ರಾಜ್ಯದಲ್ಲಿ ನಿನ್ನೆ 19, ಇದೀಗ ಮತ್ತೆ 15.. ಕೊರೋನಾ ಕೇಸ್ ಹೆಚ್ಚಳದ ಹಿಂದಿನ ನಿಗೂಢತೆ ಗೊತ್ತಾ..? 

ಕೊರೋನಾ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇವೆ.. ಭಾನುವಾರ 19 ಹೊಸ ಪ್ರಕರಣಗಳು ವರದಿಯಾಗಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮತ್ತೆ ಕೇಸ್‘ಗಳು ಸೇರಿಕೊಂಡಿವೆ. ಲಾಕ್’ಡೌನ್ ಜಾರಿಯಲ್ಲಿದ್ದರೂ ಸೋಂಕಿತರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚತ್ತಿರುವ ಹಿಂದಿನ ನಿಗೂಢತೆ ಏನೆಂಬುದು ತಿಳಿಯುತ್ತಿಲ್ಲ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಸೋಮವಾರ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ ಮತ್ತೆ 15 ಹೊಸ ಪ್ರಕರಣಗಳು ಪತ್ತೆಯಾಗಿರುವ ಸಂಗತಿ ಗೊತ್ತಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೪೭ಕ್ಕೆ ಏರಿದೆ.

ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ ಕೋವಿಡ್ -19 ಸೋಂಕು ದೃಢ ಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮೂವರು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಬುಲೆಟಿನ್’ನಲ್ಲಿ ಹೇಳಿದೆ.

  • ಧಾರವಾಡದಲ್ಲಿ 4 ಪ್ರಕರಣಗಳು
  • ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ 3 ಪ್ರಕರಣಗಳು
  • ಬೀದರ್ ನಲ್ಲಿ 2 ಪ್ರಕರಣಗಳು
  • ಬಾಗಲಕೋಟೆಯಲ್ಲಿ 1 ಪ್ರಕರಣ 
  • ಬೆಳಗಾವಿಯ ರಾಯಭಾಗದಲ್ಲಿ ೧ ಪ್ರಕರಣ  
  • ದೊಡ್ಡಬಳ್ಳಾಪುರದಲ್ಲಿ 1 ಪ್ರಕರಣ 
  • ಬೆಂಗಳೂರು ನಗರದಲ್ಲಿ 1 ಪ್ರಕರಣ  

ಇದನ್ನೂ ಓದಿ.. ಏ.30ರ ವರೆಗೆ ಲಾಕ್’ಡೌನ್.. ಕೆಲವೆಡೆ ಸೀಲ್’ಡೌನ್? ಪರಿಸರ, ಪರಿಸ್ಥಿತಿ ಹೇಗಿರುತ್ತೆ ಗೊತ್ತಾ?

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ  8ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ 18 ವರ್ಷದ ಯುವಕ ಮತ್ತು 60 ವರ್ಷದ ವೃದ್ಧರೊಬ್ಬರು ಸೋಂಕಿಗೊಳಗಾಗಿದ್ದಾರೆಂಬ ಸಂಗತಿಯನ್ನು ಹೆಲ್ತ್ ಬುಲೆಟಿನ್ ಬೊಟ್ಟುಮಾಡಿದೆ.

ಇನ್ನೊಂದೆಡೆ ಕೊರೋನಾ ಸೋಂಕಿತರ ಪೈಕಿ ಮಾಹಿತಿ ಕಲೆಹಾಕುತ್ತಿರುವ ಪೊಲೀಸರೂ ಸೋಂಕಿಗೊಳಗಾಗುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಭಾನುವಾರ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ಸೋಂಕು ಹರಡಿರುವ ಶಂಕೆ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಅದೇ ರೀತಿಯಲ್ಲಿ ವಿಜಯಪುರದಲ್ಲಿ ಸೋಂಕಿತರ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯಾಚರಣೆ ನಿರತ ಗೋಳಗುಮ್ಮಟ ಠಾಣೆ ಪಿಎಸ್‌ಐ ಮತ್ತು ಒಬ್ಬ ಕಾನ್‌ಸ್ಟೆಬಲ್‌’ರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ.. ಚೀನಾದಲ್ಲಿ ಕೊರೋನಾಗೆ ಸಾವನ್ನಪಿದ್ದು 3,300 ಮಂದಿ? ನಿಜವಾದ ಲೆಕ್ಕ ತಿಳಿದರೆ ಬೆಚ್ಚಿ ಬೀಳೋದು ಖಚಿತ 

 

 

Related posts