ಮದ್ಯ ಅವಾಂತರ; ನಶೆ ಏರಿಸಿಕೊಂಡ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ರಾಜ್ಯದಲ್ಲಿ ಲಾಕ್’ಡೌನ್ ನಡುವೆಯೂ ಮದ್ಯದಂಗಡಿ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಇದರಿಂದ ಅವಾಂತರಗಳೇ ಹೆಚ್ಚು. ಸರ್ಕಾರ ಆದಾಯ ದೃಷ್ಟಿಯಿಂದ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿದೆ ಎನ್ನಲಾಗುತ್ತಿದೆ. ಈ ನಿರ್ಧಾರದ ಬಗ್ಗೆ ಸಾಮಾಜಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಗೃಹಿಣಿಯರು ತೀವ್ರ ಆಕ್ರೋಶಗೊಂಡಿದ್ದಾರೆ.

ಈ ವರೆಗೂ ಕುಡಿತದಿಂದಾದ ಅನಾಹುತ ಪ್ರಕರಣಗಳಿಗೆ ವಿರಾಮ ಸಿಕ್ಕಿತ್ತು. ಸೋಮವಾರ ಮದ್ಯದಂಗಡಿಗಳು ತೆರೆದಿದ್ದೆ ತಡ, ನಶೆ ಏರಿಸಿಕೊಂಡ ಅನೇಕರು ಬೀದಿ ಹೊರಳಾಡುವ ಸನ್ನಿವೇಶ ಕಂಡುಬಂದಿದೆ. ಅಷ್ಟೇ ಅಲ್ಲ ಮಾರಾಮಾರಿ ಘಟನೆಯೂ ನಡೆದಿದೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸಾ ಠಾಣಾ ವ್ಯಾಪ್ತಿಯಲ್ಲಿ ನಶೆ ಏರಿಸಿಕೊಂಡ ರೌಡಿಶೀಟರ್ ಒಬ್ಬ ತನ್ನ ಸ್ನೀಹಿತನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ಪ್ರಭು ಬಾಗಲಗುಂಟೆ ಎಂಬಾತ ತನ್ನ ಸ್ನೇಹಿತ ಕರಣ್ ಸಿಂಗ್ ಎಂಬಾತನ ಎದೆಗೆ ಚಾಕುನಿಂದ ಇರಿದಿದ್ದಾನೆ. ಗಂಭೀರವಾಗಿ ಇರಿತಕ್ಕೊಳಗಾದ ಆತ ಸಾವನ್ನಪ್ಪಿದ್ದಾನೆ. ಕೊಲೆಯಾದ 25 ವರ್ಷದ ಕರಣ್ ಸಿಂಗ್ ಕೂಡಾ 2017ರಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಆರೋಪ ಎದುರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Related posts