ಜನರಿಗಾಗಿ ವಿವಾಹವನ್ನೇ ಮರೆತ ಮಹಿಳಾ DYSP; ಕನ್ನಡತಿಗೆ ಸೆಲ್ಯೂಟ್ ಅಂದ ಸುಮಲತಾ 

ಬೆಂಗಳೂರು: ನಾಡಿಗೆ ಕೊರೋನಾ ಕಂಟಕ ಯಾವಾಗ ಎದುರಾಯಿತೋ ಆವಾಗಿನಿಂದ ಜನ ಎಲ್ಲಾ ರೀತಿಯ ಸಂತಸದ ಕ್ಷಣಗಳನ್ನು ಮರೆಯಲೇಬೇಕಾಯಿತು. ಅವೆಷ್ಟೋ ಮದುವೆಗಳು ರದ್ದಾಗಿವೆ. ಗೃಹ ಪ್ರವೇಶದಂತಹಾ ಸಮಾರಂಭಗಳೂ ಮಾಯವಾದವು. ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಸಾವಿರಾರು ಉತ್ಸವಗಳೂ ರದ್ದಾದವು.

ಕೊರೋನಾ ವೈರಾಣು ಹಾವಳಿಯಿಂದಾಗಿ ಇಡೀ ಜಗತ್ತು ಸೂತಕದ ಛಾಯೆ ಆವರಿಕೊಂಡಿರುವ ಸಂದರ್ಭದಲ್ಲಿ ಪೊಲೀಸರು ಕೂಡಾ ರಾತ್ರಿ ಹಗಲು ಸೇನಾನಿಗಳ ತರ ದುಡಿಯುತ್ತಿದ್ದಾರೆ. ಈ ಪೈಕಿ ಮಂಡ್ಯಾ ಜಿಲ್ಲೆಯ ಪೊಲೀಸ್ ಉಪ ಅಧೀಕ್ಷಕಿ ನಾಡಿನ ಗಮನಸೆಳೆದಿದ್ದಾರೆ. ನಾಡಿನ ಒಳಿತಿಗಾಗಿ ತನ್ನ ಮದುವೆಯನ್ನೇ ಮುಂದೂಡಿದ ಇವರು ಎಲ್ಲರ ಮೇಚ್ಛೆಗೆಗೂ ಪಾತ್ರರಾಗುತ್ತಿದ್ದಾರೆ.

ಇವರ ಹೆಸರು ಎಂ.ಜೆ.ಪೃಥ್ವಿ. KSPS ಅಧಿಕಾರಿಯಾಗಿರುವ ಇವರು ಮಂಡ್ಯ ಜಿಲ್ಲೆ ಮಳವಳ್ಳಿ ಉಪವಿಭಾಗದಲ್ಲಿ DYSPಯಾಗಿ ನಿಯುಕ್ತಿಯಾಗಿದ್ದಾರೆ. ದ್ಯಾಮಣ್ಣ ಎಂಬವರ ಜೊತೆ ವಿವಾಹ ನಿಶ್ಚಿತಾರ್ಥ ನೆರವೇರಿದ್ದು, ಏಪ್ರಿಲ್ 5 ರಂದು ವಿವಾಹ ಸಮಾರಂಭ ಹಾಗೂ ಏಪ್ರಿಲ್ 10 ರಂದು ರಿಸೆಪ್ಶನ್ ಕೂಡಾ ನಿಗದಿಯಾಗಿತ್ತು. ಆದರೆ ಕೊರೋನಾ ಹಾವಳಿಯಿಂದಾಗಿ ನಾಡು ಸಂಕಷ್ಟದಲ್ಲಿರುವಾಗ ಕರ್ತವ್ಯದಿಂದ ದೂರ ಉಳಿದು ವಿವಾಹ ವೈಭವದ ಖುಷಿಯಲ್ಲಿ ತೇಲುವುದು ಸರಿಯಲ್ಲ ಎಂದು ನಿರ್ಧಾರಕ್ಕೆ ಭಾವದ ಪೃಥ್ವಿ ತನ್ನ ವಿವಾಹ ಸಮಾರಂಭವನ್ನೇ ಮುಂದೂಡಿದ್ದಾರೆ.

ಮನೆಮಂದಿಯಲ್ಲಷ್ಟೇ ಹಾಗೂ ಪೊಲೀಸ್ ಆಪ್ತವಲಯದಲ್ಲಷ್ಟೇ ಗೊತ್ತಿದ್ದ  ಈ ವಿಚಾರ ಮೊನ್ನೆ ಮೊನ್ನೆಯಷ್ಟೇ ಸುದ್ದಿಯಾಗಿ ಹರಡಿದೆ. ಈ ಸಂಗತಿ ಗೊತ್ತಾದದ್ದೇ ತಡ, ಕನ್ನಡ ಸಿನಿರಂಗದ ಅಭಿನೇತ್ರಿಯೂ ಆದ ಸಂಸದೆ ಸುಮಲತಾ ಅವರು ಈ ಮಹಿಳಾ ಡಿಸ್ಪಿ ಯ ನಿರ್ಧಾರಕ್ಕೆ ಹ್ಯಾಟ್ಸಪ್ ಹೇಳಿದ್ದಾರೆ. ಈ ಬಗ್ಗೆ ಫೇಸ್ಬುಕ್’ನಲ್ಲಿ ಮೆಚ್ಚುಗೆಯ ಮಾತುಗಳನ್ನು ಅವರು ಹರಿಯಬಿಟ್ಟಿದ್ದಾರೆ.

ಇದನ್ನೂ ಓದಿ..  ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಮುಂಗಡ ಹಣ; ಇಪಿಎಫ್ ವ್ಯವಸ್ಥೆ

Related posts