ವಿವಾಹಿತೆಯೊಂದಿಗೆ ಯುವಕ ಪರಾರಿ; ಅವಮಾನ ತಾಳಲಾರದೆ ಕುಟುಂಬ ಸದಸ್ಯರ ಆತ್ಮಹತ್ಯೆ

ಚಾಮರಾಜನಗರ: ವಿವಾಹಿತ ಮಹಿಳೆ ಜೊತೆ ಯುವಕನೊಬ್ಬ ಪರಾರಿಯಾಗಿರುವ ಪ್ರಕರಣ ಗುಂಡ್ಲುಪೇಟೆ ಸಮೀಪದ ಬೆಳಚವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇದರಿಂದ ನೊಂದ ಯುವಕನ ಕುಟುಂಬ ಸದಸ್ಯರು ಸಾವಿಗೆ ಶರಣಾಗಿರುವ ಘಟನೆ ಆ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ.

ಬೆಳಚವಾಡಿ ಗ್ರಾಮದ ನಂಜುಂಡಿ ಎಂಬ ಯುವಕ ಅದೇ ಗ್ರಾಮದ ವಿವಾಹಿತ ಮಂಜುಳಾ ಎಂಬ ಮಹಿಳೆಯೊಂದಿಗೆ ಪರಾರಿಯಾಗಿದ್ದ ಎಂಬುದು ಆ ಊರಿನಲ್ಲಿ ಬಿಗಾಈ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಿಂದಾಗಿ ಅವಮಾನ ತಾಳಲಾರದೆ ಆ ಯುವಕನ ತಾಯಿ ಸುಬ್ಬಮ್ಮ (40), ಹಾಗೂ ಸಹೋದರ ಸಿದ್ಧರಾಜು (26) ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.

Related posts