ಮುಂಬೈ ಮತ್ತೊಂದು ವುಹಾನ್ ಆಗುತ್ತಾ? ಏನಿದು ಆತಂಕ?

ದೆಹಲಿ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಾಲ್ಕಂಕಿ ದಾಟಿದೆ. ಅದರಲ್ಲೂ ಮಹಾರ್ಷ್ಟ್ರದಲ್ಲಿ ಸುಮಾರು ಎರಡೂವರೆ ಸಾವಿರ ಮಂದಿ ಸೋಂಕಿತರಾಗಿದ್ದಾರೆ. ಅಷ್ಟೇ ಅಲ್ಲ ಮುಂಬೈ ನಗರ ಮತ್ತೊಂದು ವುಹಾನ್ ಆಗಲಿದೆಯೇ ಎಂಬ ಆತಂಕ ಕಾಡಿದೆ.

ದೆಹಲಿ: ಚೀನೀ ವೈರಸ್ ಕೊರೋನಾ ಭಾರತದಲ್ಲಿ ಮರಣ ಮೃದಂಗವನ್ನೇ ಭಾರಿಸುತ್ತಿದೆ. ನಿತ್ಯವೋ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು ಸರ್ಕಾರಕ್ಕೀಗ ಸೋಂಕು ನೀರಾರಿಸುವುದೇ ಚಿಂತೆ. ಅದರಲ್ಲೂ ಮಹಾರಾಷ್ಟ್ರದ ಪರಿಸ್ಥಿತಿ ಹೇಳತೀರದಂತಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಮುಂಬೈ ಮತ್ತೊಂದು ವುಹಾನ್ ಆಗುತ್ತಾ ಎಂಬ ಆತಂಕ ಕಾಡುತ್ತಿದೆ.

ಮಹಾರಾಷ್ಟ್ರ, ದೆಹಲಿಯಲ್ಲಿ ಸದ್ಯ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 350ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟರೆ, ಮಹಾರಾಷ್ಟ್ರದಲ್ಲಿ ಸೋಂಕಿನ ವೇಗ ಮತ್ತಷ್ಟು ಜಾಸ್ತಿ ಇದೆ.

ಹೆಚ್ಚು ಸೋಂಕು ಇರುವ ರಾಜ್ಯಗಳು:

  • ಮಹಾರಾಷ್ಟ್ರ – 2,455 ಕೇಸ್
  • ದೆಹಲಿ – 1,561 ಕೇಸ್
  • ತಮಿಳುನಾಡು – 1,204 ಸೋಂಕಿತರು 
  • ಮಧ್ಯಪ್ರದೇಶ – 741 ಪ್ರಕರಣ 
  • ಗುಜರಾತ್ – 650 ಕೇಸ್

ಈ ನಡುವೆ ಮುಂಬೈ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ತಜ್ಞರು, ಧಾರಾವಿ ಸ್ಲಂನಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದ್ದು, ಇದು ಮತ್ತೊಂದು ವುಹಾನ್ ಆಗುವ ಆತಂಕವಿದೆ ಎನ್ನುತ್ತಿದ್ದಾರೆ.  ಈ ಪರಿಸ್ಥಿತಿ ನಿಯಂತ್ರಣ ಸರ್ಕಾರದ ಕೈಯಲ್ಲಿರುವುದಲ್ಲ. ಬದಲಾಗಿ ಜನರೇ ಸೋಂಕಿನಿಂದ ದೂರ ಇರಲು ಸ್ವಯಂ ಕ್ರಮ ಕೈಗೊಳ್ಳಬೇಕು. ಆದರೆ ಮಹಾರಾಷ್ಟ್ರದಲ್ಲಿ ತದ್ವಿರುದ್ದ ಪ್ರಸಂಗಗಳು ನಡೆದಿವೆ. ಮಂಗಳವಾರ ಲಾಕ್‍ಡೌನ್ ವಿಸ್ತರಿಸಿದ್ದನ್ನು ವಿರೋಧಿಸಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ರೀತಿಯ ಘಟನೆಗಳೇ ಸೋಂಕು ಹೆಚ್ಚಳವಾಗಲು ಕಾರಣವಾಗುತ್ತವೆ ಎಂಬುದು ತಜ್ಞರ ಅಭಿಮತ.

ಇದನ್ನೂ ಓದಿ.. ಕೊರೋನಾ ಸೋಂಕಿತರು ಹತ್ತಿರ ಬಂದರೆ ಅಲಾರ್ಮ್: ಇಲ್ಲಿದೆ ನೋಡಿ ಮೊಬೈಲ್ ಆ್ಯಪ್ ವಿಶೇಷ. 

 

 

Related posts