ಯುವತಿಯ ಜೀವ ಉಳಿಸಿದ ಬಾಲಕಿ; ಎಲ್ಲೆಲ್ಲೂ ಜೀರಕ್ಷಕಿಯ ಗುಣಗಾನ

ಉಡುಪಿ: ಎಂತಹಾ ಕಠಿಣ ಪರಿಸ್ಥಿತಿಯಲ್ಲೂ ಸಮಯ ಪ್ರಜ್ಞೆಯು ಬಡ ಜೀವವನ್ನೂ ಉಳಿಸಬಹುದು ಎಂಬುದಕ್ಕೆ ಈ ಬಾಲಕಿ ಸಾಕ್ಷಿ. ಯಮನ ಮನೆಯ ಕದ ತಟ್ಟಿದ್ದ ಯುವತಿಯನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಬದುಕುಳಿಸಿದ ಅಪರೂಪದ ಘಟನೆ ಉಡುಪಿ ಸಮೀಪದ ಬಾರ್ಕೂರು ಬಳಿ ನಡೆಸಿದೆ. ಯುವತಿಯ ಪ್ರಾಣ ರಕ್ಷಿಸಿದ ಬಾಲಕಿ ಇದೀಗ ಹೀರೋಯಿನ್..

ಘಟನೆ ನಡೆದದ್ದಿಷ್ಟು. ಉಡುಪಿ ಜಿಲ್ಲೆ ಬಾರಕೂರು ಬಳಿ ಕಾರು ಅಪಘಾತಕ್ಕೀಡಾಗಿತ್ತು. ಚೌಳಿಕೆರೆಗೆ ಉದ್ಯಮಿ ಸಂತೋಷ್‌ ಶೆಟ್ಟಿ ಅವರಿದ್ದ ಕಾರು ಉರುಳಿ ಬಿದ್ದು ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಸಂತೋಷ್ ಶೆಟ್ಟಿ ಸಾವನ್ನಪ್ಪಿದರಾದರೂ ಅವರ ಸಂಸ್ಥೆಯ ಉದ್ಯೋಗಿ ಶ್ವೇತಾ ಎಂಬವರು ಅಸ್ವಸ್ಥರಾಗಿದ್ದರು. ಜೀವನ್ಮರಣ ಸ್ಥಿತಿಯಲ್ಲಿದ್ದಾಗ ಬಾಲಕಿ ನಮನಾ ಎಂಬ ಬಾಲೆ,  ಸೇನಾನಿಯಂತೆ ನೆರವಿಗೆ ಧಾವಿಸಿದ್ದಾಳೆ. ಸ್ಥಳದಲ್ಲಿದ್ದ ಯುವಕರು ಗಾಯಾಳುಗಳನ್ನು ಕೆರೆಯಿಂದ ಮೇಲೆತ್ತಿ ಕರೆತರುತ್ತಿದ್ದಂತೆಯೇ ಅಲ್ಲೇ ಸಮೀಪದಲ್ಲಿದ್ದ ಬಾಲಕಿ ನಮನಾ ಪ್ರಥಮ ಚಿಕಿತ್ಸೆ ನೀಡಿ ಯುವತಿಯೊಬ್ಬಳ ಪಾಲಿಗೆ ಜೀವ ಸಂಜೀವಿನಿಯಾದಳು.

 

NCC ಕಳಿಸಿದ ವಿದ್ಯೆ..!!

ಅಪಘಾತ ಸ್ಥಳದಲ್ಲಿ ಆಪತ್ಬಾಂಧವಳಂತೆ ಪ್ರತ್ಯಕ್ಷಳಾಗಿದ್ದ ಬಾಲಕಿ ನಮನಾ ಉಡುಪಿ ಸಮೀಪದ ಬ್ರಹ್ಮಾವರ ಲಿಟ್ಲರಾಕ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಎನ್‌ಸಿಸಿ ಕೆಡೆಟ್‌ ಆಗಿರುವ ನಮನಾ, ತಾನು ಕಲಿತ ಪ್ರಥಮ ಚಿಕಿತ್ಸೆಯ ಪಾಠವನ್ನು ಇಲ್ಲಿ ಸದ್ಬಳಕೆ ಮಾಡಿದ್ದಾಳೆ. ಈಕೆಯ ಸಮಯಪ್ರಜ್ಞೆ ಒಬ್ಬರ ಜೀವವನ್ನು ಉಳಿಸಿದೆ.

NSS ಅಧಿಕಾರಿಯಾಗಿರುವ ಉಪನ್ಯಾಸಕಿ ಸವಿತಾ ಎರ್ಮಾಳು – ಕುಮಾರ್‌ ದಂಪತಿಯ ಪುತ್ರಿಯಾಗಿರುವ ನಮನಾ ತನ್ನ ತಾಯಿಯ ಜೊತೆ ಹತ್ತಾರು NSS ಶಿಬಿರಗಳಲ್ಲಿ ಪಾಲ್ಗೊಂಡು ವಿವಿಧ ತರಬೇತಿ ಪಡೆದಿದ್ದಾರೆ. ಅಲ್ಲಿ ಕಲಿತ ವಿದ್ಯೆಯನ್ನು ಈ ಆಪತ್ಕಾಲದಲ್ಲಿ ಪ್ರಯೋಗಿಸಿ ನಮನಾ ಗಮನಸೆಳೆದಿದ್ದಾರೆ. ಜೀವರಕ್ಷಕಿಯಾಗಿ ಈ ಬಾಲಕಿ ಪ್ರಥಮ ಚಿಕಿತ್ಸೆ ನೀಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಸಾರ್ವಜನಿಕರಿಂದ ಪ್ರಶಂಶೆ ವ್ಯಕ್ತವಾಗುತ್ತಿದೆ.

Related posts