ಹಲಸಿನ ಬೀಜದ ಪರೋಟ ತಿಂದಿದ್ದೀರಾ? ‘ಹಸಿವಿಗೂ ಸೂಕ್ತ.. ಆರೋಗ್ಯಯುಕ್ತ’

ಪರೋಟಾಗಳಲ್ಲಿ ಹತ್ತಾರು ವಿಧಗಳಿವೆ. ಆದರೆ ಹಲಸಿನ ಬೀಜದ ಪರೋಟ ತಿಂದಿದ್ದೀರಾ? ಅದರ ಸವಿಯುಂಡಿದ್ದೀರಾ?
ಕೇರಳ ಪರೋಟಾ, ಪನೀರ್ ಪರೋಟ ರೀತಿಯಲ್ಲೇ ಇದ್ದರೂ ಟೇಸ್ಟ್ ಡಿಫರೆಂಟ್.. ಟೆಸ್ಟ್ ಬಗ್ಗೆ ಕೇಳ್ತೀರಾ? ಸ್ವಾದಿಷ್ಟ ತಿಂಡಿ ಬಗ್ಗೆ ಹೇಳೋದೇ ಬೇಡ.. ‘ಹಸಿವಿಗೂ ಸೂಕ್ತ ಮತ್ತು ಆರೋಗ್ಯಯುಕ್ತ’ ಎನ್ನುವುದು ಹಿರಿಯರ ಮಾತು.. ಇಲ್ಲಿದೆ ನೋಡಿ ಹಲಸಿನ ಬೀಜ ಪರೋಟ ಮಾಡುವ ವಿಧಾನ.

ಬೇಕಾದ ಸಾಮಗ್ರಿ:

  • ಹಲಸಿನ ಬೀಜ 50
  • ಈರುಳ್ಳಿ 1
  • ಗೋಧಿಹುಡಿ 3 ಕಪ್
  • ಆಮ್ಚೂರ್ ಅರ್ಧ ಚಮಚ
  • ಕೆಂಪು ಮೆಣಸಿನ ಹುಡಿ ಅರ್ಧ ಚಮಚ
  • ಕೊತ್ತಂಬರಿ ಹುಡಿ ಅರ್ಧ ಚಮಚ
  • ಎಣ್ಣೆ 7-8 ಚಮಚ
  • ಜೀರ 1 ಚಮಚ
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ: 

ಮೊದಲಿಗೆ ಒಂದು ಕುಕ್ಕರ್ ನಲ್ಲಿ ಹಲಸಿನಕಾಯಿ ಬೀಜಕ್ಕೆ ನೀರು ಹಾಕಿ 6-7 ವಿಸಿಲ್ ಬರೆಸಬೇಕು. ನಂತರ ಅದರ ಸಿಪ್ಪೆ ತೆಗೆದು ಚೆನ್ನಾಗಿ ಸ್ಮ್ಯಾಷ್ ಮಾಡಬೇಕು. ಒಂದು ಬಾಣಲೆಯಲ್ಲಿ ಎಣ್ಣೆ , ಜೀರಿಗೆ, ಈರುಳ್ಳಿ ಸ್ವಲ್ಪ ಬಾಡಿದ ನಂತರ ಆಮ್ಚೂರ್, ಕೊತ್ತಂಬರಿ ಹುಡಿ,ಉಪ್ಪು ಹಾಕಿ 2 ನಿಮಿಷ ಕೈ ಆಡಿಸಬೇಕು. ಈ ಮಸಲಾವನ್ನು ಸ್ಮ್ಯಾಷ್ ಮಾಡಿಕೊಂಡದ್ದಕ್ಕೆ ಹಾಕಿ ಚೆನ್ನಾಗಿ ಕಲಸಬೇಕು.
ಒಂದು ಪಾತ್ರೆಗೆ ಸ್ವಲ್ಪ ಉಪ್ಪು , ನೀರು, ಎಣ್ಣೆ ಅಥವಾ ತುಪ್ಪ , ಗೋಧಿಹುಡಿ ಹಾಕಿ ಚಪಾತಿ ಹಿಟ್ಟು ಮಾಡಬೇಕು.
ನಂತರ ಒಂದು ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ ಅದಕ್ಕೆ ಹಲಸಿನಬೀಜದ ಮಿಶ್ರಣವನ್ನು ಹಾಕಿ ಕವರ್ ಮಾಡಿ ಹುಡಿ ಹಾಕಿಕೊಂಡು ಚಪಾತಿ ಲಟ್ಟಿಸುವ ಹಾಗೆ ಲಟ್ಟಿಸಬೇಕು. ಆಮೇಲೆ ಅದನ್ನು ತವಾದಲ್ಲಿ ಎರಡು ಕಡೆಯೂ ತುಪ್ಪ ಅಥವಾ ಎಣ್ಣೆ ಹಾಕಿಕೊಂಡು ಬೇಯಿಸಬೇಕು. ಈಗ ರುಚಿ ರುಚಿಯಾದ ಹಲಸಿನಕಾಯಿ ಬೀಜದ ಪರಾತ ಸಿದ್ಧವಾಗುತ್ತದೆ. ಇದನ್ನು ಮೊಸರು, ಉಪ್ಪಿನಕಾಯಿ ಜೊತೆ ತಿನ್ನಬಹುದು.

ಇದನ್ನೂ ಓದಿ.. ‘ನೀರಕಡ್ಡಿ ತಂಬುಳಿ’ ಆಹ್ಲಾದವೂ ಹೌದು.. ಆರೋಗ್ಯಕರವೂ ಹೌದು..

Related posts