ಇಲ್ಲಿದೆ ಗುಡ್ ನ್ಯೂಸ್..  ಏಪ್ರಿಲ್ 20ರಿಂದ ನಿರಾಳ.. ನಸುನಗುತ್ತಾ ಸುಳಿವು ನೀಡಿದ ಸಿಎಂ

ಲಾಕ್’ಡೌನ್ ಏಪ್ರಿಲ್ 20ರ ನಂತರ ಸಡಿಲಿಕೆಯಾಗಲಿದೆಯೇ? ಈ ವರೆಗೆ ಗೃಹ ಬಂಧನದಲ್ಲಿರುವ ನಾವು ಏಪ್ರಿಲ್ 20ರ ನಂತರ ಸ್ವತಂತ್ರರೇ? ಹೀಗೆಲ್ಲಾ ಲೆಕ್ಕ ಹಾಕುತ್ತಿರುವವರೇ ಹೆಚ್ಚು ಮಂದಿ. ಆದರೆ ಅಂತಹಾ ಸ್ವಚ್ಚಂದ ವಿಹಾರದ ಕನಸು ತಕ್ಷಣವೇ  ನನಸಾಗುವುದು ಅಸಂಭವ. ಆದರೆ ಇಲ್ಲಿದೆ ಒಂದು ಸಿಹಿ ಸುದ್ದಿ

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಜಾರಿಯಲ್ಲಿರುವ ಲಾಕ್’ಡೌನ್ ಏಪ್ರಿಲ್ 20ರ ನಂತರ ಸಡಿಲಿಕೆಯಾಗಲಿದೆಯೇ? ಎಂಬ ಚರ್ಚೆಗಳು ಸಾಗಿವೆ. ಆದರೆ ಲಾಕ್ಆ’ಡೌನ್ ತೆರವಾಗುವುದಿಲ್ಲ. ಬದಲಾಗಿ ಸ್ವಲ್ಪ ನಿರಾಳವಾಗುವ ರೀತಿಯಲ್ಲಿ ನಿಯಮ ಸಡಿಲವಾಗಲಿದೆ. ಏಪ್ರಿಲ್ ೨೦ ರ ನಂತರ ಲಾಕ್’ಡೌನ್ ಸಡಿಲಿಕೆಯಾಗದಿದ್ದರೂ ವಾಹನ ಸಂಚಾರ ವಿಷಯದಲ್ಲಿ ನಿರ್ಬಂಧ ಕೊಂಚ ಸಡಿಲಿಕೆಯಾಗಲಿದೆ. ಇಂಥದ್ದೊಂದು ಸುಳಿವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ಅಂದರೆ ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನಗಳ ಸಂಚಾರನ್ನಕೆ ಅವಕಾಶ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಕೊರೋನಾ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಕೋವಿಡ್-19 ವೈರಾಣು ಹಾವಳಿಯಿಂದಾಗಿರುವ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಯವರು ಅವಲೋಕನ ನಡೆಸಿದರು. ಮುಂದೆ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಚಿಂತನಮಂಥನ ನಡೆಸಿದರು.

ಈ ಸಂದರ್ಭದಲ್ಲಿ ಈ ವರೆಗಿನ ಸೋಂಕಿತರ ಕುರಿತಾದ ಅಂಕಿ ಅಂಶಗಳನ್ನು ಮುಂದಿಟ್ಟು ಅವಲೋಕನ ನಡೆಸಿದ ಸಿಎಂ, ಈ ವಾರಾಂತ್ಯದ ದಿನದಂದು  ಪಾಸಿಟಿವ್ ಕೇಸ್ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪರಿಸ್ಥಿತಿ ಇನ್ನಷ್ಟು ಸುಧಾರಿಸುವ ಆಶಾವಾದ ವ್ಯಕ್ತಪಡಿಸಿದ ಅವರು, ಮೇ 3ರ ವರೆಗೂ ಲಾಕ್ ಡೌನ್ ಮುಂದುವರಿಯಲಿದೆ ಆದರೆ ಪರಿಸ್ಥಿತಿ ನೋಡಿಕೊಂಡು ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದರು.

ಐಟಿ ವಲಯದಲ್ಲಿ ಶೇ. 30 ರಷ್ಟು ಕೆಲಸಕ್ಕೆ ಅವಕಾಶ ನೀಡಲಾಗುವುದು. ಈ ಉದ್ಯೋಗಿಗಳ ಪೈಕಿ ಕಂಪೆನಿಗಳ ಗುರುತಿನ ಚೀಟಿ ಇದ್ದರೆ ಪಾಸ್ ಆವಶ್ಯಕತೆ ಇರುವುದಿಲ್ಲ. ಆದರೆ ಪಾಸ್ ಇರದ ಕಾರುಗಳ ಬಳಕೆಗೆ ನಿರ್ಬಂಧವಿರಲಿದೆ ಎಂದರು. ಅಷ್ಟೇ ಅಲ್ಲ ಲಾಕ್’ಡೌನ್ ಮುಗಿಯುವವರೆಗೂ ಅಂತರ್ ಜಿಲ್ಲೆಗಳ ನಡುವೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ.. ಜನರಿಗಾಗಿ ವಿವಾಹವನ್ನೇ ಮರೆತ ಕನ್ನಡತಿ ಮಹಿಳಾ DYSP

 

Related posts