ದೆಹಲಿ: ಕೊರೋನಾ ವೈರಸ್ ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸುತ್ತಿದ್ದು ಅದರ ಕರಾಳ ಬಾಹುಗಳು ಇದೀಗ ವಿಶ್ವವ್ಯಾಪಿ ವಿಸ್ತಾರವಾಗುತ್ತಿದೆ. ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು, ಒಂದರ ಹಿಂದೊಂದರಂತೆ ಪ್ರಕರಣಗಳು ದೃಡಪಡುತ್ತಿವೆ.
ದೆಹಲಿ ಮತ್ತು ತೆಲಂಗಾಣದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಇಟಲಿ ಹಾಗೂ ದುಬೈಯಿಂದ ಇತ್ತೀಚಿಗೆ ಭಾರತಕ್ಕೆ ಇಬ್ಬರು ರೋಗಿಗಳಲ್ಲಿ ಈ ಸೋಂಕು ದೃಡಪಟ್ಟಿರುವುದಾಗಿ ಹೇಳಿದೆ.
ಭಾರತದಲ್ಲೂ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾನ್, ಇಟಲಿ, ದಕ್ಷಿಣ ಕೊರಿಯಾ, ಮತ್ತು ಸಿಂಗಾಪುರ ಮೊದಲಾದ ಕೊರೋನಾ ಪೀಡಿತ ದೇಶಗಳಿಗೆ ಪ್ರವಾಸ ಮಾಡಬೇಡಿ ಎಂದು ಸರ್ಕಾರ ಸಲಹೆ ನೀಡಿದೆ.