ಬಸವ ಜಯಂತಿ; ಪ್ರಧಾನಿ ಮೋದಿ ಸಹಿತ ಗಣ್ಯರಿಂದ ಶುಭಾಷಯ

ಬೆಂಗಳೂರು: ಸಾಮಾಜಿಕ ಹರಿಕಾರ, ಮನುಕುಲಕ್ಕೆ ಸಮಾನತೆಯ ಸೂತ್ರವನ್ನು ಹೇಳಿಕೊಟ್ಟ ಮಹಾಸಂತನ ಜನ್ಮ ದಿನವನ್ನು ನಾಡಿನೆಲ್ಲೆಡೆ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

ಫಾಧಾನಿ ನರೇಂದ್ರ ಮೋದಿ ಸಹಿತ ನಾಡಿನ ಅನೇಕ ಗಣ್ಯರು ಬಸವೇಶ್ವರ ಜಯಂತಿ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸಹಿತ ರಾಜ್ಯದ ಪ್ರಮುಖರೂ ಬಸವೇಶ್ವರರ ಸಂದೇಶ ಸಾರಿದ್ದಾರೆ.

ಗಡಿನಾಡಿನಲ್ಲಿ ಸರಳ ಆಚರಣೆ:

ಬಸವ ಜಯಂತಿ ಅಂಗವಾಗಿ ಬೆಳಗಾವಿಯಲ್ಲೂ ಶ್ರಾದ್ದಾಭಕ್ತಿಯ ಕಾರ್ಯಕ್ರಮ ಗಮನಸೆಳೆಯಿತು. ಗೋಕಾಕ್ ನಗರದಲ್ಲಿರುವ ಜಗಜ್ಯೋತಿ
ಬಸವೇಶ್ವರರ ಪ್ರತಿಮೆಗೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಅವರು ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಗೋಕಾಕ್ ಮುರುಘಾಮಠದ ಶರಣರು ಸೇರಿದಂತೆ ಅನೇಕ ಬಸವ ತತ್ವ ಅನುಯಾಯಿಗಳು ಉಪಸ್ಥಿತರಿದ್ದರು.

12 ನೇ ಶತಮಾನದಲ್ಲಿ ಸಾಮಾಜಿಕ ಸಾಮರಸ್ಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಸವಣ್ಣ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿ ವಿಶ್ವಗುರುವಾದರು ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ಬಸವಣ್ಣನವರ ತತ್ವಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಅವರ ವಚನಗಳ ಸಾರವನ್ನು ಅರಿತು ಒಳ್ಳೆಯ ಜೀವನ ನಡೆಸಬೇಕೆಂದು ಸಚಿವರು ಕರೆ‌ ನೀಡಿದರು.

Related posts