹ್ನ 2.30ರ ಸುಮಾರಿಗೆ ಊಟಕ್ಕೆ ಸಿದ್ಧವಾಗುತ್ತಿದ್ದಾಗಲೇ ಅವರಿಗೆ ಎದೆ ನೋವು ಉಂಟಾಯಿತು. ಕೂಡಲೇ ಅವರನ್ನು ಜಯನಗರ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲೇ ಅವರಿಗೆ ಉಸಿರಾಟದ ತೊಂದೆರೆ ಕಂಡುಬಂತು. ವೈದ್ಯರು ತೀವ್ರ ತಪಾಸಣೆಗೆ ಗುರಿಪಡಿಸಿದಾಗ ಹೃದಯಾಘಾತ ಸಂಭವಿಸಿರುವುದು ಗೊತ್ತಾಯಿತು ಎಂದು ನಟ ಚಿರಂಜೀವಿ ಸರ್ಜಾ ಅವರ ಆಪ್ತರು ತಿಳಿಸಿದ್ದಾರೆ. ಈ ನಡುವೆ ಮೂರು ದಿನಗಳ ಹಿಂದೆ ಕೂಡಾ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರಿಂದ ಚಿಕಿತ್ಸೆ ಪಡೆದಿದ್ದರಾದರೂ ಇಂದು…
ಚಿರಂಜೀವಿ ಸರ್ಜಾ ವಿಧಿವಶ; ನಟನಿಗೆ ಆಗಿದ್ದೇನು ಗೊತ್ತಾ?
ಬೆಂಗಳೂರು: ಕನ್ನಡ ಸಿನಿಲೋಕದ ಖ್ಯಾತಿಯ ಶಿಖರ ಏರುತ್ತಿರುವಾಗಲೇ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೊಳಗಾದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ವಿಧಿವಶರಾಗಿದ್ದಾರೆ. 39 ವರ್ಷ ಹರೆಯದ ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದ ಮೇರು ನಟ ಅರ್ಜುನ್ ಸರ್ಜಾ ಅವರ ಅಳಿಯ. ಸುಮಾರು 22 ಸಿನಿಮಾಗಳಲ್ಲಿ ಅಭಿನಯಿಸಿರುವ ಚಿರಂಜೀವಿ ಸರ್ಜಾ ನಟನಾಗಿ ಅಷ್ಟೇ ಅಲ್ಲ ನಿರ್ದೇಶಕರಾಗಿಯೂ ಕನ್ನಡ ಸಿನಿಲೋಕದ ಅದ್ಭುತ ಪ್ರತಿಭೆ ಎನಿಸಿದ್ದರು. ಎರಡು ವರ್ಷಗಳ ಹಿಂದಷ್ಟೇ ಮೇಘನಾರಾಜ್ ಅವರನ್ನು ವಿವಾಹವಾಗಿದ್ದರು. ಇವರ ಕೈ ಹಿಡಿದಿದ್ದ ಮೇಘನಾರಾಜ್ ಕೂಡಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿನಯದ ಮೂಲಕ ಚಿರಪರಿಚಿತರಾದವರು. ಅಪರೂಪದ ತಾರಾ ಜೋಡಿ ಎಂದೇ ಸಾಮಾಜಿಕ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಇಂದು ಅವರು ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದರು. ಅನಂತರ ಉಸಿರಾಟದ ತೊಂದೆರೆಯೂ ಅವರನ್ನು ಕಾಡಿತು. ಅಷ್ಟರಲ್ಲೇ ಅವರಿಗೆ ಹೃದಯಾಘಾತವಾಗಿರುವುದು ವೈದ್ಯರ ಗಮನಕ್ಕೆ ಬಂತು. ಯಾವುದೇ…
ಸಮಾಜಮುಖಿ ‘ಯುವಸೈನ್ಯ’; ಸಾಮಾಜಿಕ ಜಾಲತಾಣಗಳಲ್ಲಿ ChefTalk ಮೇನಿಯಾ
ಬೆಂಗಳೂರು: ರಾಜಧಾನಿ ನಗರಿಗಳಲ್ಲಿ ಆಹಾರೋದ್ಯಮ ನಡೆಸಿ, ಆದಾಯವನ್ನು ಹಳ್ಳಿಗಳಲ್ಲಿ ಸಾಮಾಜಮಖಿ ಕಾರ್ಯಗಳಿಗೆ ಬಳಸುವ ಮೂಲಕ ChefTalk ಕಂಪೆನಿ ನಾಡಿನ ಗಮನಸೆಳೆದಿದೆ. ಯುವಜನರಿಗೆ ಉದ್ಯೋಗ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಇಂಥದ್ದೊಂದು ಸಂಸ್ಥೆಗೆ ಮುನ್ನುಡಿ ಬರೆದಿದ್ದ ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿ ಬಳಗ ಇದೀಗ ಯುವಜನರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಕೆಲಸದಲ್ಲಿ ತೊಡಗಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ವಾಟ್ಸಾಪ್’ನಲ್ಲಿ ಈಗಾಗಲೇ ವಿಶೇಷ ತಂಡ ಕಾರ್ಯಪ್ರವೃತ್ತವಾಗಿದ್ದರೆ, ಫೇಸ್ಬುಕ್’ನಲ್ಲಿ ಕೂಡಾ ಪೇಜ್ ಅಸ್ತಿತ್ವಕ್ಕೆ ಬಂದಿದೆ. ಇನ್ಸ್ಟಾಗ್ರಾಮ್, ಟ್ವಿಟರ್’ಗಳಲ್ಲಿ ಸಕ್ರಿಯವಾಗಿದೆ. ಏನಿದು ChefTalk? ಕರಾವಳಿ ಮೂಲದ ಗೋವಿಂದ ಪೂಜಾರಿಯವರು ಬಾಲ್ಯದಲ್ಲಿ ಶಿಕ್ಷಣ ತ್ಯಜಿಸಿ ಮುಂಬೈಗೆ ತೆರಳಿದ ಸಂದರ್ಭದಲ್ಲಿ ಕೆಲಸವಿಲ್ಲದೇ ಅಸಹಾಯಕರಾಗಿದ್ದರು. ಹೃದಯವೈಶಾಲ್ಯದ ಸಮೂಹ ಇವರನ್ನೇ ಬಳಸಿ ದೈತ್ಯ ಉದ್ಯಮವನ್ನೇ ನಡೆಸಿತು. ಅವರು ಕೂಡಾ ಸ್ನೇಹಿತರ ತಂಡ ಕಟ್ಟಿ ಬಡಪಾಯಿ ಮಂದಿಗೆ ಊಟ-ತಿಂಡಿ ನೀಡುವ ಕೈಂಕರ್ಯ ನಡೆಸಿದರು. ಬರಬರುತ್ತಾ ಉದ್ಯಮಸ್ನೇಹಿ ಗುಂಪು ಕಟ್ಟಿದ…
ಸುಮಲತಾ ಅಂಬರೀಷ್ ಪುತ್ರನ ಮತ್ತೊಂದು ಚಿತ್ರ ‘ಬ್ಯಾಡ್ ಮ್ಯಾನರ್ಸ್’; ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ರೆಬಲ್ ಸ್ಟಾರ್ ಅಂಬಿ ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ತನ್ನ ‘ಬ್ಯಾಡ್ ಮ್ಯಾನರ್ಸ್’ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ‘ಅಮರ’ ಚಿತ್ರದ ನಂತರ ಇದೀಗ ಮತ್ತೊಂದು ಸಿನಿಮಾದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಹೊಸ ಗೆಟಪ್’ನಲ್ಲಿ ಗಮನಸೆಳೆಯುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕೆ.ಎಂ.ಸುಧೀರ್ ನಿರ್ಮಾಣದ ಈ ಚಿತ್ರಕ್ಕೆ ಸಂಗೀತ ಅವರದ್ದು. https://www.youtube.com/watch?v=Mg9O1mJNaXg&feature=emb_title ಇದನ್ನೂ ಓದಿ.. ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್
ಸಿಡಿದೆದ್ದ ಬಿಜೆಪಿ ನಾಯಕಿ; ಅಧಿಕಾರಿಗೆ ಥಳಿಸಿದ ವೀಡಿಯೋ..
ಅಪಮಾನ ಮಾಡಿದರೆಂದು ಆರೋಪಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕಿ ಹಿಗ್ಗಾ ಮುಗ್ಗಾ ಥಳಿಸಿದ ವೀಡಿಯೊ ವೈರಲ್ ಆಗಿದೆ. ಹರ್ಯಾಣ ರಾಜ್ಯದ ಹಿಸ್ಸಾರ್ ಬಳಿ ಈ ಘಟನೆ ನಡೆದಿದ್ದು ಈ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಹಿಸಾರ್ ನ ಮಾರುಕಟ್ಟೆ ಸಮಿತಿಯ ಅಧಿಕಾರಿಯು ಟಿಕ್ ಟಾಕ್ ಸ್ಟಾರ್ ಆಗಿರುವ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ. ಇದರಿಂದ ಕುಪಿತರಾಗಿದ್ದ ಬಿಜೆಪಿ ನಾಯಕಿ ಪೊಲೀಸರೆದುರೇ ಆ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಹಲ್ಲೆ ವೀಡಿಯೊ ಮೊಬೈಲ್’ನಲ್ಲಿ ಸೆರೆಯಾಗಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. खट्टर सरकार के नेताओं के घटिया कारनामे! मार्किट कमेटी सचिव को जानवरों की तरह पीट रही हैं आदमपुर, हिसार की भाजपा नेत्री। क्या सरकारी नौकरी करना अब अपराध…
ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 1,438 ಸೋಂಕು ಪತ್ತೆ
ಚೆನ್ನೈ: ದೇಶಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 1,438 ಸೋಂಕು ಪ್ರಕರಣಗಳು ವರದಿಯಾಗಿವೆ. ಅಷ್ಟೇ ಅಲ್ಲ ಆ 24 ಗಂಟೆಯಲ್ಲೇ 12 ರೋಗಿಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಕ್ಷಿಣ ಭಾರತದಲ್ಲಿ ಆತಂಕಕಾರಿ ಎಂಬಂತೆ ಗೋಚರಿಸುತ್ತಿತ್ತು. ಆದರೆ ಕೆಲ ದಿನಗಳ ವರದಿ ಗಮನಿಸಿದಾಗ ಪರಿಸ್ಥಿತಿ ಚೇತರಿಕೆಯ ವಿಶ್ವಾಸ ವ್ಯಕ್ತವಾಗಿತ್ತು. ಆದರೆ ಶುಕ್ರವಾರ ಒಂದೇ ದಿನ 1,438 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ತಮಿಳುನಾಡು ಕೂಡಾ ಸೇಫ್ ಅಲ್ಲ ಎಂಬಂತಾಗಿದೆ. ತಮಿಳುನಾಡು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 28,694ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 15,762 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದನ್ನೂ ಓದಿ.. ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್
ಕರಾವಳಿಯಲ್ಲೇ ಏಕೆ ಇಷ್ಟೊಂದು ಕೊರೋನಾ ಕೇಸ್?
ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನಿನ್ನೆ ರಾಜ್ಯದಲ್ಲಿ 515 ಪ್ರಕರಣಗಳು ದಾಖಲೆ ಎಂಬಂತೆ ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ204 ಪಾಸಿಟಿವ್ ಪ್ರಕರಣಗಳು ಪತ್ತೆಯಾಡಿದೆ. ಯಾದಗಿರಿ 74 ಮಂದಿಯಲ್ಲಿ ಸೋಂಕು ದೃಢಪಟ್ಟರೆ, ವಿಜಯಪುರದಲ್ಲಿ 53 ಕೇಸ್’ಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿ 42, ಬೀದರ್’ನಲ್ಲಿ 39, ಬೆಳಗಾವಿಯಲ್ಲಿ 36 ಮಂದಿಯ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯದಲ್ಲಿ 13, ಬೆಂಗಳೂರು ನಗರದಲ್ಲಿ 10, ಬೆಂಗಳೂರು ಗ್ರಾಮಾಂತರದಲ್ಲಿ 12, ದಕ್ಷಿಣ ಕನ್ನಡದಲ್ಲಿ 8, ಉತ್ತರ ಕನ್ನಡದಲ್ಲಿ 7, ಧಾರವಾಡ, ಹಾಸನ, ಚಿಕ್ಕಬಳ್ಳಾಪುರಜಿಲ್ಲೆಗಳಲ್ಲಿ ತಲಾ 3, ರಾಮನಗರ, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ. ಈ ಸೋಂಕಿತರ ಪೈಕಿ 482 ಮಂದಿ ಅಂತರ್ ರಾಜ್ಯ ಟ್ರಾವೆಲ್ ಹಿಸ್ಟರಿಯುಳ್ಳವರು. ಆದರೆ ಉಡುಪಿ ಜಿಲ್ಲೆಯಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ಅಚ್ಚರಿಯ ಸಂಗತಿ Evening Media Bulletin 05/06/2020.Please…
ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್
ಬೆಂಗಳೂರು: ಇದೀಗ ಕೊರೋನಾ ಸಂಕಷ್ಟಕಾಲ. ಹಾಗಾಗಿ ಸಿನಿಮಾ ತಾರೆಯರು ಇನ್ನೂ ಮನೆಯಿಂದ ಹೊರಬಂದಿಲ್ಲ. ಬಹುತೇಕ ನಟ-ನಟಿಯರು ಫಿಟ್ನೆಸ್’ಗೆ ಮೊರೆ ಹೋಗಿದ್ದಾರೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ಅವರು ಸಕತ್ತಾಗಿ ವರ್ಕೌಟ್ ಮಾಡಿ ಮುಂದಿನ ಚಿತ್ರಕ್ಕೆ ಫಿಟ್ ಆಗಿದ್ದಾರೆ. ಪುನೀತ್ ಅವರೇ ತಮ್ಮ ವರ್ಕೌಟ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. View this post on Instagram A post shared by Puneeth Rajkumar (@puneethrajkumar.official) ಇದನ್ನೂ ಓದಿ.. ಪರಿಹಾರದ ಹಣ ಬೇಕೆ? ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಣೆ ಮಾಡಿ
ಪರಿಹಾರದ ಹಣ ಬೇಕೆ? ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಣೆ ಮಾಡಿ; ರೈತರಿಗೆ ಸಚಿವರ ಸಲಹೆ
ಬೆಂಗಳೂರು: ರೈತರು ಆದಷ್ಟು ಬೇಗ ತಪ್ಪದೇ ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ ಮಾಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ಮಾಡಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ ಮಾರ್ಗಸೂಚಿಯಂತೆ ವಿದ್ಯುನ್ಮಾನವಾಗಿ ನೇರವಾಗಿ ರೈತರ ಖಾತೆಗೆ ಆಧಾರ್ ಆಧಾರಿತ ವ್ಯವಸ್ಥೆಯ ಮೂಲಕವರ್ಗಾಯಿಸಲಾಗುತ್ತಿದೆ ಎಂದರು. ಬಹುತೇಕ ರೈತರು ತಮ್ಮ ಆಧಾರ್ ಕಾರ್ಡನ್ನು ಅಕೌಂಟ್ ನಂ.ಗೆ ಲಿಂಕ್ ಮಾಡಿಲ್ಲ. ರೈತರು ತಮ್ಮತಮ್ಮ ಆಧಾರ್ ಕಾರ್ಡನ್ನು ತಾವು ಉಪಯೋಗಿಸುತ್ತಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ.. ರೈತರ ಇಚ್ಛೆಯಂತೆ ಸರಕು ರಫ್ತು; ಕೇಂದ್ರ ಸರ್ಕಾರ ಒಪ್ಪಿಗೆ
