ಕೊರೋನಾ ಭೀತಿ ಹಿನ್ನೆಲೆ: ಶಾಲೆಗಳಿಗೆ ಸರ್ಕಾರದ ಸೂಚನೆ

ಬೆಂಗಳೂರು: ಚೀನಾದಲ್ಲಿ ೩ ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೋನಾ ವೈರಸ್ ಭಾರತದಲ್ಲೂ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೋಗ ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅದರಲ್ಲೂ ಶಾಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಸರ್ಕಾರ ಸೂಚಿಸಿದೆ.

ಸೋಂಕು ಹರಡುವುದನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ‌ ಅರಿವು ಮೂಡಿಸಬೇಕೆಂದು ರಾಜ್ಯದ ಶಾಲಾ- ಕಾಲೇಜುಗಳಿಗೆ ಸರ್ಕಾರ ಸೂಚಿಸಿದೆ. ಯಾವುದೇ ವಿದ್ಯಾರ್ಥಿ, ಶಿಕ್ಷಕರು, ಅಥವಾ ಸಿಬ್ಬಂದಿ ಜ್ವರ, ಶೀತ ಅಥವಾ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರೆ ಅಂತಹವರು ಶಾಲೆಗೆ ಹಾಜರಾಗಬಾರದು. ಇಂತಹ ವ್ಯಕ್ತಿಗಳು ಜನನಿಬಿಡ ಪ್ರದೇಶಗಳಿಗೆ ಹೋಗದೆ ಮನೆಯಲ್ಲೇ ಪ್ರತ್ಯೇಕವಾಗಿರಬೇಕು.

ಕೊರೊನಾ ವೈರಸ್‌ಪೀಡಿತ ಪ್ರದೇಶಗಳಿಗೆ ವಿದ್ಯಾರ್ಥಿಗಳನ್ನು ಪಿಕ್ನಿಕ್‌, ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಬಾರದು ಎಂದೂ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

Related posts