ಭಾರತದಲ್ಲಿ ಚೀನಾವನ್ನು ಮೀರಿಸಿದ ಕೊರೋನಾ ವೇಗ.. ಮುಂದೇನಾಗುತ್ತೋ..?

ದೆಹಲಿ: ಚೀನಾದಲ್ಲಿ ಸೃಷ್ಟಿಯಾಗಿದ್ದೆನ್ನಲಾದ ಕೊರೋನಾ ವೈರಾಣು ಕೆಂಪು ನಾಡಿಗಿಂತಲೂ ಭಾರತದಲ್ಲಿ ವೇಗವನ್ನು ಹೆಚ್ಚಿಸಿದೆ. ಭಾರತವನ್ನು ಕೋವಿಡ್ – 19 ವೈರಾಣು ಕಂಗಾಲಾಗಿಸಿದ್ದು ಸೋಂಕಿತರ ಹೆಚ್ಚುತ್ತಲೇ ಇವೆ. ದೇಶದಲ್ಲಿ 24 ಗಂಟೆಗಳಲ್ಲಿ 3970 ಮಂದಿಯಲ್ಲಿ ಸೋಂಕು ದೃಢಪಟ್ಟಿರುವ ಬೊಟ್ಟುಮಾಡುವಂತಿದೆ.

ಶುಕ್ರವಾರ ಒಂದೇ ದಿನ 3970 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 85,970ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ ಕೊರೋನಾ ಉಗಮವಾಗಿರುವ ಚೀನಾವನ್ನು ಈ ಸಂಖ್ಯೆ ಹಿಂದಿಕ್ಕಿದೆ ಎಂಬುದು ಕಳವಳಕಾರಿ ಸಂಗತಿ.

ಸೋಂಕಿನ ಸಂಖ್ಯೆಯಷ್ಟೇ ಅಲ್ಲ ಸಾವನ್ನಪಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ವಿವಿಧ ರಾಜ್ಯಗಳಲ್ಲಿ 103 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಸಾವಿನ ಸಂಖ್ಯೆ 2752ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಒಂದು ಸಮಾಧಾನಕರ ಸಂಗತಿ ಅಂದರೆ ಸೋಂಕಿತರು ಚೇತರಿಕೆಯಲ್ಲೂ ವೇಗ ಹೆಚ್ಚಿದೆ. ಈ ವರೆಗೂ ದೇಶದಲ್ಲಿ 30153 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇದನ್ನೂ ಓದಿ.. ಧ್ವನಿವರ್ಧಕದಲ್ಲಿ ಅಜಾನ್ ಬೇಡ; ಮಸೀದಿಗಳಿಗೆ ಕೋರ್ಟ್ ಸೂಚನೆ 

 

Related posts