40 ಹಾಟ್’ಸ್ಪಾಟ್ ಪ್ರದೇಶ: ದೀನಸಿ ಖರೀದಿಗೂ ಅವಕಾಶ ಸಿಗಲ್ಲ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ. ಹಾಗಾಗಿ ಹಾಟ್’ಸ್ಪಾಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ವಾರ್ಡ್’ಗಳಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡುವ ಪ್ಲಾನ್ ಸಾಗಿದೆ. ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರಬಾರದಂತೆ ನಿಗಾ ವಹಿಸಲು ಯೋಜನೆ ರೂಪಿಸಲಾಗುತ್ತಿದೆ.

ಬೆಂಗಳೂರು: ಈ ವರೆಗೂ ಎಲ್ಲಾ ವಿಚಾರಗಳಲ್ಲೂ ಉದ್ಯಾನ ನಗರಿ ಬೆಂಗಳೂರು ಸೇಫ್ ಎಂದೇ ಗುರುತಾಗಿತ್ತು.  ಆದರೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಅಬ್ಬರದಿಂದಾಗಿ ಬೆಂಗಳೂರು ಸುರಕ್ಷಿತ ಅಲ್ಲ ಎಂಬ ಭಾವನೆ ಮೂಡಿದೆ. ಕರ್ನಾಟಕದಲ್ಲಿನ ಕೊರೋನಾ ಸೋಂಕಿತರ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹಾಟ್’ಸ್ಪಾಟ್ ಸಂಖ್ಯೆಯೂ ಬೆಂಗಳೂರಲ್ಲೇ ಹೆಚ್ಚು. ಹಾಗಾಗಿ ರಾಜಧಾನಿಯಲ್ಲಿ ಹೆಚ್ಚು ನಿಗಾ ವಹಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ 80 ಕೊರೊನಾ ಕೇಸ್ ದಾಖಲಾಗಿದೆ. ಹಾಗಾಗಿ ಕೋವಿಡ್-19 ಸೋಂಕು ಪತ್ತೆಯಾಗಿರುವ  ಬೆಂಗಳೂರಿನ 40 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಲಾಗಿದೆ. ಈ ವಾರ್ಡ್‌ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರಬಾರದಂತೆ ನಿಗಾ ವಹಿಸಲು ಯೋಜನೆ ರೂಪಿಸಲಾಗುತ್ತಿದೆ.

ಹಾಟ್’ಸ್ಪಾಟ್ ಪ್ರದೇಶ ಹಾಗೂ ಬಿಬಿಎಂಪಿ ವಾರ್ಡುಗಳು:

 • ಜೆ.ಪಿ.ನಗರ – 4 ಕೇಸ್
 • ಶಾಕಂಬರಿನಗರ – 3 ಕೇಸ್
 • ಬಾಪೂಜಿನಗರ – 2 ಕೇಸ್
 • ಮಡಿವಾಳ – 2 ಕೇಸ್
 • ಗಿರಿನಗರ – 1 ಕೇಸ್
 • ಆಡುಗೋಡಿ – 1 ಕೇಸ್
 • ಸುದ್ದುಗುಂಟೆಪಾಳ್ಯ – 1 ಕೇಸ್
 • ಹೊಸಹಳ್ಳಿ – 1 ಕೇಸ್
 • ಸುಧಾಮನಗರ – 1 ಕೇಸ್
 • ಅತ್ತಿಕುಪ್ಪೆ – 1 ಕೇಸ್
 • ಕರಿಸಂದ್ರ – 1 ಕೇಸ್
 • ವಸಂತನಗರ – 2 ಕೇಸ್
 • ಗಂಗಾನಗರ – 1 ಕೇಸ್
 • ಲಿಂಗರಾಜಪುರ – 1 ಕೇಸ್
 • ಜೀವನ್ ಭೀಮಾನಗರ – 2 ಕೇಸ್
 • ರಾಧಕೃಷ್ಣ ಟೆಂಪಲ್ – 4 ಕೇಸ್
 • ಸಿ.ವಿ ರಾಮನ್ ನಗರ – 1 ಕೇಸ್
 • ರಾಮಸ್ವಾಮಿ ಪಾಳ್ಯ – 1 ಕೇಸ್
 • ಮಾರುತಿಸೇವಾ ನಗರ – 1 ಕೇಸ್
 • ಸಂಪಗಿರಾಮ ನಗರ
 • ಅರಮನೆನಗರ – 3 ಕೇಸ್
 • ನಾಗರಭಾವಿ – 1 ಕೇಸ್
 • ನಾಗಪುರ – 1 ಕೇಸ್
 • ಶಿವನಗರ – 1 ಕೇಸ್
 • ಆಜಾದ್‍ನಗರ – 5 ಕೇಸ್
 • ಜಗಜೀವನ್‍ರಾಮ್ ನಗರ – 1 ಕೇಸ್
 • ಸುಭಾಷ್ ನಗರ
 • ಥಣಿಸಂಧ್ರ – 1 ಕೇಸ್
 • ಬ್ಯಾಟರಾಯನಪುರ – 1 ಕೇಸ್
 • ಸಿಂಗಸಂದ್ರ – 4 ಕೇಸ್
 • ಬೇಗೂರು – 1 ಕೇಸ್
 • ಹೊರಮಾವು – 2 ಕೇಸ್
 • ಹಗದೂರು – 1 ಕೇಸ್
 • ರಾಮಮೂರ್ತಿನಗರ – 1 ಕೇಸ್
 • ಹೂಡಿ – 1 ಕೇಸ್
 • ವರ್ತೂರು – 1 ಕೇಸ್
 • ಗರುಡಾಚಾರ್ ಪಾಳ್ಯ – 1 ಕೇಸ್

ಇದನ್ನೂ ಓದಿ.. ಲಾಕ್’ಡೌನ್; ಪೊಲೀಸ್ ಸೂಚನೆ ಉಲ್ಲಂಘಿಸಿದವರಿಗಿದೆ ಕಾನೂನು ಪ್ರಹಾರ 

 

 

Related posts