ಸಿಡಿಲು ಬಡಿದು ಪ್ರೇಮಸೌಧ ತಾಜ್ ಮಹಲ್’ಗೆ ಹಾನಿ

ದೆಹಲಿ: ಪ್ರೇಮಸೌಧ ತಾಜ್ ಮಹಲ್ ಸಿಡಿಲು ಬಡಿತದಿಂದ ಹಾನಿಗೊಳಗಾಗಿದೆಯೇ? ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಉತ್ತರಪ್ರದೇಶದ ಆಗ್ರಾ ಸುತ್ತಮುತ್ತ ಶನಿವಾರ ಭಾರೀ ಮಳೆಯಾಗಿದೆ. ಆಗ್ರಾದಲ್ಲಿರುವ ತಾಜ್ ಮಹಲ್ ಕಟ್ಟಡಕ್ಕೆ ಈ ಮಳೆ ಸಂದರ್ಭದಲ್ಲಿ ಸಿಡಿಲು ಅಪ್ಪಳಿಸಿದ್ದು ಬಾಗಿಲು ಹಾನಿಗೊಳಗಾಗಿದೆ ಎನ್ನಲಾಗಿದೆ. ತಾಜ್ ಮಹಲ್ ನ ಮುಖ್ಯ ಸಮಾಧಿ ಮತ್ತು ಕೆಂಪು ಮರಳುಗಲ್ಲಿನ ಅಮೃತಶಿಲೆ ರೇಲಿಂಗ್’ಗೂ ಹಾನಿಯಾಗಿದೆ. ತಾಜ್ ಮಹಲ್ ಫಾಲ್ಸ್ ಸೀಲಿಂಗ್ ಕೂಡ ಬಿದ್ದಿದೆ. ತಾಜ್ ಮಹಾಲ್ ಆವರಣದಲ್ಲಿ ಕೆಲ ಮರಗಳು ಉರುಳಿ ಬಿದ್ದಿವೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ.. ಜುಲೈ 8ರಂದು ಪಿಯುಸಿ ಫಲಿತಾಂಶ, ಬಳಿಕ ಎಸ್ಸೆಸ್ಸೆಲ್ಸಿ ರಿಸಲ್ಟ್

ಒಂದೇ ದಿನ 7,466 ಹೊಸ ಕೊರೋನಾ ಕೇಸ್; 9ನೇ ಸ್ಥಾನಕ್ಕೇರಿದ ಭಾರತ

ದೆಹಲಿ: ಜಗತ್ತಿನಾದ್ಯಂತ ಕೊರೋನಾ ತಲ್ಲಣ ಮುಂದುವರಿದಿದೆ. ಭಾರತ ಸೇರಿದಂತೆ ಹಲವು ರಾಸ್ಗ್ತ್ರಗಳಲ್ಲಿ ಸೋಂಕಿನ ವೇಗ ಹೆಚ್ಚಾಗಿದ್ದು, ಭಾರತವಂತೂ ತತ್ತರಿಸಿದೆ. ಭಾರತದಲ್ಲಿ ಕೊರೋನಾ ವೈರಾಣು ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಕಳೆದ ವಾರದವರೆಗೂ ಭಾರತ 10ನೇ ಸ್ಥಾನದಲ್ಲಿಟ್ಟು. ಶುಕ್ರವಾರ ಒಂದೇ ದಿನ ಭಾರತದಲ್ಲಿ 7,466 ಹೊಸ ಸೋಂಕಿನ ಪ್ರಕರಣಗಳು ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 1.65 ಲಕ್ಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ 58 ಲಕ್ಷಕ್ಕೂ ಹೆಚ್ಚು ಸೋಂಕು ವಿಶ್ವಾದ್ಯಂತ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚೀನೀ ವೈರಸ್ ಕೊರೋನಾಗೆ ಬಲಿಯಾದವರ ಸಂಖ್ಯೆಯೂ 4 ಲಕ್ಷ ಸಮೀಪಿಸುತ್ತಿದ್ದು ಇದೀಗ ಕೋವಿಡ್-19 ಬಗೆಗಿನ ಆತಂಕವೂ ದುಪ್ಪಟ್ಟಾಗಿದೆ. ಅಮೆರಿಕಾದಲ್ಲಿ 17,21,753 ಮಂದಿ ಸೋಂಕಿತರಿದ್ದರೆ, ಬ್ರೆಜಿಲ್’ನಲ್ಲಿ 438,812 ಮಂದಿ ಸೋಂಕಿಗೊಳಗಾಗಿದ್ದಾರೆ. ರಷ್ಯಾದಲ್ಲೂ 379,051 ಸೋಂಕಿನ ಪ್ರಕರಣಗಳಿದ್ದರೆ, ಸ್ಪೇನ್ ದೇಶದಲ್ಲಿ 284,986 ಹಾಗೂ ಬ್ರಿಟನ್’ನಲ್ಲಿ 269,127 ಮಂದಿಗೆ…

‘ಕಲ್ಲಂಗಡಿ ತೊಗಟೆಯ ಹಲ್ವ’ ಸ್ವಾದಿಷ್ಟ ತಿಂಡಿ

ನಾಲ್ಪಕ್ಕೆ ಪ್ರವೀಣ ವಾಯುದರಲ್ಲೂ ಸ್ವಾದಿಷ್ಟ ಖಾದ್ಯ ಮಾಡಬಲ್ಲ. ಕಲ್ಲಂಗಡಿಯಲ್ಲೂ ಅವೆಷ್ಟೋ ತಿಂಡಿಗಳನ್ನು ಮಾಡಬಹುದು. ಅವುಗಳ ಪೈಕಿ ಕಲ್ಲಂಗಡಿಯ ತೊಗಟೆಯ ಹಲ್ವ ಕೂಡಾ ಒಂದು.. ಬೇಕಾದ ಸಾಮಗ್ರಿ ಕಲ್ಲಂಗಡಿ ತೊಗಟೆ 8 ಕಪ್ ಸಕ್ಕರೆ 3 ಕಪ್ ಉಪ್ಪು ಕಾಲ್ ಚಮಚ ಹಾಲು ಅರ್ಧ ಕಪ್ ಗೇರುಬೀಜ 10 ಒಣ ದ್ರಾಕ್ಷಿ 10 ತುಪ್ಪ ಕಾಲ್ ಕಪ್ ಮಾಡುವ ವಿಧಾನ ಕಲ್ಲಂಗಡಿಯನ್ನು ತುಂಡು ಮಾಡಿ ಬಿಳಿಯ ಭಾಗವನ್ನು ತೆಗದು, ನಂತರ ಅದರ ಸಿಪ್ಪೆಯನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ತುರಿದು ಇಟ್ಟುಕೊಳ್ಳಬೇಕು. ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ,ಗೋಡಂಬಿ, ದ್ರಾಕ್ಷಿಯನ್ನು ಹುರಿದು ತೆಗೆದಿಡಿ. ಒಂದು ದೊಡ್ಡ ಬಾಣಲೆಯಲ್ಲಿ ತುರಿದ ಕಲ್ಲಂಗಡಿ ತೊಗಟೆಯನ್ನು ಹಾಕಿ ಬೇಯಿಸಬೇಕು. ಬೆಂದ ನಂತರ ಒಂದು ಚಿಟಿಕಿ ಉಪ್ಪು , ಸಕ್ಕರೆ ಹಾಕಿ ಚೆನ್ನಾಗಿ 5 ನಿಮಿಷಗಳ ಕಾಲ ಕಲಸುತ್ತ ಇರಿ. ಅದಕ್ಕೆ ಹಾಲು ಹಾಕಿ ಚೆನ್ನಾಗಿ…

ಹೆಚ್ಚಿದ ಕೊರೋನಾ ವೇಗ; ವಿಶ್ವಾದ್ಯಂತ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು

ದೆಹಲಿ: ಜಗತ್ತಿನಾದ್ಯಂತ ಕೊರೋನಾ ತಲ್ಲಣ ಮುಂದುವರಿದಿದೆ. ಭಾರತ ಸೇರಿದಂತೆ ಹಲವು ರಾಸ್ಗ್ತ್ರಗಳಲ್ಲಿ ಸೋಂಕಿನ ವೇಗ ಹೆಚ್ಚಾಗಿದ್ದು, ವಿಶ್ವಾದ್ಯಂತ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚೀನೀ ವೈರಸ್ ಕೊರೋನಾಗೆ ಬಲಿಯಾದವರ ಸಂಖ್ಯೆಯೂ ೪ ಲಕ್ಷ ಸಮೀಪಿಸುತ್ತಿದ್ದು ಇದೀಗ ಕೋವಿಡ್-19 ಬಗೆಗಿನ ಆತಂಕವೂ ದುಪ್ಪಟ್ಟಾಗಿದೆ. ಅಮೆರಿಕಾದಲ್ಲಿ 17,21,753 ಮಂದಿ ಸೋಂಕಿತರಿದ್ದರೆ, ಬ್ರೆಜಿಲ್’ನಲ್ಲಿ 438,812 ಮಂದಿ ಸೋಂಕಿಗೊಳಗಾಗಿದ್ದಾರೆ. ರಷ್ಯಾದಲ್ಲೂ 379,051 ಸೋಂಕಿನ ಪ್ರಕರಣಗಳಿದ್ದರೆ, ಸ್ಪೇನ್ ದೇಶದಲ್ಲಿ 284,986 ಹಾಗೂ ಬ್ರಿಟನ್’ನಲ್ಲಿ 269,127 ಮಂದಿಗೆ ವೈರಸ್ ಅಂಟಿಕೊಂಡಿದೆ. ಇಟಲಿಯಲ್ಲಿ 231,732, ಫ್ರಾನ್ಸ್’ನಲ್ಲಿ 186,238 ಹಾಗೂ ಜರ್ಮನಿಯಲ್ಲಿ 182,452 ಮಂದಿಯಲ್ಲಿ ಸೋಂಕು ಪತ್ತೆಯಾಗಿ ಈ ದೇಶಗಳು ಭಾರೀ ಸವಾಲನ್ನೇ ಎದುರಿಸುತ್ತಿವೆ. 9ನೇ ಸ್ಥಾನಕ್ಕೇರಿದ ಭಾರತ ಭಾರತದಲ್ಲಿ ಕೊರೋನಾ ವೈರಾಣು ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಕಳೆದ ವಾರದವರೆಗೂ ಭಾರತ 10ನೇ ಸ್ಥಾನದಲ್ಲಿಟ್ಟು. ಶುಕ್ರವಾರ ಒಂದೇ ದಿನ…

ನಿಮ್ಮ ಮೊಬೈಲ್ ಸಂಖ್ಯೆ ಇನ್ನು ಮುಂದೆ 10 ಅಲ್ಲ 11ಅಂಕಿ; ನೀವೇನು ಮಾಡಬೇಕು ಗೊತ್ತಾ?

ದೆಹಲಿ: ನಿಮ್ಮ ಮೊಬೈಲ್ ಸಂಖ್ಯೆ ಈ ವರೆಗೂ 10 ಅಂಕಿಗಳನ್ನು ಒಳಗೊಂಡಿದೆಯೇ?  ಇದೀಗ ಅದು ಹನ್ನೊಂದು ಆಗಲಿದೆ. ಈಗಿರುವ 10 ಸಂಖ್ಯೆಯ ಮೊಬೈಲ್ ನಂಬರ್’ನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ  ಶಿಫಾರಸು ಮಾಡಿದೆ. ಟ್ರಾಯ್ ಕ್ರಮದಿಂದ ನಿಮ್ಮ ಮೊಬೈಲ್ ಸಂಖ್ಯೆ ಸಂಪೂರ್ಣವಾಗಿ ಬದಲಾಗದು. ಬದಲಾಗಿ ಈಗಿರುವ ಮೊಬೈಲ್ ಸಂಖ್ಯೆಯ ಮೊದಲು ‘0’ ಅಂಕಿಯನ್ನು ಸೇರಿಸಬೇಕು. ಲ್ಯಾನ್ಡ್ ಲೈನ್’ನಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮುನ್ನ ‘0’ ಸೇರಿಸಿ ಡಯಲ್ ಮಾಡಬೇಕಿದೆ. ಮೊಬೈಲ್’ನಿಂದ ಮೊಬೈಲ್ ಅಥವಾ ನ್ಡ್ ಲೈನ್’ಗೆ ಕರೆ ಮಾಡುವಾಗ ‘0’ ಸಂಖ್ಯೆ ಸೇರಿಸುವ ಅಗತ್ತ್ಯವಿಲ್ಲ. ಮೊಬೈಲ್ ಬಳಕೆದಾರ ಸಂಖ್ಯೆ ಹೆಚ್ಚುವ ಕಾರಣಕ್ಕಾಗಿ ಈ ರೀತಿಯ ತೀರ್ಮಾನ ಕೈಗೊಂಡಿದ್ದಾಗಿ ಟ್ರಾಯ್ ಹೇಳಿದೆ. ಇದನ್ನೂ ಓದಿ.. ಕೆ.ಆರ್.ಎಸ್ ಮುಂಭಾಗ ಒಡೆಯರ್ ಪ್ರತಿಮೆ‌ ; ರಾಜಮಾತೆ ಹರ್ಷ   

ಕರುನಾಡಲ್ಲಿ ಕೊರೋನಾ ಸ್ಫೋಟ; ಒಂದೇ ದಿನ ಬರೋಬ್ಬರಿ 248 ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಒಂದೇ ದಿನ 248 ಪಾಸಿಟಿವ್ ಕೇಸುಗಳು ವರದಿಯಾಗುವ ಮೂಲಕ ಕೋವಿಡ್-19 ಬೆಳವಣಿಗೆ ರಾಜ್ಯದ ಜನರ ಆತಂಕವನ್ನು ಹೆಚ್ಚಿಸಿದೆ. ಗುರುವಾರ ಸಂಜೆ 5 ಗಂಟೆ ನಂತರ ಶುಕ್ರವಾರ ಸಂಜೆ ವರೆಗಿನ ರಾಜ್ಯದ ವಿವಿಧ ಜಿಲ್ಲೆಗಳ ಕೊರೋನಾ ವಿದ್ಯಮಾನಗಳನ್ನಾಧರಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬಹಿರಂಗಪಡಿಸಿರುವ ಅಂಕಿ ಅಂಶ ಜನರನ್ನು ಬೆಚ್ಚಿ ಬೀಳಿಸುವಂತಿದೆ. 28 ತಾಸುಗಳಲ್ಲಿ 248 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ತಲಾ 60ಕ್ಕೂ ಹೆಚ್ಚು ಕೇಸ್’ಗಳು ಪಟ್ಟಿ ಸೇರಿವೆ. ರಾಯಚೂರು – 62 ಹೊಸ ಕೇಸ್ ಕಲಬುರಗಿ – 61 ಹೊಸ ಕೇಸ್ ಯಾದಗಿರಿ – 60 ಹೊಸ ಕೇಸ್ ಉಡುಪಿ – 15 ಹೊಸ ಕೇಸ್ ಬೆಂಗಳೂರು ನಗರ – 12 ಹೊಸ ಕೇಸ್ ಬಳ್ಳಾರಿ –…

ಕೆ.ಆರ್.ಎಸ್ ಮುಂಭಾಗ ಒಡೆಯರ್ ಪ್ರತಿಮೆ‌ ; ರಾಜಮಾತೆ ಹರ್ಷ

ಮೈಸೂರು: ರಾಜ್ಯದ ರೈತರ ಜೀವನಾಡಿ ಕೃಷ್ಣರಾಜ ಸಾಗರ ಬಳಿ ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ರಾಗಿದ್ದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸುವ ಸರ್ಕಾರದ ನಿರ್ಧಾರಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಮೈಸೂರು ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಅವರು ಕೃಷ್ಣರಾಜ ಸಾಗರ ಬಳಿ ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ರಾಗಿದ್ದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸುವ ವಿಚಾರ ಕುರಿತು ಚರ್ಚಿಸಿದರು. ಸರ್ಕಾರದ ತೀರ್ಮಾನಕ್ಕೆ ರಾಜಮಾತೆ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ನೀರಾವರಿ, ಹೈನುಗಾರಿಕೆ, ಕೃಷಿ ಪ್ರಧಾನವಾಗಿ ಇನ್ನೂ ಕರ್ನಾಟಕವು ಸಮೃದ್ಧಿಯಿಂದ ಇದೆ ಎಂದರೆ…

‘ಪವರ್ ಸ್ಟಾರ್’ ಮುಂದಿನ ಸಿಎಂ..? ರಾಜ್ಯ ರಾಜಕಾರಣದಲ್ಲಿ ‘ಕೈ ಸೂತ್ರ’ದ ಕೌತುಕ

ರಾಜ್ಯ ರಾಜಕಾರಣ ದಿನಕ್ಕೊಂದು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದರೆ ಇನ್ನೊಂದೆಡೆ ಪ್ರತಿಪಕ್ಷಗಳ ಪಾಳಯದಲ್ಲಿ ‘ಡಿಕೆಶಿ ಮನ್ವಂತರ’ದ ಸಂಚಲನ. ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಎಂದೇ ಗುರುತಾಗಿರುವ ಕೈ ನಾಯಕ “ಹಿಂದಿನ ಸರ್ಕಾರದಲ್ಲಿ ಪವರ್ ಮಿನಿಸ್ಟರ್.. ಇದೀಗ ಅವರೇ ಕಾಂಗ್ರೆಸ್ಸಲ್ಲಿ ಪವರ್ ಸ್ಟಾರ್” ಎಂದು ಸ್ವತಃ ರಾಹುಲ್ ಗಾಂಧಿಯವರೇ ಬಣ್ಣಿಸಿದ್ದಾರೆ. ಹಾಗಾಗಿಯೇ ಪ್ರದೇಶ ಕೈ ಪಟ್ಟವನ್ನು ಡಿಕೆಶಿ ಕೈಗೆ ಕೊಟ್ಟಿದ್ದು, ಈಗೀಗ ರಾಜ್ಯ ರಾಜಕಾರಣ ಕ್ರಮಿಸುತ್ತಿರುವ ಎಲ್ಲಾ ಮಜಲುಗಳೂ ಕದನ ಕೌತುಕ ಸೃಷ್ಟಿಸುತ್ತಲೇ ಇವೆ. ಕೆಲ ತಿಂಗಳ ಹಿಂದೆ ED ಕೇಸ್’ನಲ್ಲಿ ಹಲವು ದಿನಗಳ ಕಾಲ ಬಂಧಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಚರಿತ್ರೆ ಕಮರಿ ಹೋಯಿತೆಂದೇ ಅನೇಕ ಪಂಡಿತರು ಬಣ್ಣಿಸಿದ್ದರು. ಆದರೆ ಈ ಛಲಗಾರನ ಪಾಲಿಗೆ ಅದುವೇ ವರದಾನವಾಯಿತು. ಕೈ ಪಾಳಯದಲ್ಲಿ ಬದಲಿ ಸಮರ್ಥರು ಇಲ್ಲ ಎನ್ನುವ ರೀತಿಯಲ್ಲಿ ಈ ದಂಡನಾಯಕ ತನ್ನದೇ ಶೈಲಿಯಲ್ಲಿ…

ಕರ್ನಾಟಕದಲ್ಲಿ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆ: ರೈತರಿಗೆ ಸರ್ಕಾರ ಅಭಯ ಅಭಯ

ಬೆಂಗಳೂರು: ಬಹುತೇಕ ರಾಜ್ಯಗಳಲ್ಲಿ ಮಿಡತೆ ಹಾವಳಿ ರೈತರನ್ನು ಕಂಗಾಲಾಗಿಸಿದೆ. ಕೋಲಾರ ಜಿಲ್ಲೆಗೂ ಈ ಮಿಡತೆ ಸೈನ್ಯ ಲಗ್ಗೆ ಹಾಕಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಮಿಡತೆ ಬಗ್ಗೆ ರಾಜ್ಯದ ರೈತರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಕೋಲಾರದಲ್ಲಿ ಕಂಡುಬಂದಿರುವುದು ಸಾಮಾನ್ಯ ಎಕ್ಕೆ ಗಿಡದ ಮಿಡತೆಯಾಗಿದ್ದು, ಲೋಕ್ಟಸ್ ಮಿಡತೆಗೂ ಇದಕ್ಕೂ ಸಂಬಂಧವಿಲ್ಲ. ಕರ್ನಾಟಕಕ್ಕೆ ಲಾಕ್ಟಸ್ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆಯಿದ್ದು, ರೈತರು ಯಾವುದೇ ಕಾರಣಕ್ಕೂ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರನ್ನು ಬಾಧಿಸಿರುವ ಲೋಕ್ಟಸ್ ಮಿಡತೆ ಹಾವಳಿ ರಾಜ್ಯಕ್ಕೆ ಬಾಧಿಸದಂತೆ ತೆಗೆದುಕೊಳ್ಳಬಹುದಾದ ಕ್ರಮಗಳು ಮುನ್ನೆಚ್ಚರಿಕೆಗಳ ಕುರಿತು ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದ ಕೃಷಿಸಚಿವರು, ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಕ್ರಮಗಳ ಬಗ್ಗೆ ವಿವರಿಸಿದರು. ಮಿಡತೆ ಗಾಳಿಯನ್ನು…

‘ಭೋಜರಾಜ್ MBBS’ ಕ್ಲೈಮ್ಯಾಕ್ಸ್; ಹಾಸ್ಯರತ್ನ ಕಂಪೌಂಡರ್ ಬಗ್ಗೆ ಕುತೂಹಲ ಏಕೆ ಗೊತ್ತಾ?

ಲಾಕ್’ಡೌನ್ ಕಾರಣದಿಂದಾಗಿ ಮೌನ ಆವರಿಸಿದ್ದ ಚಿತ್ರರಂಗದಲ್ಲಿ ಇದೀಗ ಹೊಸ ಕನಸುಗಳು ಚಿಗುರಿವೆ. ಅದರಲ್ಲೂ ಕೋಸ್ಟಲ್’ವುಡ್ ಪಾಳಯದಲ್ಲಿ ತೆರೆಮೆರೆ ಕಸರತ್ತು ಆರಂಭವಾಗಿದೆ. ಹಾಸ್ಯಪ್ರಧಾನ ಮೂವೀಗಳೇ ಹೆಚ್ಚಿರುವ ತುಳು ಸಿನಿಮಾ ಪೈಕಿ ಹೊಸ ಚಿತ್ರಗಳು ಬಿಡುಗಡೆಯಾಗಿ ತಿಂಗಳುಗಳೇ ಕಳೆದಿವೆ. ಬಹುಷಃ ಲಾಕ್’ಡೌನ್ ಜಾರಿಗೆ ಬರದಿದ್ದರೆ ಇಷ್ಟೊತ್ತಿಗಾಗಲೇ ಹಲವು ಸಿನಿಮಾಗಳು ತೆರೆ ಮೇಲೆ ಅಬ್ಬರಿಸುತ್ತಿದ್ದವು. ಈ ನಡುವೆ ಬಹು ನಿರೀಕ್ಷೆಯ ‘ಭೋಜರಾಜ್ MBBS’ ಸಿನಿಮಾ ಕ್ಲೈಮ್ಯಾಕ್ಸ್ ಘಟ್ಟದಲ್ಲಿದೆ. ಬಹುಪಾಲು ಚಿತ್ರೀಕರಣ ಮುಗಿಸಿ ಲಾಕ್’ಡೌನ್’ನಿಂದಾಗಿ ಸಣ್ಣದೊಂದು ಬ್ರೇಕ್ ಪಡೆದಿರುವ ತುಳುವರ ಬಹು ನಿರೀಕ್ಷೆಯ ಈ ಚಿತ್ರ ಕುಡ್ಲ ಸಿನೆಮಾ ನಿರ್ಮಾಣದಲ್ಲಿ ತಯಾರಾಗುತ್ತಿದೆ. ನವರಸರಾಜೆ ಭೋಜರಾಜ ವಾಮಂಜೂರು ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಭೋಜರಾಜ್ MBBS’ ಸಿನಿಮಾ ಟೈಟಲ್ ಗಮನಿಸಿದರೆ ನಟ ಭೋಜರಾಜ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ.…