ಒಂದು ತಿಂಗಳ ಕಾಲ ಮನೆ ಬಾಡಿಗೆ ವಿನಾಯಿತಿ ; ಕೇಂದ್ರದ ಸೂಚನೆ

ದೆಹಲಿ: ಕೊರೋನಾ ಹಾವಳಿ ದೇಶದ ಜನರ ನೆಮ್ಮದಿಯನ್ನೇ ಕೆಡಿಸಿದೆ. ಅತ್ತ ಉದ್ಯೋಗವೂ ಇಲ್ಲ, ಇತ್ತ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲ ಎಂಬಂತಾಗಿದೆ ಬಡಪಾಯಿ ಜನರ ಸ್ಥಿತಿ.

ಕೊರೋನಾ ವೈರಾಣು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಕಸರತ್ತು ಸಾಗಿದೆ. ಕೇಂದ್ರ ಸರ್ಕಾರ ಕೂಡಾ 3 ವಾರಗಳ ಕಾಲ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿದೆ. ಹಾಗಾಗಿ ಎಲ್ಲೆಡೆ ಕಂಪೆನಿಗಳು, ಕಾರ್ಖಾನೆಗಳು ಬಂದ್ ಆಗಿವೆ. ಕೊಟ್ಯಾನ್ತರ ಕಾರ್ಮಿಕರು ಸದ್ಯಕ್ಕೆ ನಿರುದ್ಯೋಗಿಗಳಾಗಿದ್ದಾರೆ. ಸಂಕಷ್ಟದಲ್ಲಿರುವ ಈ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಹಲವಾರು ಸೂತ್ರಗಳನ್ನು ಪ್ರಕಟಿಸಿದೆ.

ಇದನ್ನೂ ಓದಿ..
ಕೊರೋನಾ ಹೊಡೆತ: ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗುತ್ತದೆಯೇ?

ಕೆಲ ದಿನಗಳ ಹಿಂದಷ್ಟೇ ಬ್ಯಾಂಕ್ ಸಾಲದ ಕಂತು ಪಾವತಿಗೆ ವಿನಾಯಿತಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇದೀಗ ಕಾರ್ಮಿಕರಿಂದ ಮನೆ ಬಾಡಿಗೆಗೂ ವಿನಾಯಿತಿ ನೀಡಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೇ ತವರಿನತ್ತ ಮುಖ ಮಾಡಿರುವ ಕಾರ್ಮಿಕರನ್ನು ತಡೆಯಬೇಕು. ಇದಕ್ಕೆ ಪೂರಕವಾಗಿ ಕಾರ್ಮಿಕರಿಂದ ಮನೆ ಮಾಲೀಕರು 1 ತಿಂಗಳು ಬಾಡಿಗೆ  ಪಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕಾರ್ಮಿಕರ  ದಿಢೀರ್ ವಲಸೆಯನ್ನು ತಪ್ಪಿಸುವ ಸಲುವಾಗಿ ಮುಂದಿನ 1  ತಿಂಗಳ ಕಾಲ ಕಾರ್ಮಿಕರು ತಂಗಿರುವ ಮನೆಗಳ ಮಾಲೀಕರು ಬಾಡಿಗೆ ಪಡೆಯುವಂತಿಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ .. 
ಕೊರೋನಾ ಹೊಡೆತ: 32ಲಕ್ಷ ದಾಟಿದ ನಿರುದ್ಯೋಗಿಗಳ ಸಂಖ್ಯೆ

Related posts